ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು ಕೊಲ್ಲಲು ಮುಂದಾದ ಪತಿ

ಗದಗ: ನಗರದ ಲಾಯನ್ ಸ್ಕೂಲ್ ಪ್ಲೆಗ್ರೌಂಡ್‍ಗೆ ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು, ಪತಿ ಪ್ಲೆಗ್ರೌಂಡ್‍ನಲ್ಲೇ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಅಪೂರ್ವ ಹಲ್ಲೆಗೊಳಗಾದ ಮಹಿಳೆ. ಆರೋಪಿ ಇಜಾಜ್ ಹುಬ್ಬಳ್ಳಿ ಕೌಲಬಜಾರ್ನ‌ ನಿವಾಸಿಯಾಗಿದ್ದಾನೆ. ಸ್ಕೂಟಿ ಕಲೆಯಲು ಹೋದ  ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ.

ಕಾರಣ ಕೌಟುಂಬಿಕ ಕಲಹ: ಜಾತಿ ಧರ್ಮದ ಕಟ್ಟಲೆ ಮೀರಿ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆ ಆಗಿದ್ದರು. ಜೀನವದ ಆಯ್ಕೆಯಲ್ಲಿ ಜಾತಿ ಲೆಕ್ಕಾಚಾರವೇ ಇರಲಿಲ್ಲ. ಒಂದು ಹಂತದಲ್ಲಿ ಮನೆಯವರನ್ನು ಎದುರು ಹಾಕಿಕೊಂಡು ಪತಿಯೇ ಪರದೈವ ಅಂತಾ ಜೀವನ ನಡೆಸುತ್ತಿದ್ದಳು. ದಂಪತಿ ನಡುವೆ ಕೆಲವು ವಿಚಾರವಾಗಿ ಮನಸ್ತಾಪವಿತ್ತು. ಇದನ್ನೂ ಓದಿ: ಮಣಿಪುರದಲ್ಲಿ ಅತಂತ್ರವಿದ್ದರೂ ಬಿಜೆಪಿ ಸರ್ಕಾರ

ಗದಗದಲ್ಲಿ ಅಪೂರ್ವ ಕಾಲೇಜು ಹೋಗುತ್ತಿದ್ದಾಗ ಇಜಾಜ್ ಗದಗನಲ್ಲೇ ಅವರ ಸಂಬಂಧಿಕರ ಮನೆಯಲ್ಲಿದ್ದ. ಗದಗ ಬೆಟಗೇರಿ ಅವಳಿ ನಗರದಲ್ಲಿ ಆಟೋ ಓಡಸ್ಕೊಂಡಿದ್ದ. ಕಾಲೇಜ್‍ಗೆ ಹೋಗುವಾಗ ಆಟೋದಲ್ಲಿ ಓಡಾಡ್ತಾ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿತ್ತು. ಬ್ರಾಹ್ಮಣ ಕುಟುಂಬದವಳಾದ ಅಪೂರ್ವಾ ಕುಟುಂಬದ ವಿರೋಧದ ನಡುವೆಯೂ 2018ರಲ್ಲಿ ಇಜಾಜ್ ನನ್ನ ಮದ್ವೆಯಾಗಿದ್ದಳು. ಅರ್ಫಾಬಾನು ಆಗಿ ಕನ್ವರ್ಟ್ ಕೂಡಾ ಆಗಿದ್ದಳು. ಇದನ್ನೂ ಓದಿ: 22 ವರ್ಷಗಳ ಇತಿಹಾಸದಲ್ಲಿ ಫಸ್ಟ್‌ ಟೈಂ – ಉತ್ತರಾಖಂಡದಲ್ಲಿ ಸತತ ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ

ಮದ್ವೆ ಆದ ಆರಂಭದಲ್ಲಿ ಇಬ್ಬರು ಚೆನ್ನಾಗಿದ್ದರು. ಇಜಾಜ್‍ಗೆ ಇದು 2ನೇ ಮದ್ವೆಯಾಗಿತ್ತು. ಇಜಾಜ್ ಮೊದಲ ಹೆಂಡತಿಗೆ ಮೂರು ಮಕ್ಕಳು. ಮೊದಲ ಹೆಂಡತಿ ವಿಚಾರ ಇಜಾಜ್ ಅಪೂರ್ವಳ ಮುಂದೆ ಗುಟ್ಟಾಗೇ ಇಟ್ಟಿದ್ದ. ಅದ್ಯಾವಾಗ ಅಪೂರ್ವಳಿಗೆ ಗಂಡನ ಅಸಲಿಯತ್ತು ಗೋತ್ತಾಯ್ತೊ, ಆಗಿನಿಂದ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಈ ವಿಚಾರವಾಗಿ ಬೇಸತ್ತು ತವರು ಮನೆ ಸೇರಿದ್ದ ಅಪೂರ್ವ, ವಿಚ್ಚೇದನಕ್ಕೆ ಅಪ್ಲೈ ಮಾಡಿದ್ದಳು. ಇದೇ ಕಾರಣಕ್ಕೆ ಇಜಾಜ್ ಬೆಳಗಿನ ಜಾವ ಮಚ್ಚಿನಿಂದ ಹಲ್ಲೆ ಮಾಡಿ ಮುಗಿಸೋ ಪ್ಲಾನ್ ಮಾಡಿದ್ದ. ಸ್ಕೂಟಿ ಕಲಿಯಲೆಂದು ಪ್ಲೇ ಗ್ರೌಂಡ್‍ಗೆ ಹೋದ ವೇಳೆ  ಹಲ್ಲೆ ಮಾಡಿದ್ದಾನೆ.

ಯುವತಿ ಮುಖ, ತಲೆ, ಭುಜ, ಕೈ, ಬೆನ್ನಿನ ಭಾಗ ಹೀಗೆ ಬರೋಬ್ಬರಿ ಸುಮಾರು 22 ಕಡೆಗಳಲ್ಲಿ ಮಚ್ಚು ಬೀಸಿ ವಿಕೃತಿ ಮೆರೆದಿದಾನೆ. ನಂತರ ಸ್ಥಳೀಯರ ಸಹಾಯದಿಂದ ಅಪೂರ್ವಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಅಪೂರ್ವ ಕನ್ವರ್ಟ್ ಆಗಿರೋ ಕಾರಣ, ಮುಸ್ಲಿಂ ಪದ್ಧತಿ ಪಾಲಿಸಬೇಕು, ಬುರ್ಕಾ, ಹಿಜಬ್ ಹಾಕಿಕೊಳ್ಳುವಂತೆ ಒತ್ತಾಯಿಸಿದ್ದನಂತೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಬಂದಿದ್ದ ಹಿಂದೂ ಸಂಘಟನೆ ಕಾರ್ಯಕರ್ತರು, ಇದೊಂದು ಲವ್ ಜಿಹಾದ್ ಪ್ರಕರಣ. ಇಜಾಜ್ ಬಂಧನದ ಜೊತೆಗೆ ಲವ್ ಜಿಹಾದ್ ಹಿಂದಿರುವರನ್ನೂ ಅರೆಸ್ಟ್ ಆಗ್ಬೇಕು ಅಂತಾ ಆಗ್ರಹಿಸಿದ್ದಾರೆ. ಆಸ್ಪತ್ರೆಗೆ ಎಸ್.ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರೋಪಿ ಬಂಧಿಸುವುದಾಗಿ ಭರವಸೆ ನೀಡಿದರು.

Comments

Leave a Reply

Your email address will not be published. Required fields are marked *