ಸಾಂಬಾರ್‌ಗೆ 100 ರೂ. ಯಾಕೆ?- ಗ್ರಾಹಕನನ್ನು ಕೋಣೆಯಲ್ಲಿ ಕೂಡಿಹಾಕಿದ ಹೋಟೆಲ್ ಮಾಲೀಕ

ತಿರುವನಂತಪುರಂ: ಕೆಲವೊಮ್ಮೆ ಯಾವುದೇ ತಪ್ಪು ಮಾಡದಿದ್ದರು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇಲ್ಲೋಬ್ಬ ಪ್ರವಾಸಿಗ ಸಾಂಬಾರ್‌ಗೆ  ಯಾಕ್ರಿ ನೂರು ರೂಪಾಯಿ? ಎಂದು ಕೇಳಿದ್ದಕ್ಕೆ ಹೋಟೆಲ್ ಮಾಲೀಕ ಆತನನ್ನು ಕೋಣೆಯಲ್ಲಿ ಕೂಡಿಹಾಕಿದ ಘಟನೆ ಕೇರಳದಲ್ಲಿ ನಡೆದಿದೆ.

ನಡೆದಿದ್ದೇನು?: ಪ್ರವಾಸಿಗನೋರ್ವ ಬೆಳಗ್ಗಿನ ಉಪಹಾರಕ್ಕೆ ಹೋಟೆಲ್‍ಗೆ ಬಂದಿದ್ದಾನೆ. ಈ ವೇಳೆ ಮಾಲೀಕ ದೋಸೆ ಸಾಂಬಾರ್ ನೀಡಿದ್ದ. ಸಾಂಬಾರ್‍ಗೆ ಪ್ರತ್ಯೇಕವಾಗಿ 100 ರೂಪಾಯಿ ಹಾಕಿ ಬಿಲ್ ಕೊಟ್ಟಿದ್ದನು. ಸಾಂಬಾರ್‌ಗೆ ಯಾಕೆ 100 ರೂಪಾಯಿ ಬಿಲ್ ಹಾಕಿದ್ದೀರಾ? ಎಂದು ಪ್ರವಾಸಿಗ ಪ್ರಶ್ನೆ ಮಾಡಿದ್ದಾನೆ. ಕೋಪಗೊಂಡ ಹೋಟೆಲ್‍ನ ಮಾಲೀಕ, ಪ್ರವಾಸಿಗನನ್ನು ರೂಮ್‍ನಲ್ಲಿ ಕೂಡಿ ಹಾಕಿದ್ದಾನೆ.

BRIBE

ಕೇರಳದ ಇಡುಕ್ಕಿ ಜಿಲ್ಲೆಯ ನೆಡುಂಕಂಡಂನಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರೊಬ್ಬರು ಈ ಜಗಳದ ವೀಡಿಯೋ ಮಾಡಿದ್ದಾರೆ. ಮಾಲೀಕ ಪ್ರವಾಸಿಗರೆಲ್ಲರನ್ನು ಕೊಠಡಿಗೆ ಹಾಕಿ ಬೀಗ ಹಾಕಿದರು. ಮಾಹಿತಿ ಪಡೆದ ನೆಡುಂಕಂಡಂ ಪೊಲೀಸರು ಸ್ಥಳಕ್ಕೆ ಧಾವಿಸಿ, ವಿಷಯವನ್ನು ಇತ್ಯರ್ಥ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಮತ್ತು ಹೋಂಸ್ಟೇ ರೆಸಾರ್ಟ್ ಅಸೋಸಿಯೇಶನ್‍ನ ಪದಾಧಿಕಾರಿಗಳು ಉಪಸ್ಥಿತರಿದ್ದರು.  ಇದನ್ನೂ ಓದಿ: ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು

Comments

Leave a Reply

Your email address will not be published. Required fields are marked *