ಪ್ರಜೆಗಳನ್ನು ರಕ್ಷಿಸಿ ಭಾರತ ಮಾದರಿಯಾದ್ರೆ, ನಿಮ್ಮ ರಕ್ಷಣೆ ನಿಮ್ಮ ಹೊಣೆ ಎಂದ ಅಮೆರಿಕ..!

ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. 6ನೇ ದಿನ ವಾದ ಇಂದು ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಪರಿಸ್ಥಿತಿ ತೀವ್ರ್ರ ಹದಗಣೆಟ್ಟಿದೆ. ಊಟ, ವಸತಿ ಇಲ್ಲದೆ ಪರದಾಡುವಂತಾದರೆ. ಇತ್ತ ವಿದ್ಯಾಭ್ಯಾಸ ಹಾಗೂ ಇನ್ನಿತರ ಕೆಲಸ ನಿಮಿತ್ತ ಉಕ್ರೇನ್‍ನಲ್ಲಿ ನೆಲೆಸಿರುವವರನ್ನು ಮತ್ತೇ ಅವರ ದೇಶಗಳಿಗೆ ವಾಪಸ್ ಕರೆತರುವುದು ಒಂದು ಚಾಲೆಂಜಿಂಗ್ ಆಗಿದೆ.

ಭಾರತ ಸರ್ಕಾರ ತನ್ನ ನಾಗರಿಕರ ತೆರವು ಕಾರ್ಯಾಚರಣೆಗೆ ಸಾಕಷ್ಟು ಕ್ರಮಕೈಗೊಂಡ ಹೊರತಾಗಿಯೂ ವಿಪಕ್ಷಗಳಿಂದ ಟೀಕೆಗೆ ತುತ್ತಾಗಿದ್ದರೆ, ಇತ್ತ ಅಮೆರಿಕ ಸರ್ಕಾರ ಉಕ್ರೇನ್‍ನಲ್ಲಿ ಸಿಕ್ಕಿ ಬಿದ್ದಿರುವ ತನ್ನ ನಾಗರಿಕರ ತೆರವು ಕಾರ್ಯಾಚರಣೆ ತನ್ನ ಹೊಣೆಯಲ್ಲ ಎಂದು ಹೇಳಿದೆ. ಭಾರತಕ್ಕೆ ಆಪರೇಷನ್ ಗಂಗಾ ಮಿಷನ್ ಅಡಿಯಲ್ಲಿ ಆರನೇ ವಿಮಾನ ಆಗಮಿಸಿದ್ದು, ಕರ್ನಾಟಕದ ಹಲವು ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಗಂಗಾ ಮಿಷನ್ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಎರ್‌ಲಿಫ್ಟ್‌ ಮಾಡಿ ಸುರಕ್ಷೀತವಾಗಿ ಅವರನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಟೂತ್‌ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಳು

ಅಮೆರಿಕ ಹೇಳಿದ್ದೇನು?: ಪರಿಸ್ಥಿತಿ ಸುರಕ್ಷಿತ ಎನಿಸಿದರೆ ಖಾಸಗಿ ಅವಕಾಶಗಳನ್ನು ಬಳಸಿಕೊಂಡು ಉಕ್ರೇನ್ ದೇಶದಿಂದ ಹೊರಬನ್ನಿ. ಸುರಕ್ಷಿತ ಮಾರ್ಗ ಅಪಾಯದ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಬನ್ನಿ. ಪೋಲೆಂಡ್ ಮತ್ತು ಮಾಲ್ಡೋವಾದ ಬಹುತೇಕ ಗಡಿಗಳಲ್ಲಿ ನಾಗರಿಕ ಬಹುದೊಡ್ಡ ಸರದಿ ಇದೆ. ನೀವು ಅಲ್ಲಿ ಸಾಕಷ್ಟು ಸಮಯ ಕಾಯಬೇಕಾಗು ಬರಬಹುದು. ಹೀಗಾಗಿ ಹಂಗೇರಿ, ಸ್ಲೋವಾಕಿಯಾ, ರೊಮೇನಿಯಾ ಗಡಿಗಳ ಮೂಕವಾಗಿ ತೆರಳುವ ಯತ್ನವನ್ನು ಮಾಡಿ. ಆದರೆ ಅಲ್ಲಿ ಹಲವು ಗಂಟೆ ನೀವು ಕಾಯಬೇಕಾಗಬಹುದು ಎಂದು ಅಮೆರಿಕಾದ ಪ್ರಜೆಗಳಿಗೆ ಸಂದೇಶ ರವಾನಿಸಿದೆ. ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!

ಉಕ್ರೇನ್‍ನಲ್ಲಿ ಸಿಕ್ಕಿಬಿದ್ದ ನಿಮ್ಮ ರಕ್ಷಣೆ ನಿಮ್ಮ ಹೊಣೆ. ಪರಿಸ್ಥಿತಿ ನೋಡಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ಪರೋಕ್ಷವಾಗಿ ಸಂದೇಶ ರವಾನಿಸಲಾಗಿದೆ.

Comments

Leave a Reply

Your email address will not be published. Required fields are marked *