ನವರಂಗ್ ಫ್ರೆಂಡ್ಸ್ ಸರ್ಕಲ್‍ನಿಂದ ಸೈನಿಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ

ಮಂಗಳೂರು: ನವರಂಗ್ ಫ್ರೆಂಡ್ಸ್ ಸರ್ಕಲ್ ಇದರ 20ನೇ ವಾರ್ಷಿಕೋತ್ಸವದ ಅಂಗವಾಗಿ ನವರಂಗ್ ಪ್ರೀಮಿಯರ್ ಲೀಗ್-2022 ಕ್ರಿಕೆಟ್ ಪಂದ್ಯಾಟ ಕೃಷ್ಣಾಪುರದ ಚಕ್ರವರ್ತಿ ಮೈದಾನದಲ್ಲಿ ಆರಂಭಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತಾಡಿದ ಸಂಸ್ಥೆಯ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಆಯ್ದ ಆಟಗಾರರ ಆರು ತಂಡಗಳ ಮಧ್ಯೆ ಪಂದ್ಯಾಟ ಜರುಗಲಿದ್ದು ಪ್ರಥಮ ಸ್ಥಾನದಲ್ಲಿ ವಿಜೇತ ತಂಡಕ್ಕೆ 33,333 ರೂ. ನಗದು, ಎನ್‍ಪಿಎಲ್ ಟ್ರೋಫಿ ಹಾಗೂ ದ್ವಿತೀಯ ತಂಡಕ್ಕೆ 22,222 ರೂ. ನಗದು, ಎನ್‍ಪಿಎಲ್ ಟ್ರೋಫಿ ಬಹುಮಾನವಾಗಿ ನೀಡಲಾಗುವುದು ಎಂದರು. ಇದನ್ನೂ ಓದಿ: ರಾಷ್ಟ್ರಿಯ ಮಹಿಳಾ ಸೈನ್ಯಕ್ಕೆ ಮಲ್ಲಮ್ಮಾಜಿ ಹೆಸರಿಡಿ: ವಚನಾನಂದ ಸ್ವಾಮೀಜಿ

ಸಂಸ್ಥೆ ಕಳೆದ 19 ವರ್ಷಗಳಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವು ನೀಡುತ್ತಿದೆ. 15 ಲಕ್ಷ ರೂ.ಗೂ ಹೆಚ್ಚಿನ ಮೊತ್ತವನ್ನು ಅನಾರೋಗ್ಯ ಪೀಡಿತರಿಗೆ ನೆರವಾಗಿ ನೀಡಲಾಗಿದೆ. ಈ ಬಾರಿ ಸ್ಥಳೀಯ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ ಹಾಗೂ ಇಬ್ಬರು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಬಂಕರ್‌ಗಳಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒದ್ದು ಅಪಾರ್ಟ್ಮೆಂಟ್‌ಗೆ ಕಳುಹಿಸುತ್ತಿದ್ದಾರೆ: ವಿದ್ಯಾರ್ಥಿ

ಮನಪಾ ಸದಸ್ಯ ಸಂಶಾದ್ ಅಬೂಬಕರ್, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ, ಪಮ್ಮಿ ಕೊಡಿಯಾಲ್ ಬೈಲ್, ಯಜ್ನೇಶ್ ಕರ್ಕೇರ, ತಿಲಕ್, ಶಿವಪ್ರಸಾದ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಸೈನಿಕ ಲೀಲಾಧರ್ ಕಡಂಬೋಡಿ ಅವರನ್ನು ಸನ್ಮಾನಿಸಲಾಯಿತು.

Comments

Leave a Reply

Your email address will not be published. Required fields are marked *