ಚೊಚ್ಚಲ ಬಜೆಟ್‌ ಮಂಡನೆಗೂ ಮುನ್ನ ದೇಗುಲಗಳಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಇಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಶ್ರೀಕಂಠೇಶ್ವರ ದೇವಸ್ಥಾನ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಅವರು ಸಮಸ್ತ ಕರ್ನಾಟಕದ ಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.

ಬೆಂಗಳೂರಿನ ಆರ್ ಟಿ ನಗರ ನಿವಾಸದ ಬಳಿ ಇರುವ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪೌರ ಕಾರ್ಮಿಕರ ಜೊತೆ ಮಾತನಾಡಿ, ಅವರ ಕುಶಲ ಕ್ಷೇಮ ವಿಚಾರಿಸಿದರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‍ಗೆ ಕೌಂಟ್‍ಡೌನ್

ಇಂದು ಮಧ್ಯಾಹ್ನ 12.30ಕ್ಕೆ ಸಿಎಂ ತಮ್ಮ ಮೊದಲ ಪೂರ್ಣ ಬಜೆಟ್ ಮಂಡಿಸುತ್ತಿದ್ದು, ಹತ್ತು ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ.ಈ ಬಜೆಟ್ ಸಿಎಂಗೂ, ಸರ್ಕಾರಕ್ಕೂ ಸವಾಲಿನ ಬಜೆಟ್ ಆಗಿದೆ. ರೈತಪರ, ಜನಪರ, ಜನಪ್ರಿಯ ಬಜೆಟ್ ಮಾಡುವ ಹುಮ್ಮಸ್ಸಿನಲ್ಲಿರೋ ಸಿಎಂ, ಎಲ್ಲ ವರ್ಗದವರಿಗೆ, ಎಲ್ಲ ವಲಯಗಳಿಗೆ ಮುಟ್ಟುವ ಬಜೆಟ್ ಮಾಡಬೇಕೆಂಬ ಹಂಬಲ ಹೊಂದಿದ್ದಾರೆ. ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಕೃಷಿ, ನೀರಾವರಿ, ಆರೋಗ್ಯ, ಮೂಲ ಸೌಕರ್ಯ, ಪ್ರವಾಸೋದ್ಯಮ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಹಿಂದಿನ ಸರ್ಕಾರಗಳ ವೈದ್ಯಕೀಯ ಶಿಕ್ಷಣ ನೀತಿ ಸರಿಯಿದ್ದಿದ್ದರೆ ನೀವು ವಿದೇಶಗಳಿಗೆ ಹೋಗುತ್ತಿರಲಿಲ್ಲ: ಮೋದಿ

Comments

Leave a Reply

Your email address will not be published. Required fields are marked *