ಗಾಂಧೀನಗರ: 15ನೇ ಆವೃತ್ತಿ ಐಪಿಎಲ್ಗೆ ಇನ್ನೇನು ಕೆಲದಿನಗಳಷ್ಟೇ ಭಾಗಿ ಉಳಿದುಕೊಂಡಿದೆ. ಇದೀಗ ಐಪಿಎಲ್ ಸಿದ್ಧತೆಗಾಗಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೂರತ್ನಲ್ಲಿ ಅಭ್ಯಾಸ ಆರಂಭಿಸಿದೆ.

ಸೂರತ್ನಲ್ಲಿ ಕ್ಯಾಂಪ್ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾಯಕ ಧೋನಿ, ಅಂಬಾಟಿ ರಾಯುಡು ಸೇರಿದಂತೆ ಕೆಲ ಆಟಗಾರರು ಮೈದಾನಕ್ಕಿಳಿದಿದ್ದಾರೆ. ಜಡೇಜಾ, ಬ್ರಾವೋ ಸೇರಿದಂತೆ ಕೆಲ ಆಟಗಾರರು ಇನ್ನಷ್ಟೇ ತಂಡ ಸೇರಿಕೊಳ್ಳಬೇಕಾಗಿದೆ. ನಿನ್ನೆ ಸೂರತ್ನಲ್ಲಿ ಅಭ್ಯಾಸ ಆರಂಭಿಸಲು ಚೆನ್ನೈ ತಂಡ ಆಗಮಿಸುತ್ತಿದ್ದಂತೆ ಅಭಿಮಾನಿಗಳು ದಾರಿ ಉದ್ದಕ್ಕೂ ನಿಂತು ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ: ಒಟ್ಟು 65 ದಿನ ಐಪಿಎಲ್ ಕಲರವ – ಆರ್ಸಿಬಿಗೆ ಪಂಜಾಬ್ ಮೊದಲ ಎದುರಾಳಿ
Namma Special 🦁 Footvolley segment is B⚽CK! 🔁#WhistlePodu pic.twitter.com/pXxIe994sG
— Chennai Super Kings (@ChennaiIPL) March 7, 2022
ಧೋನಿ ಯುವ ಆಟಗಾರೊಂದಿಗೆ ಅಭ್ಯಾಸ ಆರಂಭಿಸಿದ್ದು, ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಅಲ್ಲದೇ ಫುಟ್ಬಾಲ್ ಕೂಡ ಆಡಿ ಆಟಗಾರು ಸಂಭ್ರಮಿಸಿದರು. ಈ ವೀಡಿಯೋವನ್ನು ಚೆನ್ನೈ ಸೂಪರ್ಕಿಂಗ್ಸ್ ಫ್ರಾಂಚೈಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಶೇನ್ ವಾರ್ನ್ ಸಾವಿನ ಗುಟ್ಟು ಬಿಚ್ಚಿಟ್ಟ ಪೊಲೀಸರು
𝐴𝑏ℎ𝑎𝑟𝑎 Surat! Those eyes that smile with 💛 give us the joy, everywhere we go! #SingamsInSurat #WhistlePodu 🦁 pic.twitter.com/T8xwHjoqeI
— Chennai Super Kings (@ChennaiIPL) March 7, 2022
ಮಾರ್ಚ್ 26 ರಂದು ಐಪಿಎಲ್ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ತಂಡವನ್ನು ಎದುರಿಸಲಿದೆ. 14ನೇ ಆವೃತ್ತಿ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿತ್ತು. ಫೈನಲ್ನಲ್ಲಿ ಚೆನ್ನೈ ತಂಡ 27 ರನ್ಗಳ ಅಂತರದಿಂದ ಗೆದ್ದು ಚಾಂಪಿಯನ್ ಆಗಿತ್ತು. ಇದನ್ನೂ ಓದಿ: ಶೇನ್ ವಾರ್ನ್ ಕೋಣೆ, ಟವೆಲ್ನಲ್ಲಿ ರಕ್ತದ ಕಣ ಇತ್ತು: ಥಾಯ್ಲೆಂಡ್ ಪೊಲೀಸ್
Shubh Aarambh @ Surat! ✨#SingamsInSurat #WhistlePodu 🦁💛
— Chennai Super Kings (@ChennaiIPL) March 7, 2022
15ನೇ ಆವೃತ್ತಿ ಐಪಿಎಲ್ ಮಾರ್ಚ್ 26 ರಂದು ಐಪಿಎಲ್ ಆರಂಭವಾಗುತ್ತಿದ್ದು, ಮುಂಬೈ ಮತ್ತು ಪುಣೆಯಲ್ಲಿ ಒಟ್ಟು 70 ಲೀಗ್ ಮತ್ತು 4 ಪ್ಲೇ ಆಫ್ ಪಂದ್ಯಗಳು ನಡೆಯಲಿದೆ. ಒಟ್ಟು 65 ದಿನಗಳ ಕಾಲ ಟೂರ್ನಿ ನಡೆಯಲಿದೆ.

Leave a Reply