ಕರೀನಾ ಕಪೂರ್ ಕಮ್ ಬ್ಯಾಕ್ – ಜಪಾನಿ ಲೇಖಕನ ಕೃತಿಗೆ ಮಿಲ್ಕಿ ಬ್ಯೂಟಿ ಹೀರೋಯಿನ್

ಬಾಲಿವುಡ್ ಮಿಲ್ಕಿ ಬ್ಯೂಟಿ ಕರೀನಾ ಕಪೂರ್ ತಮಗೆ ಎರಡನೇ ಮಗುವಾದ ಬಳಿಕ ಬೆಳ್ಳಿಪರದೆಯಿಂದ ದೂರ ಉಳಿದಿದ್ದರು. ಈಗ ಮತ್ತೆ ಬಣ್ಣಹಚ್ಚಲು ಸಿದ್ಧರಾಗಿದ್ದಾರೆ. ಅದು ಓಟಿಟಿ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

ಕರೀನಾ ಕಪೂರ್ ತಮಗೆ ಎರಡನೇ ಮಗು ಜಹಾಂಗೀರ್ ಅಕಾ ಜೆಹ್ ಹುಟ್ಟಿದ ನಂತರ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ ಎಂಬ ಗಾಸಿಪ್ ಕ್ರಿಯೇಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದರೆ ಈಗ ಮತ್ತೆ ಪ್ರೇಕ್ಷರನ್ನು ರಂಜಿಸಲು ಕರೀನಾ ಬರುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಕರೀನಾ ಶೀಘ್ರದಲ್ಲೇ ಸುಜೋಯ್ ಘೋಷ್ ಆಕ್ಷನ್ ಕಟ್ ಹೇಳಲಿರುವ ಚಿತ್ರದಲ್ಲಿ ನಟಿಸಲಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನದ ರಜೆ: ಅಸ್ಸಾಂ ಸಿಎಂ

ಕರೀನಾ ತಮ್ಮ ಮುಂಬರುವ ಪ್ರಾಜೆಕ್ಟ್ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದು, ಹಲವು ಮಾಹಿತಿಗಳನ್ನೂ ಹಂಚಿಕೊಂಡಿದ್ದಾರೆ. ಸ್ಟ್ರೀಟ್ ಎಂಟರ್ಟೈನ್ಮೆಂಟ್ ಮತ್ತು ನಾರ್ದರ್ನ್ ಲೈಟ್ಸ್ ಫಿಲ್ಮ್ಸ್ ಬೌಂಡ್ಸ್ಕ್ರಿಪ್ಟ್ ಮತ್ತು ಕ್ರಾಸ್ ಪಿಕ್ಚರ್ಸ್ ಸಹಯೋಗದೊಂದಿಗೆ ಸುಜೋಯ್ ಘೋಷ್ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಜಯ್ ಶೇವಾಕ್ರಮಿ ಮತ್ತು ಅಕ್ಷಯ್ ಪುರಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಜೈದೀಪ್ ಅಹ್ಲಾವತ್ ಮತ್ತು ವಿಜಯ್ ವರ್ಮಾ ಕಾಣಿಸಿಕೊಳ್ಳುತ್ತಿದ್ದಾರಂತೆ.

ಕರಿನಾ ನಟಿಸುತ್ತಿರುವ ಸಿನಿಮಾ ಜಪಾನಿ ಲೇಖಕ ಕೀಗೊ ಹಿಗಾಶಿನೊ ಅವರ ‘ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್’ ಕೃತಿಯಾಗಿದೆ. ಈ ಸುಜೋಯ್ ಘೋಷ್ ಪರದೆ ಮೇಲೆ ತರಲು ಪ್ರಯತ್ನ ಮಾಡಿದ್ದಾರೆ. ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ.

ಸಿನಿಮಾ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕರೀನಾ, ಜೆಹ್ ಹುಟ್ಟಿದ ನಂತರ ಮತ್ತೆ ನಟಿಸುತ್ತಿದ್ದೇನೆ. ಬಹುದೊಡ್ಡ ತಾರಾಗಣ ಮತ್ತು ಒಳ್ಳೆಯ ಟೀಮ್ ಜೊತೆ ಕೆಲಸ ಮಾಡಲಿರುವ ಕಾರಣ ನಾನು ಉತ್ಸುಕಳಾಗಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದರು.

“ಕೃತಿಯನ್ನು ದೃಶ್ಯ ರೂಪಕ್ಕೆ ತರುತ್ತಿರುವ ಪ್ರಯತ್ನ ವೈಯಕ್ತಿಕವಾಗಿ ನನಗೆ ಖುಷಿ ತಂದಿದೆ. ಈ ಸಿನಿಮಾ ಕೊಲೆ, ಸಸ್ಪೆನ್ಸ್, ಥ್ರಿಲ್ ಮತ್ತು ಇನ್ನೂ ಕುತೂಹಲಕಾರಿ ಅಂಶಗಳನ್ನು ಹೊಂದಿದೆ. ನಮ್ಮ ನಿರ್ದೇಶಕ ಘೋಷ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಲು ನಾನು ಕಾಯುತ್ತಿದ್ದೇನೆ’ ಎನ್ನುತ್ತಾರೆ ಕರೀನಾ. ಇದನ್ನೂ ಓದಿ: ಸಂಜಯ್ ಲೀಲಾ ಬನ್ಸಾಲಿ ಜೊತೆ ಅಲ್ಲು ಅರ್ಜುನ್ ಸಿನಿಮಾ 

ನಿರ್ದೇಶಕರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ ಅವರು, ನಾನು ಘೋಷ್ ಅವರ ಸಿನಿಮಾಗಳನ್ನು ನೋಡಿದ್ದೇನೆ. ಅವರ ಕೆಲಸವನ್ನು ನಾನು ಪ್ರೀತಿಸುತ್ತೇನೆ. ಅವರು ನಿರ್ದೇಶನ ಮಾಡುವುದರಲ್ಲಿ ತಮ್ಮದೇ ಆದ ಶೈಲಿ ಹೊಂದಿದ್ದಾರೆ. ಸಿನಿಮಾದಲ್ಲಿ ಏನೆಲ್ಲ ತೋರಿಸಬೇಕು ಎಂಬುದರ ಬಗ್ಗೆ ತುಂಬಾ ಖಚಿತತೆಯನ್ನು ಅವರು ಹೊಂದಿರುತ್ತಾರೆ .

 

Comments

Leave a Reply

Your email address will not be published. Required fields are marked *