ಬೆಂಗಳೂರು: ಬೆಂಗಳೂರಿನ 8ನೇ ಜೆಎಂಎಫ್ಸಿ ನ್ಯಾಯಾಲಯದಿಂದ ಜಾಮೀನು ಮಂಜೂರು ಆದರೂ ನಟ ಚೇತನ್ ಗೆ ಎರಡು ದಿನಗಳ ಕಾಲ ಬಿಡುಗಡೆ ಭಾಗ್ಯ ಇಲ್ಲ.
ಹೌದು. ಸಮಯಕ್ಕೆ ಸರಿಯಾಗಿ ಶ್ಯೂರಿಟಿ ಒದಗಿಸೋದಕ್ಕೆ ಸಾಧ್ಯವಾಗದ ಕಾರಣ ಚೇತನ್ ಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲ. ಚೇತನ್ ಜೈಲಿನಿಂದ ಹೊರಗಡೆ ಬರಲು ಇನ್ನೂ ಎರಡು ದಿನ ಕಾಲಾವಕಾಶ ಬೇಕು. ಯಾಕೆಂದರೆ ಎರಡು ದಿನ ಕೋರ್ಟ್ ರಜೆ ಇದ್ದು, ಸೋಮವಾರ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ ಜೇಮ್ಸ್ ಹೊಸ ಫೋಟೋಸ್ ನೋಡ್ಬೇಕಾ?

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಬರಹ ಪ್ರಕಟಿಸಿದ ಆರೋಪದಡಿ ಚೇತನ್, ಶೇಷಾದ್ರಿಪುರಂ ಪೊಲೀಸರಿಂದ ಅರೆಸ್ಟ್ ಆಗಿದ್ದರು. ನಂತರ ಅವರಿಗೆ 14 ದಿನಗಳ ಕಾಲ ನ್ಯಾಯಾಂಗಬಂಧನ ವಿಧಿಸಿ ಕೋರ್ಟ್ ಆದೇಶಿಸಿತ್ತು. ಹೀಗಾಗಿ ನಾಲ್ಕು ದಿನಗಳಿಂದ ಚೇತನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು, ಜಾಮೀನಿಗಾಗಿ ಚೇತನ್ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಇಂದು ಬೆಂಗಳೂರಿನ 8ನೇ ಜೆಎಂಎಫ್ಸಿ ನ್ಯಾಯಾಲಯ ಚೇತನ್ಗೆ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಬೇಲ್ ನೀಡಿತ್ತು. ಅಲ್ಲದೇ ತನಿಖೆಗೆ ಸಹಕರಿಸಬೇಕು. ಕೋರ್ಟ್ ವಿಚಾರಣೆಗಳಿಗೆ ಹಾಜರಾಗಬೇಕು ಎಂಬ ಷರತ್ತನ್ನು ವಿಧಿಸಿತ್ತು. ಆದರೆ ಇದೀಗ ಎರಡು ದಿನ ಜೈಲಿನಿಂದ ಬಿಡುಗಡೆ ಭಾಗ್ಯ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳ ರಕ್ಷಣೆ ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ

Leave a Reply