ಕೀವ್‍ಗೆ ಮುನ್ನುಗ್ಗುತ್ತಿದೆ 64 ಕಿ.ಮೀ ಉದ್ದದ ರಷ್ಯಾ ಸೇನೆ

ಕೀವ್: ರಷ್ಯಾದ ಬೃಹತ್ ಸೇನೆ ಉಕ್ರೇನ್ ರಾಜಧಾನಿ ಕೀವ್ ಕಡೆ ಸಾಗುತ್ತಿರುವ ವಿಷಯ ಉಪಗ್ರಹ ಫೋಟೋಗಳಲ್ಲಿ ಬಹಿರಂಗವಾಗಿದೆ.

ಉಕ್ರೇನ್‍ಗೆ ಬೆದರಿಕೆ ಹಾಕುತ್ತಿರುವ ರಷ್ಯಾದ ಮಿಲಿಟರಿ ಬೆಂಗಾವಲು ಯುದ್ಧ ಪ್ರಾರಂಭಕ್ಕೂ ಮುನ್ನ ಯೋಜಿಸಿದ್ದಕಿಂತ ಭಯಾನಕವಾಗಿರುವುದು ತಿಳಿದುಬರುತ್ತಿದೆ. ರಷ್ಯಾ ಸೇನೆ ಶಸ್ತ್ರಾಸ್ತ್ರ ಹಾಗೂ ಫಿರಂಗಿಗಳನ್ನು ತುಂಬಿರುವ ವಾಹನಗಳಲ್ಲಿ ಉಕ್ರೇನ್ ರಾಜಧಾನಿ ಕೀವ್ ಕಡೆಗೆ ಹೋಗುತ್ತಿರುವುದು ಮುಂದೆ ಭಾರೀ ದೊಡ್ಡ ಅಪಾಯವಾಗುವ ಸಾಧ್ಯತೆ ಇದೆ.

ಈ ಹಿಂದೆ ರಷ್ಯಾ ಬೆಂಗಾವಲು ಪಡೆ 17 ಮೈಲು(27 ಕಿ.ಮೀ) ವ್ಯಾಪಿಸಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅಮೆರಿಕನ್ ಕಂಪನಿ ಮ್ಯಾಕ್ಸರ್ ಉಪಗ್ರಹ ಕ್ಲಿಕ್ಕಿಸಿರುವ ಫೋಟೋಗಳು 40 ಮೈಲಿ(64 ಕಿ.ಮೀ) ಉದ್ದದ ಬೆಂಗಾವಲು ಪಡೆ ಉಕ್ರೇನ್ ರಾಜಧಾನಿಯತ್ತ ಹೋಗುತ್ತಿರುವುದನ್ನು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ತಕ್ಷಣವೇ ಉಕ್ರೇನ್‌ ರಾಜಧಾನಿ ತೊರೆಯಿರಿ: ಭಾರತೀಯರಿಗೆ ರಾಯಭಾರಿ ಕಚೇರಿ ಸೂಚನೆ

ಈ ಉಪಗ್ರಹದ ಚಿತ್ರವನ್ನು ಪ್ರಿಬಸ್ರ್ಕ್‍ನ ಉತ್ತರದ ಆಂಟೋನೋವ್ ವಾಯುನೆಲೆಯಿಂದ ತೆಗೆಯಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ಭಾರೀ ಪ್ರಮಾಣದ ಸೈನ್ಯ ಕೀವ್ ಹಾಗೂ ಇತರ ನಗರಗಳ ಮೇಲೆ ದಾಳಿ ನಡೆಸಿದರೆ ಕಲ್ಪಿಸಲೂ ಸಾಧ್ಯವಾಗದ ಮಟ್ಟಿನಲ್ಲಿ ಮಾರಣ ಹೋಮವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು

ರಷ್ಯಾಗೆ ಹೋಲಿಸಿದರೆ ಉಕ್ರೇನ್‍ನಲ್ಲಿ ಸದ್ಯ ಶಸ್ತ್ರಾಸ್ತ್ರ ಹಾಗೂ ಸೇನಾ ಬಲ ಕಡಿಮೆಯಿರಬಹುದು. ಆದರೂ ಉಕ್ರೇನ್ ದೇಶದ ಮೂರೂ ಕಡೆಯಿಂದ ದಾಳಿಯನ್ನು ಎದುರಿಸುತ್ತಿದ್ದರೂ ಶರಣಾಗತಿಗೆ ಒಪ್ಪುತ್ತಿಲ್ಲ.

Comments

Leave a Reply

Your email address will not be published. Required fields are marked *