ಸ್ನೇಹಿತನ ಜೊತೆಗೆ ಹೋಟೆಲ್‍ನಲ್ಲಿ ಉಳಿದಿದ್ದ ಮಹಿಳೆ ಸಾವು- ಗೆಳೆಯ ಸಾಪತ್ತೆ

ತಿರುವನಂತಪುರಂ: ವಿವಾಹಿತ ಸ್ನೇಹಿತನೊಂದಿಗೆ ಹೋಟೆಲ್‍ನಲ್ಲಿ ತಂಗಿದ್ದ ಯುವತಿ ನಿಗೂಢ ಸಾವನ್ನಪ್ಪಿರುವ ಘಟನೆ ನಡೆದಿದೆ.

23 ವರ್ಷದ ಯುವತಿ ಮೃತಳಾಗಿದ್ದಾಳೆ. ಈಕೆ ತಂಪನೂರಿನಲ್ಲಿರುವ ಹೋಟೆಲ್‍ನಲ್ಲಿ ತಂಗಿದ್ದಳು. ಶನಿವಾರ ತಡರಾತ್ರಿ ಹೋಟೆಲ್‍ನ ರೂಮ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಿಗೂಢವಾಗಿ ಮೃತಪಟ್ಟ ಯುವತಿ ಕಟ್ಟಕ್ಕಡ ಸಮೀಪದ ವೀರನಕಾವು ನಿವಾಸಿ ಗಾಯತ್ರಿ ಎಂದು ಗುರುತಿಸಲಾಗಿದ್ದು, ಆಕೆಯ ಜೊತೆಗಿದ್ದ ಪರವೂರು ಮೂಲದ ಪ್ರವೀಣ್ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

ನಡೆದಿದ್ದೇನು?: ಶನಿವಾರ ಮಧ್ಯಾಹ್ನ ಇಬ್ಬರೂ ಹೋಟೆಲ್‍ನಲ್ಲಿ ರೂಂ ಮಾಡಿಕೊಂಡಿದ್ದರು. ಹೋಟೆಲ್ ಸಿಬ್ಬಂದಿಗೆ ಪ್ರವೀಣ್‍ನಿಂದ ಕರೆ ಬಂದಿದ್ದು, ಮಧ್ಯರಾತ್ರಿಯ ವೇಳೆಗೆ ತನ್ನ ಗೆಳತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಹೋಟೆಲ್ ಸಿಬ್ಬಂದಿ ತಕ್ಷಣ ಕೊಠಡಿಯನ್ನು ಪರಿಶೀಲಿಸಿದಾಗ ಬಾಯಿಂದ ನೊರೆ ಬಂದು ಮಹಿಳೆ ಸಾವನ್ನಪ್ಪಿರುವುದು ಕಂಡು ಬಂದಿದೆ. ಅಷ್ಟರಲ್ಲಿ ಆ ವ್ಯಕ್ತಿ ಹೋಟೆಲ್ ನಿಂದ ನಾಪತ್ತೆಯಾಗಿದ್ದಾರೆ. ಇವರಿಬ್ಬರು ನಗರದ ಆಭರಣ ಮಳಿಗೆಯೊಂದರಲ್ಲಿ ಉದ್ಯೋಗಿಗಳಾಗಿದ್ದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ಬರುವ ಸಾಧ್ಯತೆ: ಹೆಚ್‍ಡಿಕೆ

ಮದುವೆಯಾಗಿರುವ ಪ್ರವೀಣ್, ಗಾಯತ್ರಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಪ್ರವೀಣ್ ಕುಟುಂಬದಲ್ಲಿ ಜಗಳವಾಗಿತ್ತು. ಗಾಯತ್ರಿ ವಿಷ ಸೇವಿಸಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Comments

Leave a Reply

Your email address will not be published. Required fields are marked *