ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತಾ ದಿನ ಕಳೆಯುತ್ತಿದ್ದೇವೆ: ವಿದ್ಯಾರ್ಥಿಗಳ ಅಳಲು

ಮಡಿಕೇರಿ: ಉಕ್ರೇನ್ ಹಾಗೂ ರಷ್ಯಾ ದೇಶಗಳ ನಡುವೆ ಭೀಕರವಾಗಿ ಯುದ್ಧ ನಡೆಯುತ್ತಿದೆ. ಯುದ್ಧ ಪರಿಣಾಮದಿಂದ ಅಲ್ಲಿನ ಜನರು ತತ್ತರಿಸಿ ಹೋಗುತ್ತಿದ್ದಾರೆ. ಅಲ್ಲದೆ ನಮ್ಮ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಕ್ಕಿಕೊಂಡು ನಲಗುತ್ತಿದ್ದು, ಆಹಾರವಿಲ್ಲದೆ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ ಎಂಬ ಮನಮಿಡಿಯುವ ವೀಡಿಯೋ ಮಾಡಿ ಕಳುಹಿಸಿದ್ದಾರೆ.

ಉಕ್ರೇನ್ ನಲ್ಲಿ ಉನ್ನತ ವ್ಯಾಸಂಗಕ್ಕೆ ಹೋಗಿರುವ ಕನ್ನಡಿಗರು ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಯುದ್ಧದಿಂದ ನಿರ್ಮಾಣವಾಗಿದೆ. ಖಾರ್ಕಿವ್ ನಗರದಲ್ಲಿರುವ ಕೊಡಗಿನ ಕುಶಾಲನಗರದ ಚಂದನ್ ಗೌಡ ಸೇರಿದಂತೆ ರಾಜ್ಯದ ಬೇರೆ-ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಕಟ್ಟಡ ತಳಭಾಗದಲ್ಲಿ ಇದ್ದಾರೆ. ಅವರೆಲ್ಲ ಅಲ್ಲಿನ ಪರಿಸ್ಥಿತಿ ಹಾಗೂ ಅವರಿಗೆ ಆಗುತ್ತಿರುವ ಅನುಭವದ ಬಗ್ಗೆ ವಿವರವಾಗಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯ ವೀಡಿಯೋ ಶೇರ್ ಮಾಡಿದ ಪ್ರಿಯಾಂಕಾ!

ತಮ್ಮ ಪರಿಸ್ಥಿತಿ ಕುರಿತು ಮಾತನಾಡಿದ ವಿದ್ಯಾರ್ಥಿಗಳು, ಕಟ್ಟಡದ ನೆಲ ಮಹಡಿಯಲ್ಲಿರುವ ನಮಗೆ ಸರಿಯಾದ ವಿದ್ಯುತ್, ಆಹಾರ ಇಲ್ಲ. ಇದರಿಂದ ನಮ್ಮ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಇಷ್ಟು ದಿನ ಇದ್ದ ಆಹಾರಗಳನ್ನು ಬಳಸಿಕೊಂಡು ಇದ್ದೆವು. ಆದರೆ ಇದೀಗಾ ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ. ಎಷ್ಟು ದಿನ ಚಾಕೊಲೇಟ್ ತಿನ್ನಲು ಸಾಧ್ಯ. ಗ್ಯಾಸ್ ಸಿಲಿಂಡರ್ ಇರುವ ಕಟ್ಟಡ ಕೆಳಭಾಗದಲ್ಲಿ ನಾವು ಇದ್ದೇವೆ. ಕಟ್ಟಡ ಶೇಕ್ ಅಗುವುದರಿಂದ ಜೀವ ಭಯ ಕಾಡುತ್ತಿದೆ. ಅದಷ್ಟು ಬೇಗಾ ಭಾರತ ಸರ್ಕಾರ ನಮ್ಮನ್ನು ಕರೆಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *