ಕೈಕೊಟ್ಟಿತೆ ನ್ಯಾಟೋ- ರಷ್ಯಾ ಬಾಂಬ್‌ ದಾಳಿ ತಡೆಗೆ ಉಕ್ರೇನ್‌ ಮನವಿ ತಿರಸ್ಕಾರ

ಕೀವ್: ರಷ್ಯಾದ ಬಾಂಬ್‌ ದಾಳಿಯನ್ನು ತಡೆಗಟ್ಟಲು ಉಕ್ರೇನ್‌ನಲ್ಲಿ ಹಾರಾಟ ನಿಷೇಧ ವಲಯ ರೂಪಿಸುವಂತೆ ಮಾಡಿದ್ದ ಮನವಿಯನ್ನು ನ್ಯಾಟೋ ತಿರಸ್ಕರಿಸಿದ್ದು, ನ್ಯಾಟೋ ನಿಲುವನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಖಂಡಿಸಿದ್ದಾರೆ.

ಮುಷ್ಕರ, ಸಾವುನೋವುಗಳು ಅನಿವಾರ್ಯವೆಂದು ತಿಳಿದಿದ್ದ ನ್ಯಾಟೋ ಉದ್ದೇಶಪೂರ್ವಕವಾಗಿ ಉಕ್ರೇನ್‌ನ ಆಕಾಶ ವಲಯವನ್ನು ಮುಚ್ಚದಿರಲು ನಿರ್ಧರಿಸಿದೆ ಎಂದು ವೀಡಿಯೋ ಮೂಲಕ ನ್ಯಾಟೋ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಹಿಂತಿರುಗಿದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅನುಮತಿ ನೀಡಿ – ಪ್ರಧಾನಿಗೆ ಐಎಂಎ ಪತ್ರ

ಮೈತ್ರಿಕೂಟದ ನಾಯಕತ್ವವು ಉಕ್ರೇನಿಯನ್‌ ನಗರಗಳು ಮತ್ತು ಹಳ್ಳಿಗಳ ಮೇಲೆ ಮತ್ತಷ್ಟು ಬಾಂಬ್‌ ದಾಳಿಗೆ ಹಸಿರು ನಿಶಾನೆ ತೋರಿಸಿದೆ. ಹಾರಾಟ ನಿಷೇಧ ವಲಯವನ್ನು ಮಾಡಲು ನಿರಾಕರಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಷ್ಯಾದ ಬಾಂಬ್‌ ದಾಳಿ ತಡೆಗಟ್ಟುವ ನಿಟ್ಟಿನಲ್ಲಿ ಉಕ್ರೇನ್‌ನಲ್ಲಿ ಹಾರಾಟ ನಿಷೇಧ ವಲಯ ರೂಪಿಸುವಂತೆ ಉಕ್ರೇನ್‌ ಮನವಿ ಮಾಡಿತ್ತು. ಆದರೆ ನ್ಯಾಟೋ ಇದನ್ನು ತಿರಸ್ಕರಿಸಿತ್ತು. ಆದರೆ ಮತ್ತೊಂದೆಡೆ ರಷ್ಯಾ ತನ್ನ ಯುದ್ಧವನ್ನು ನಿಲ್ಲಿಸದಿದ್ದರೆ ಹೊಸ ನಿರ್ಬಂಧಗಳನ್ನು ವಿಧಿಸುವುದಾಗಿ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳು ಎಚ್ಚರಿಕೆ ನೀಡಿವೆ. ಇದನ್ನೂ ಓದಿ: ತಮ್ಮ ಹಡಗನ್ನೇ ಸ್ಫೋಟಿಸಿಕೊಂಡ ಉಕ್ರೇನ್ ಸೇನೆ!

ಈ ಸಂಘರ್ಷದ ವಿಚಾರವಾಗಿ ಮೈತ್ರಿಕೂಟವು ಮಧ್ಯಪ್ರವೇಶಿಸುವುದಿಲ್ಲ. ಒಂದು ವೇಳೆ ಮಧ್ಯಪ್ರವೇಶಿಸಿದರೆ ವ್ಯಾಪಕ ಸಂಘರ್ಷಕ್ಕೆ ತಿರುಗಬಹುದು ಎಂದು ನ್ಯಾಟೋ ಮುಖ್ಯಸ್ಥ ಜೆನ್ಸ್‌ ಸ್ಟೋಲ್ಟೆನ್‌ಬರ್ಗ್‌ ಅಭಿಪ್ರಾಯಪಟ್ಟಿದ್ದಾರೆ.

ನ್ಯಾಟೋ ಯುದ್ಧ ವಿಮಾನಗಳನ್ನು ಉಕ್ರೇನ್‌ನ ವಾಯುಮಾರ್ಗಕ್ಕೆ ಕಳುಹಿಸುವುದು ಮತ್ತು ರಷ್ಯಾದ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ಹಾರಾಟ ನಿಷೇಧ ವಲಯವನ್ನು ಹೇರಬಹುದು. ಹಾರಾಟ ನಿಷೇಧ ವಲಯ ಕಾರ್ಯಗತಗೊಳಿಸುವುದಕ್ಕೆ ಇರುವುದು ಅದೊಂದೇ ಮಾರ್ಗ ಎಂದು ಸ್ಟೋಲ್ಟೆನ್‌ಬರ್ಗ್‌ ತಿಳಿಸಿದ್ದಾರೆ. ಇದನ್ನೂ ಓದಿ: 16 ಗಂಟೆ ಟ್ರಾನ್‍ನಲ್ಲೇ ನಿಂತುಕೊಂಡೆ ಪ್ರಯಾಣ ಮಾಡಿದ್ದೇವೆ: ನೋವು ಹಂಚಿಕೊಂಡ ವಿದ್ಯಾರ್ಥಿಗಳು!

Comments

Leave a Reply

Your email address will not be published. Required fields are marked *