ಉಕ್ರೇನ್‌ ಸರ್ಕಾರ ಉರುಳಿಸಲು ಯತ್ನಿಸಿಲ್ಲ: ರಷ್ಯಾ

ಮಾಸ್ಕೋ: ಯುದ್ಧದ ಭೀಕರತೆಗೆ ತತ್ತರಿಸಿರುವ ಉಕ್ರೇನ್‌, ರಷ್ಯಾದ ಎರಡು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದೆ. ಉಕ್ರೇನ್‌ ಸರ್ಕಾರವನ್ನು ಉರುಳಿಸಲು ನಾವು ಪ್ರಯತ್ನಿಸುತ್ತಿಲ್ಲ ಎಂದು ರಷ್ಯಾ ತನ್ನ ದಾಳಿ ಕುರಿತು ಸ್ಪಷ್ಟನೆ ನೀಡಿದೆ.

ಈ ಕುರಿತು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾರಿಯಾ ಜಖರೋವಾ, ಉಕ್ರೇನ್‌ನಲ್ಲಿ ಜೈವಿಕ ಶಸ್ತ್ರಾಸ್ತ್ರಗಳನ್ನು ಯುಎಸ್‌ನಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬುದಕ್ಕೆ ಮಾಸ್ಕೋ ದಾಖಲೆಗಳ ಪುರಾವೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್‍ನ್ನು ತಡೆಯದಿದ್ದರೇ ಯಾರೂ ಸುರಕ್ಷಿತವಾಗಿರಲ್ಲ: ಉಕ್ರೇನ್ ಅಧ್ಯಕ್ಷರ ಪತ್ನಿ

ನಾವು ಶಾಂತಿ, ವೈಜ್ಞಾನಿಕ ಗುರಿಗಳ ಬಗ್ಗೆ ಮಾತನಾಡುತ್ತಿಲ್ಲ. ನೀವು ಅಲ್ಲಿ ಏನು ಮಾಡುತ್ತಿದ್ದೀರಿ? ಶಸ್ತ್ರಾಸ್ತ್ರಗಳ ಅಭಿವೃದ್ಧಿಗಾಗಿ ಯುಎಸ್‌ ರಕ್ಷಣಾ ಇಲಾಖೆಯಿಂದ ಹಣಕಾಸು ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಯುಎಸ್‌ ರಕ್ಷಣಾ ಇಲಾಖೆ ಮತ್ತು ಯುನೈಟೆಡ್‌ ಸ್ಟೇಟ್ಸ್‌ ಅಧ್ಯಕ್ಷೀಯ ಆಡಳಿತವು ಉಕ್ರೇನ್‌ನಲ್ಲಿನ ಕಾರ್ಯಕ್ರಮಗಳ ಬಗ್ಗೆ ಅಧಿಕೃತವಾಗಿ ಜಾಗತಿಕ ಸಮುದಾಯಕ್ಕೆ ವಿವರಿಸಲು ನಿರ್ಬಂಧವನ್ನು ಹೊಂದಿದೆ. ನಾವು ಅದಕ್ಕೆ ಸಂಬಂಧಿಸಿದ ವಿವರಗಳನ್ನು ಕೇಳುತ್ತಿದ್ದೇವೆ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ನಟನ ಸಾವಿನ ಬೆನ್ನಲ್ಲೆ ಅವರ ಕೊನೆಯ ಪೋಸ್ಟ್ ವೈರಲ್

ಆದರೆ, ಜೈವಿಕ ಶಸ್ತ್ರಾಸ್ತ್ರಗಳ ಕುರಿತು ಆರೋಪವನ್ನು ಉಕ್ರೇನ್‌ ಈ ಹಿಂದೆಯೇ ನಿರಾಕರಿಸಿತ್ತು.

Comments

Leave a Reply

Your email address will not be published. Required fields are marked *