ನವಜಾತ ಶಿಶುಗಳಿಗೂ ಯುದ್ಧದ ಬಿಸಿ – ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆದ ಹಾಲುಗಲ್ಲದ ಕಂದಮ್ಮಗಳು

ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಪರಿಣಾಮ ಆಗ ತಾನೇ ಹುಟ್ಟಿದ ಮಕ್ಕಳು ಕೂಡ ಭಯ ಪಡುವಂತಹ ಪರಿಸ್ಥಿತಿ ಬಂದಿದೆ. ಉಕ್ರೇನ್‍ನಲ್ಲಿ ಹಾಲುಗಲ್ಲದ ಕಂದಮ್ಮಗಳನ್ನು ಹಿಡಿದುಕೊಂಡು ತಾಯಂದಿರುವ ಪ್ರಾಣ ಭಯದಿಂದ ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆದ ದೃಶ್ಯ ಕರುಳು ಹಿಂಡುವಂತಿದೆ.

ರಾತ್ರೋರಾತ್ರಿ ರಷ್ಯಾ ನಡೆಸಿದ ಬಾಂಬ್, ಕ್ಷಿಪಣಿ ದಾಳಿಯಿಂದ ಉಕ್ರೇನ್ ದೇಶ ತತ್ತರಿಸಿ ಹೋಗಿದೆ. ಮೊದಲು ಸೈನಿಕ ಸ್ಥಾವರಗಳನ್ನು ಟಾರ್ಗೆಟ್ ಮಾಡಿದ್ದ ರಷ್ಯಾ ಸೇನೆ ಇದೀಗ ಜನವಸತಿ ಪ್ರದೇಶಗಳ ಮೇಲೆಯೂ ದಾಳಿ ನಡೆಸುತ್ತಿದೆ. ಭಾರೀ ಸಂಖ್ಯೆಯಲ್ಲಿ ಕಟ್ಟಡಗಳು ನಾಶವಾಗಿವೆ. ನೂರಾರು ಸೈನಿಕರು, ಜನಸಾಮಾನ್ಯರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಭೀಕರ ಶಬ್ಧದ ನಡುವೆ ಪ್ರಾಣ ಉಳಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳಿಗೆ ಜನ ಓಡುತ್ತಿದ್ದಾರೆ. ಇದನ್ನೂ ಓದಿ: ಗಡಿ ಪ್ರವೇಶಿಸಿದ ಶಸ್ತ್ರಸಜ್ಜಿತ ರಷ್ಯಾ ಸೈನಿಕನಿಗೆ ಉಕ್ರೇನ್‌ ಮಹಿಳೆ ಛೀಮಾರಿ – ವೀಡಿಯೋ ವೈರಲ್‌

ಕೆಲವರು ನಗರಗಳನ್ನು ಬಿಟ್ಟು ದೇಶದ ಗಡಿಯತ್ತ ತೆರಳುತ್ತಿದ್ದಾರೆ. ಮತ್ತೆ ಕೆಲವರು ಮೆಟ್ರೋ ಸುರಂಗಗಳಲ್ಲಿ, ಮನೆಗಳ ನೆಲಮಹಡಿಗಳಲ್ಲಿ ಅಡಗಿ ಕುಳಿತಿದ್ದಾರೆ. ಅದರಲ್ಲೂ ಹುಟ್ಟಿದ ಮೊದಲ ದಿನವೇ ಹಸುಕೂಸುಗಳನ್ನು ಹಿಡಿದುಕೊಂಡು ತಾಯಂದಿರು ನೆಲಮಹಡಿಯಲ್ಲಿ ಬಂಧಿಯಾಗಿರುವುದು ಆತಂಕ ಮೂಡಿಸಿದೆ. ಈಗ ತಾನೆ ಜಗತ್ತಿಗೆ ಕಾಲಿಟ್ಟ ಪುಟ್ಟ ಕಂದಮ್ಮಗಳ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

https://twitter.com/incrediblind/status/1497069811288797186

ಇತ್ತ ರಷ್ಯಾ ದಾಳಿಗೆ ಉಕ್ರೇನ್ ಸೇನೆ ಕೂಡ ತಿರುಗೇಟು ನೀಡಲು ಪ್ರಯತ್ನಿಸುತ್ತಿದೆ. ರಷ್ಯಾದ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದೆ. ಆದರೆ ಆ ವಿಮಾನ ಕೀವ್‍ನ ಎರಡು ಕಟ್ಟಡಗಳ ಮೇಲೆ ಬಿದ್ದು ಎರಡು ಕಡೆಯೂ ಸಾವು ನೋವು ಉಂಟಾಗಿದೆ. ರಷ್ಯಾದ ಕೆಲವು ಸೈನಿಕರನ್ನು ವಶಕ್ಕೆ ಕೂಡ ಪಡೆದಿದೆ. ರಷ್ಯಾದ 1000ಕ್ಕೂ ಹೆಚ್ಚು ಸೈನಿಕರನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ಇದನ್ನೂ ಓದಿ:  ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

 

Comments

Leave a Reply

Your email address will not be published. Required fields are marked *