ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿ

ಬಿಟೌನ್  ಅಂಗಳದಲ್ಲಿ ಮತ್ತೊಂದು ಜೋಡಿಯ ಪ್ರೇಮ್ ಕಹಾನಿ ಹರಿದಾಡುತ್ತಿದೆ. ಎಂಟು ವರ್ಷಗಳ ಹಿಂದೆ ಸುಸೇನ್ ಖಾನ್ ಅವರಿಂದ ಡಿವೋರ್ಸ್ ಪಡೆದಿರುವ ಹೃತಿಕ್ ರೋಷನ್, ಇದೀಗ ಮತ್ತೋರ್ವ ಹುಡುಗಿಯ ಪ್ರೇಮಬಲೆಗೆ ಸಿಲುಕಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಬರೀ ಕೇಳಿ ಬರುವುದಷ್ಟೇ ಅಲ್ಲ, ಆ ಹುಡುಗಿಯೊಂದಿಗೆ ಡೇಟಿಂಗ್ ಕೂಡ ಮಾಡುತ್ತಿದ್ದಾರೆ ಎನ್ನುವುದು ಹೃತಿಕ್ ಆತ್ಮೀಯರ ಅಭಿಪ್ರಾಯ. ಅದಕ್ಕೆ ಪೂರಕ ಎನ್ನುವಂತೆ ಹೃತಿಕ್ ಮತ್ತು ಆ ಹುಡುಗಿ ಹಲವು ರೆಸ್ಟೋರೆಂಟ್ ಗಳಲ್ಲಿ ಒಟ್ಟೊಟ್ಟಿಗೆ ಪಾರ್ಟಿ ಮಾಡುವುದು ಮತ್ತು ಹೃತಿಕ್ ಮನೆಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದು ಕಾಮನ್ ಆಗಿದೆ. ಇದನ್ನೂ ಓದಿ : ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

ಹೃತಿಕ್ ಸದ್ಯ ಡೇಟಿಂಗ್ ನಲ್ಲಿರುವ ಹುಡುಗಿಯ ಹೆಸರು ಸಬಾ ಆಜಾದ್.  ಹೃತಿಕ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಅವರು ಖಾಸಾ ಗೆಳತಿ. ಈ ಮೂವರು ಕಾಮನ್ ಫ್ರೆಂಡ್ಸ್. ಹಾಗಾಗಿ ಸಬಾ ಮತ್ತು ಹೃತಿಕ್ ಮಧ್ಯೆ ಪ್ರೇಮದ ಹೂವು ಅರಳಿತ್ತು. ಆ ಹೂವನ್ನು ಹಾಗೆಯೇ ಕಾಪಾಡಿಕೊಂಡು ಬಂದಿದ್ದಾರಂತೆ ಹೃತಿಕ್. ಇದನ್ನೂ ಓದಿ : ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರು

ಇವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಅನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳನ್ನು ಕೊಡುತ್ತದೆ ಬಾಲಿವುಡ್. ಇಬ್ಬರೂ ಅನೇಕ ಮದುವೆಗಳಿಗೆ ಒಟ್ಟಿಗೆ ಹೋಗಿದ್ದಾರೆ. ಒಬ್ಬರಿಗೊಬ್ಬರು ಹೊಗಳಿಕೊಂಡಿರುವ ಪೋಸ್ಟ್ ಗಳು ಸೋಷಿಯಲ್ ಮೀಡಿಯಾದಲ್ಲಿವೆ. ಸ್ನೇಹಿತ ಫರ್ಹಾನ್ ಮದುವೆಗೆ ಸಬಾರನ್ನು ಕರೆದುಕೊಂಡು ಹೋಗಿದ್ದ ಹೃತಿಕ್. ಕೆಲ ತಿಂಗಳ ಹಿಂದೆ ಗೋವಾದಲ್ಲೂ ಈ ಜೋಡಿ ಕಾಣಿಸಿಕೊಂಡಿತ್ತು. ಹೀಗೆ ಅವರ ನಡುವಿನ ಪ್ರೇಮಕ್ಕೆ ನೂರಾರು ಕುರುಹುಗಳಿವೆ. ಇದನ್ನೂ ಓದಿ : ಮೆಗಾಸ್ಟಾರ್ ಚಿರಂಜೀವಿ ಹೊಸ ಚಿತ್ರದಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ

ಹಾಗಂತ ತಾವಿಬ್ಬರೂ ಪ್ರೀತಿಸುತ್ತಿರುವುದಾಗಿಯೂ ಯಾರೂ ಹೇಳಿಲ್ಲ. ಡೇಟಿಂಗ್ ವಿಷಯದ ಬಗ್ಗೆ ಮಾತೂ ಆಡಿಲ್ಲ. ಮದುವೆಯ ಬಗ್ಗೆ ಯಾವ ಸುಳಿವೂ ಕೊಟ್ಟಿಲ್ಲ. ಆದರೂ, ರಾಶಿ ರಾಶಿ ಸುದ್ದಿಗಳು ಈ ಪ್ರೇಮಿಗಳ ವಿಷಯದಲ್ಲಿ ಕೇಳಿ ಬಂದಿದ್ದಂತೂ ಸುಳ್ಳಲ್ಲ. ಇದನ್ನೂ ಓದಿ : ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

ಈ ಜೋಡಿಯಬಗ್ಗೆ ಈಗ ಮತ್ತೆ ಹೊಸ ಸುದ್ದಿಯೊಂದು ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಇಬ್ಬರೂ ಸರಳವಾಗಿ ಹಸಮಣೆ ಏರಲಿದ್ದಾರಂತೆ. ಆ ಕುರಿತು ಎರಡೂ ಮನೆಯಲ್ಲೂ ಮಾತುಕತೆ ನಡೆದಿದೆ ಎನ್ನುವಲ್ಲಿಗೆ ಪ್ರೇಮಗೀತೆ ಮುಂದುವರೆದಿದೆ.

Comments

Leave a Reply

Your email address will not be published. Required fields are marked *