ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪ ಕಾರಣ: ನಾರಾಯಣ ಗೌಡ

ಮಂಡ್ಯ: ಜಿಲ್ಲೆಯಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ ಎಂದು ಸಚಿವ ಕೆ.ಸಿ ನಾರಾಯಣ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಸಿಂಧಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಬಗ್ಗೆ ಗೌರವ ಇದೆ, ಅವರು ಸುಮ್ಮನೆ ಮಾತಾಡೋದು ತಪ್ಪು. ನಿಖಿಲ್ ಚಿಕ್ಕ ರಾಜಕಾರಣಿ ಅವರು, ಕುಮಾರಸ್ವಾಮಿ ಸುಪುತ್ರ. ಪ್ರತಿಯೊಂದು ಮಾಹಿತಿ ಪಡೆದು ಮಾತನಾಡಬೇಕು ಎಂದರು.

ಒಂದೂವರೆ ವರ್ಷ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅವರ ದೊಡ್ಡಪ್ಪನೇ ಎನರ್ಜಿ ಮಿನಿಸ್ಟರ್ ಆಗಿದ್ದರು. ಸಾವಿರಾರು ಸಬ್ ಸ್ಟೇಷನ್ ಕೊಟ್ಟಿದ್ದೇವೆ ಅಂತ ಹೇಳುತ್ತಿದ್ದಾರೆ . ಕೆ.ಆರ್.ಪೇಟೆಗೆ ಒಂದೇ ಒಂದು ಕೊಟ್ಟಿದ್ದಾರಾ..? ಒಂದೇ ಒಂದು ತೋರಿಸಲಿ ಎನರ್ಜಿ ಮಿನಿಸ್ಟರ್ ಆಗಿ ಎಂದು ಸವಾಲೆಸೆದರು. ಇದನ್ನೂ ಓದಿ: ಮೈಸೂರು ವಿವಿಯಿಂದ ಪುನೀತ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್

ಚನ್ನರಾಯಪಟ್ಟಣ ತಾಲೂಕು- ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಹಾಕೊಂಡಿದ್ದಾರೆ. ನಮ್ಮ ತಾಲೂಕಿಗೆ ಎಷ್ಟು ಕೊಟ್ಟಿದ್ದಾರೆ ಅವರ ದೊಡ್ಡಪ್ಪನ್ನೇ ಕೇಳಲಿ ಫಸ್ಟ್. ನಿಖಿಲ್ ಕುಮಾರಸ್ವಾಮಿ ಅವರ ದೊಡ್ಡಪ್ಪನನ್ನ ಕೇಳಲಿ, ಇಲ್ಲ ಮಾಹಿತಿ ಹಕ್ಕಿನಲ್ಲಿ ಕೇಳಲಿ. ಅವರಿಗೆ ವಿಷಯ ಗೊತ್ತಿಲ್ಲ ಪಾಪ. ಅವರ ದೊಡ್ಡಪ್ಪ ಬಂದ ಅನುದಾನವನ್ನ ಹಾಸನಕ್ಕೆ ಹಾಕೊಂಡ್ರು. ಮಂಡ್ಯನ ಖಾಲಿ ಬಿಟ್ರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಾಯಿಗಾಗಿ ಔಷಧಿ ಹುಡುಕುತ್ತಾ ಹೊರಟ ಮಗಳು- ರಷ್ಯಾ ದಾಳಿಗೆ ಬಲಿ

ನಿಖಿಲ್ ಕುಮಾರಸ್ವಾಮಿ ಸೋಲಬೇಕಾದ್ರೆ ಕೆಲಸಗಳು ಕಾರಣ. ಕುಮಾರಸ್ವಾಮಿ ಖಾಲಿ ಪೇಪರ್ ನಲ್ಲಿ ಹೇಳ್ಕೊಂಡು ಬಂದ್ರು, ಇಷ್ಟು ಸಾವಿರ ಕೋಟಿ ಕೊಡ್ತೀವಿ ಅಂತ. ರೇವಣ್ಣ ಅವರು ಲೆಟರ್ ಹೆಡ್ ನಲ್ಲಿ ಹಣ ಹೊಡ್ಕೊಂಡು ಹೋಗಿ ಅವರ ಜಿಲ್ಲೆ ಅಭಿವೃದ್ಧಿ ಮಾಡ್ಕೊಂಡ್ರು. ಅಲ್ಲಿ ಅವರ ಮಗನ ಗೆಲ್ಲಿಸಿಕೊಂಡ್ರು, ನಿಖಿಲ್ ನ ಸೋಲಿಸಿದ್ರು. ಅದಕ್ಕಿಂತ ಪಾಠ ಬೇಕಾ ನಮ್ಮ ನಿಖಿಲ್ ಕುಮಾರಣ್ಣಂಗೆ. ನಿಖಿಲ್ ಸ್ವಲ್ಪ ತಿಳಿದುಕೊಂಡು ಮಾತನಾಡಲಿ ಎಂದು ಸಲಹೆಯಿತ್ತರು.

Comments

Leave a Reply

Your email address will not be published. Required fields are marked *