ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಮಾಡಿ- ನೆಟ್ಟಿಗರ ಆಗ್ರಹ

ಭಾರತೀಯರು ಇದು ಇಲ್ಲದೆ ಅಡುಗೆ ಮಾಡಲು ಸಾಧ್ಯವಾಗದ ಒಂದು ಮೂಲಿಕೆ ಎಂದು ಇದ್ದರೆ ಅದು ಕೊತ್ತಂಬರಿ (ದನಿಯಾ) ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೆಚ್ಚಿನವರು ಎಲ್ಲಾ ಆಹಾರಗಳಿಗೂ ಕೊತ್ತಂಬರಿ ಸೊಪ್ಪು ಬಳಕೆ ಮಾಡುವುದನ್ನು ಇಷ್ಟ ಪಡುತ್ತಾರೆ. ಇದೀಗ ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಮಾಡಲು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹ ಹೆಚ್ಚಾಗಿದೆ.

ಈಗ ಜನಪ್ರಿಯ ಬಾಣಸಿಗರೊಬ್ಬರು ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಎಂದು ಗೊತ್ತುಪಡಿಸಲು ಅರ್ಜಿಯನ್ನು ಪ್ರಾರಂಭಿಸಿದ್ದಾರೆ. ಬಾಣಸಿಗನ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುವುದರ ಜೊತೆಗೆ ತಮ್ಮ ಅಭಿಪ್ರಾಯವನ್ನು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಗು ಹುಟ್ಟಿದ ಸಂಭ್ರಮದ ಮಧ್ಯೆ ಬೇರ್ಪಟ್ಟ ಎಲೋನ್ ಮಸ್ಕ್ ಜೋಡಿ

 

View this post on Instagram

 

A post shared by Ranveer Brar (@ranveer.brar)

ದನಿಯಾ ಮೇಲಿನ ನನ್ನ ಪ್ರೀತಿ ರಹಸ್ಯವಾಗಿಲ್ಲ. ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಮಾಡಬೇಕು ಎನ್ನುವ ಪೋಸ್ಟ್ ಆಗಿ ಪ್ರಾರಂಭವಾದದ್ದು, ವಾಸ್ತವವಾಗಿ ರಾಷ್ಟ್ರೀಯ ಚರ್ಚೆಯ ವಿಷಯವಾಗಿದೆ. ನೀವು ಸಹ ಸೇರಲು ಬಯಸಿದರೆ, ಅರ್ಜಿಗೆ ಸಹಿ ಮಾಡಿ ಮತ್ತು ಅದನ್ನು ಹಂಚಿಕೊಳ್ಳಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಭಾರತದ ಅತ್ಯಂತ ಪ್ರೀತಿಯ ಮೂಲಿಕೆ ದನಿಯಾ ಎಂಬ ಶೀರ್ಷಿಕೆ ಅಡಿಯಲ್ಲಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ, 11, 300ಕ್ಕೂ ಹೆಚ್ಚು ಜನರು ಅರ್ಜಿಗೆ ಸಹಿ ಹಾಕಿದ್ದಾರೆ.

ಸುವಾಸನೆ ಮಾತ್ರವಲ್ಲ, ಕೊತ್ತಂಬರಿಯು ಸೂಪರ್‌ ಆಹಾರ ಕೂಡ ಆಗಿದೆ. ಇದು ಆಂಟಿಮೈಕ್ರೊಬಿಯಲ್, ಆಂಟಿ-ಆಕ್ಸಿಡೆಂಟ್, ಆಂಟಿ-ಡಯಾಬಿಟಿಕ್, ಆಂಜಿಯೋಲೈಟಿಕ್, ಆಂಟಿಮ್ಯುಟಾಜೆನಿಕ್, ಆಂಟಿ-ಇನ್ಫ್ಲಮೇಟರಿ, ಆಂಟಿಡಿಸ್ಲಿಪಿಡೆಮಿಕ್, ಆಂಟಿ-ಹೈಪರ್ಟೆನ್ಸಿವ್, ನ್ಯೂರೋ ಅಂಶಗಳನ್ನು ಹೊಂದಿದೆ. ಇದು ಮಧುಮೇಹವನ್ನು ನಿಯಂತ್ರಿಸಲು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

Comments

Leave a Reply

Your email address will not be published. Required fields are marked *