ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿ

ಶೂಟಿಂಗ್ ನಿಂದ ಬಿಡುವು ತಗೆದುಕೊಂಡಿರುವ ಹರಿಪ್ರಿಯಾ, ಸದ್ಯ ಟೆಂಪಲ್ ರನ್ ಮಾಡುತ್ತಿದ್ದಾರೆ. ಶಿವರಾತ್ರಿ ದಿನ ಸಾಮಾನ್ಯವಾಗಿ ಹರಿಪ್ರಿಯಾ ಸದ್ಗುರು ಆಶ್ರಮದಲ್ಲಿ ಕಾಲ ಕಳೆಯುತ್ತಿದ್ದರು. ಈ ಬಾರಿ ಅವರು ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ನಂತರ ಪರ್ಯಾಯ ಕೃಷ್ಣಾಪುರ ಮಠದ ದಿವಾನರಾದ ವರದರಾಜ ಆಚಾರ್ ಅವರಿಂದ ಪ್ರಸಾದ ಸ್ವೀಕರಿಸಿದರು.

ಶ್ರೀಕೃಷ್ಣನ ದರ್ಶನ ಪಡೆದ ನಂತರ ಹರಿಪ್ರಿಯಾ ಅಲ್ಲಿರುವ ಆನೆಯೊಂದಿಗೆ ಸ್ವಲ್ಪ ಹೊತ್ತು ಸಮಯ ಕಳೆದಿದ್ದಾರೆ. ಆನೆಯೊಂದಿಗೆ ತೀರಾ ಆತ್ಮಿಯವಾಗಿರುವ ಫೋಟೋಗಳನ್ನು ಅವರು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಧರಿಸಿರುವ ಗೌನ್ ಬೆಲೆಯಷ್ಟು ಗೊತ್ತಾ? ಲಕಲಕ ಹೊಳಿತಿದ್ದಾಳೆ ರವಿಮಾಮನ ಬೆಡಗಿ

ಚಂದನವನ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ಹರಿಪ್ರಿಯಾ ತಮ್ಮ ನಟನೆಯಿಂದ ಸೈ ಎನಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಸಿನಿಮಾದ ನಂತರ ಹರಿಪ್ರಿಯಾ ಮತ್ತೆ ಯಾವ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಈ ಸಮಯವನ್ನು ಅವರು ಪ್ರವಾಸ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಲು ಮೀಸಲಿಟ್ಟಿದ್ದಾರೆ.

‘ವ್ಯಾಪಾರಿ’ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಹರಿಪ್ರಿಯಾ, ನಂತರದ ದಿನಗಳಲ್ಲಿ ಕಲಾತ್ಮಕ ಚಿತ್ರಗಳತ್ತ ವಾಲಿದರು. ಅವರ ನಟನೆಯ ‘ಸೂಜಿದಾರ’, ‘ಅಮೃತಮತಿ’ ಚಿತ್ರಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದವು. ಅದರಲ್ಲೂ ‘ಅಮೃತಮತಿ’ ಚಿತ್ರ ಅವರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಈ ನಟಿ ಚಂದನವನದ ಬಹುತೇಕ ಸ್ಟಾರ್ ನಟರ ಜೊತೆಗೆಗೂ ನಟಿಸಿದ್ದು, ತಮ್ಮ ನೇರ ನುಡಿಯಿಂದ ಹೆಸರುವಾಸಿಯಾಗಿದ್ದಾರೆ. ಇದನ್ನೂ ಓದಿ: ದೇಶ ವಿದೇಶದಲ್ಲಿ ಜೇಮ್ಸ್ ಅಬ್ಬರ ಶುರು – ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್!

Comments

Leave a Reply

Your email address will not be published. Required fields are marked *