ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

ಡ್ರಾಮಾ, ಲವ್ ಇನ್ ಮಂಡ್ಯ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನ ಬೆಸ್ಟ್ ಪೇರ್ ಎನಿಸಿಕೊಂಡಿದ್ದ ನೀನಾಸಂ ಸತೀಶ್ ಮತ್ತು ಸಿಂಧು ಲೋಕನಾಥ್ ಎಂಟು ವರ್ಷಗಳಿಂದ ಯಾವುದೇ ಚಿತ್ರದಲ್ಲೂ ಜತೆಯಾಗಿ ನಟಿಸಿರಲಿಲ್ಲ. ಇದೀಗ ಇಬ್ಬರನ್ನೂ ಒಟ್ಟಿಗೆ ನೋಡುವ ಅವಕಾಶ ಅಭಿಮಾನಿಗಳಿಗೆ ಒದಗಿದೆ. ಸತೀಶ್ ಮತ್ತು ಸಿಂಧು ಮತ್ತೆ ಜತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಮನರಂಜನೆ ನೀಡಲಿದ್ದಾರೆ. ಇದನ್ನೂ ಓದಿ : ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

ಡ್ರಾಮಾ ಸಿನಿಮಾದಲ್ಲಿ ಮೂಕಿಯಾಗಿ ನಟಿಸಿದ್ದ ಸಿಂಧು, ಸಿಕ್ಕಾಪಟ್ಟೆ ಮಾತನಾಡುವ ಸತೀಶ್ ಪಾತ್ರವನ್ನು ಇಷ್ಟ ಪಡುತ್ತಾರೆ. ಆನಂತರ ಇಬ್ಬರದ್ದೂ ಒಂದು ಪ್ರತ್ಯೇಕ ಲವ್ ಸ್ಟೋರಿ ಶುರುವಾಗುತ್ತದೆ. ಆ ಪ್ರೀತಿ ಪ್ರೇಕ್ಷಕನಿಗೆ ಸಖತ್ ಇಷ್ಟವಾಗಿತ್ತು. ಆ ರೀತಿಯಲ್ಲಿ ಈ ಇಬ್ಬರೂ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದರು. ಇದನ್ನೂ ಓದಿ : ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

ನಂತರ ಬಂದ ‘ಲವ್ ಇನ್ ಮಂಡ್ಯ’ ಚಿತ್ರಕ್ಕೆ ಸತೀಶ್ ನಾಯಕನಾದರೆ, ಸಿಂಧು ನಾಯಕಿ. ಹಳ್ಳಿ ಸೊಗಡಿನ ಈ ಸಿನಿಮಾದಲ್ಲಿ ಮತ್ತದೆ ತರ್ಲೆ ಪಾತ್ರ ಸತೀಶ್ ಅವರದ್ದು. ಮುಗ್ಧ ಹುಡುಗಿಯಾಗಿ ಸಿಂಧು ಕಾಣಿಸಿಕೊಂಡಿದ್ದರು. ಈ ಸಿನಿಮಾದ ‘ಒಪ್ಕೊಂಡ್ ಬಿಟ್ಳು ಕಣ್ಲಾ’ ಹಾಡಂತೂ ನಿತ್ಯಮಂತ್ರದಂತೆ ಕೇಳಿಸುತ್ತಿತ್ತು. ಅಷ್ಟರ ಮಟ್ಟಿಗೆ ಪಾಪ್ಯುಲರ್ ಆಗಿತ್ತು. ಇದೇ ಸಿನಿಮಾದ ಮತ್ತೊಂದು ಸಾಂಗ್ ‘ಕರೆಂಟು ಹೋದ ಮೇಲೆ’   ಗೀತೆಯಲ್ಲಂತೂ ಇಬ್ಬರೂ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ್ದರು. ಇಬ್ಬರ ಕೆಮೆಸ್ಟ್ರಿ ಕಂಡು ಅಭಿಮಾನಿ ವರ್ಗವೇ ಬೆರಗಾಗಿತ್ತು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

ಆ ನಂತರ ಈ ಜೋಡಿಯ ಸಿನಿಮಾ ಬರಲಿಲ್ಲ. ಇದೀಗ ಕಿರುತೆರೆಯ ಜನಪ್ರಿಯ ಶೋ ‘ಗೋಲ್ಡನ್ ಗ್ಯಾಂಗ್’ ನಲ್ಲಿ ಸಿಂಧು ಮತ್ತು ಸತೀಶ್ ಕಾಣಿಸಿಕೊಂಡಿದ್ದಾರೆ. ತರ್ಲೆ, ತಮಾಷೆಯ ಜತೆ ಜತೆಗೆ ಹಾಡೊಂದಕ್ಕೆ ಹೆಜ್ಜೆಯನ್ನೂ ಹಾಕಿದ್ದರು. ಅಂದಹಾಗೆ ಈ ವಾರ ಲೂಸಿಯಾ ಟೀಮ್ ಕೂಡ ಇವರೊಂದಿಗೆ ಇರಲಿದೆ.

Comments

Leave a Reply

Your email address will not be published. Required fields are marked *