ಮಾಜಿ ಪತಿ ಕಿರುಕುಳಕ್ಕೆ ಪೊಲೀಸ್ ಠಾಣಾ ಮೆಟ್ಟಿಲೇರಿದ IAS ಅಧಿಕಾರಿ

crime

ಲಕ್ನೋ: ಹಿರಿಯ ಐಎಎಸ್ ಅಧಿಕಾರಿ ಶುಭ್ರಾ ಸಕ್ಸೇನಾ ಅವರು ತಮ್ಮ ಮಾಜಿ ಪತಿ ಶಶಾಂಕ್ ಗುಪ್ತಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮಗೂ ಮತ್ತು ತಮ್ಮ ಒಂಬತ್ತು ವರ್ಷದ ಮಗಳಿಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೀಗ ಈ ಸಂಬಂಧ ಬೆದರಿಕೆ, ಮಾನನಷ್ಟ ಮತ್ತು ಐಪಿಸಿಯ ಇತರ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಐಎಎಸ್ ಅಧಿಕಾರಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶಶಾಂಕ್ ಗುಪ್ತಾ ತಮ್ಮ ಎಂಟು ಬೌನ್ಸರ್‌ಗಳನ್ನು ನನ್ನನ್ನು ಹಿಂಬಾಲಿಸಿ ನಾವಿರುವ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ನಾನು ಅವರ ಜೊತೆ ಪ್ರತಿಕ್ರಿಯಿಸದೇ ಇದ್ದಿದ್ದರಿಂದ ಡಿಎಂ ನೇಹಾ ಶರ್ಮಾಗೆ ಅವರಿಗೆ ಶಶಾಂಕ್ ಕರೆ ಮಾಡಿ ನಿಂದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಿನ್ನದ ನಾಡಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರಾ ಸಿದ್ದರಾಮಯ್ಯ..?

2003ರಲ್ಲಿ ಶುಭ್ರಾ ಸಕ್ಸೇನಾ ಮತ್ತು ಶಶಾಂಕ್ ವಿವಾಹವಾದರು. ಈ ದಂಪತಿ 9 ವರ್ಷದ ಮಗಳನ್ನು ಹೊಂದಿದ್ದಾರೆ. ಶಶಾಂಕ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದರಿಂದ 2020ರಲ್ಲಿ ವಿಚ್ಛೇದನ ಪಡೆದಿರುವುದಾಗಿ ಶುಭ್ರಾ ಸಕ್ಸೇನಾ ತಿಳಿಸಿದ್ದಾರೆ. ವಿಚ್ಛೇದನದ ನಂತರ ಶಶಾಂಕ್ ಗುಪ್ತಾ ತನ್ನ ಮಗಳನ್ನು ಹಿಂಬಾಲಿಸಲು ಮತ್ತು ಬೆದರಿಕೆ ಹಾಕಲು ಪ್ರಾರಂಭಿಸಿದರು. ಮಗಳನ್ನು ಭೇಟಿಯಾಗುವ ಹಕ್ಕಿನ ಬಗ್ಗೆ ದಂಪತಿ ನಡುವೆ ಜಗಳವೂ ನಡೆಯುತ್ತಿದೆ.

ಸಕ್ಸೇನಾ ಅವರು ಸುಶಾಂತ್ ಗಾಲ್ಫ್ ಸಿಟಿಯ ಲಕ್ನೋದ ಗೋಮತಿ ನಗರದ ಸೆಲೆಬ್ರಿಟಿ ಗ್ರೀನ್ಸ್‍ನ ನಿವಾಸಿಯಾಗಿದ್ದಾರೆ. ಎರಡು ತಿಂಗಳ ಹಿಂದೆ ಶಶಾಂಕ್ ಗುಪ್ತಾ ಶುಭ್ರಾ ಸಕ್ಸೇನಾ ಅವರ ನಿವಾಸಕ್ಕೆ ಬಂದು ಆಕೆಯನ್ನು ಹೆದರಿಸಲು ಯತ್ನಿಸಿದ್ದಾರೆ. ಹೀಗಾಗಿ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *