ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

ವಾಷಿಂಗ್ಟನ್: ಉಕ್ರೇನ್, ರಷ್ಯಾ ನಡುವೆ ಯುದ್ಧದಲ್ಲಿ ನಿನ್ನೆ ಅಣುಬಾಂಬ್‍ನ ಚರ್ಚೆ ಆಗಿತ್ತು. ಈ ಬೆನ್ನಲ್ಲೇ, ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಕ್ಲಸ್ಟರ್ ಮತ್ತು ವ್ಯಾಕ್ಯೂಮ್ ಬಾಂಬ್ ಪ್ರಯೋಗಿಸಿದೆ ಎಂದು ಅಮೆರಿಕದಲ್ಲಿರುವ ಉಕ್ರೇನ್ ರಾಯಭಾರಿ ಒಕ್ಸಾನಾ ಮಾರ್ಕರೋವಾ ಗಂಭೀರ ಆರೋಪ ಮಾಡಿದ್ದಾರೆ.

ಏನಿದು ವ್ಯಾಕ್ಯೂಮ್ ಬಾಂಬ್?
ಜಾಗತೀಕವಾಗಿ ಬಲಿಷ್ಠ ಬಾಂಬ್ ಎಂದು ಕರೆಯಲ್ಪಡುವ ಬಾಂಬ್ ವ್ಯಾಕ್ಯೂಮ್ ಬಾಂಬ್. ಇದನ್ನು ಥರ್ಮೋಬಾರಿಕ್ ವೆಪನ್ ಅಂತಲೂ ಕರೆಯಲಾಗುತ್ತದೆ. ಆಕ್ಸಿಜನ್ ಹೈಟೆಂಪರೇಚರ್ ಸ್ಫೋಟಕ ತುಂಬಿರುವ ಬಾಂಬ್ ಇದಾಗಿದ್ದು, ಈ ಬಾಂಬ್ ಸ್ಫೋಟಿಸಿದಾಗ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಸ್ಫೋಟಗೊಂಡರೆ ಅಲ್ಟ್ರಾಸಾನಿಕ್ ಡೇಂಜರಸ್ ತರಂಗಗಳನ್ನು ಹೊರಸೂಸುತ್ತದೆ. ಮನುಷ್ಯರ ದೇಹಗಳನ್ನು ಆವಿಯಾಗಿಸುವ ಸಾಮರ್ಥ್ಯ ಈ ಬಾಂಬ್‍ಗಿದೆ. ದೀರ್ಘಕಾಲ, ಅತಿ ಹೆಚ್ಚು ಸ್ಫೋಟವಾಗುತ್ತದೆ ಮಾರಣಾಂತಿಕ, ವಿನಾಶಕಾರಿ ಬಾಂಬ್ ಎಂಬ ಖ್ಯಾತಿ ವ್ಯಾಕ್ಯೂಮ್ ಬಾಂಬ್‍ಗಿದೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

ವ್ಯಾಕ್ಯೂಮ್ ಬಾಂಬ್ ಸಾಮಾನ್ಯವಾಗಿ 7,100 ಕೆ.ಜಿ ತೂಕ ಇದ್ದು, 300 ಮೀ.ವರೆಗೂ ಭಾರಿ ಹಾನಿ ಉಂಟು ಮಾಡುವ ಸಾಮರ್ಥ್ಯವಿದೆ. ಪರಮಾಣು ರಹಿತ ಅತ್ಯಾಧುನಿಕ ಬಾಂಬ್ ಎಂದು ವ್ಯಾಕ್ಯೂಮ್ ಬಾಂಬ್‍ನ್ನು ಕರೆಯಲಾಗುತ್ತದೆ. 2007ರಲ್ಲಿ ವ್ಯಾಕ್ಯೂಮ್ ಬಾಂಬ್ ಅಭಿವೃದ್ಧಿ ಮಾಡಿದ್ದ ರಷ್ಯಾ. 2016ರಲ್ಲಿ ಸಿರಿಯಾ ಮೇಲೆ ಪ್ರಯೋಗ ಮಾಡಿತ್ತು ಎಂಬ ಆರೋಪ ಇದೆ. ವಿಶ್ವದಲ್ಲೇ ಮೊದಲಿಗೆ ಅಮೆರಿಕ ಈ ಬಾಂಬ್ ತಯಾರಿಸಿತ್ತು. ಇದನ್ನೂ ಓದಿ: ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಮಡಿದ ಕನ್ನಡಿಗನಿಗೆ ಸ್ಯಾಂಡಲ್ ವುಡ್ ಕಣ್ಣೀರು

ಇದೀಗ ಉಕ್ರೇನ್ ಮೇಲೆ ರಷ್ಯಾ, ವ್ಯಾಕ್ಯೊಮ್ ಬಾಂಬ್‍ನ್ನು ನಿರಾಶ್ರಿತರು ಆಶ್ರಯ ಪಡೆದಿರುವ ಶಾಲೆಯೊಂದರ ಮೇಲೆ ದಾಳಿ ನಡೆಸಿದೆ ಎಂದು ಮಾನವ ಹಕ್ಕುಗಳ ಸಂಘ ಆರೋಪಿಸಿದೆ. ಅಲ್ಲದೇ ಉಕ್ರೇನ್ ಸೈನಿಕರ ಮೇಲೆ ಕೂಡ ವ್ಯಾಕ್ಯೂಮ್ ಬಾಂಬ್ ಎಸೆಯಲಾಗಿದ್ದು, ಪುಟಿನ್ ಉಕ್ರೇನ್‍ನನ್ನು ನಾಶ ಪಡಿಸುವ ಉದ್ದೇಶದಿಂದ ಈ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

Comments

Leave a Reply

Your email address will not be published. Required fields are marked *