ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಿದರೆ ತಪ್ಪೇನು: ಅಮೃತ್ ದೇಸಾಯಿ

ಧಾರವಾಡ: ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಿದರೆ ತಪ್ಪೇನು? ಎಂದು ಧಾರವಾಡ ಬಿಜೆಪಿ ಶಾಸಕ ಅಮೃತ್ ದೇಸಾಯಿ ಪ್ರಶ್ನಿಸಿದ್ದಾರೆ.

ಈಶ್ವರಪ್ಪ ಮುಂದೊಂದು ದಿನ ಕೆಂಪು ಕೋಟೆಯಲ್ಲಿ ಭಗವಾಧ್ವಜ ಹಾರಬಹುದು ಎಂದಿದ್ದಾರೆ. ಅವರು ರಾಷ್ಟ್ರಧ್ವಜ ತೆಗೆಯುತ್ತೇವೆ ಎಂದಿಲ್ಲ. ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಿದರೆ ತಪ್ಪೇನು? ಎಲ್ಲರಿಗೂ ರಾಷ್ಟ್ರಧ್ವಜ ಮುಖ್ಯ. ಈಶ್ವರಪ್ಪ ನೂರಾರು ವರ್ಷಗಳ ಬಳಿಕ ಭಗವಾಧ್ವಜ ಹಾರಬಹುದು ಎಂದಿದ್ದಾರೆ ಎಂದು ಧಾರವಾಡದಲ್ಲಿ ಅಮೃತ್ ದೇಸಾಯಿ ಹೇಳಿಕೆ ನೀಡಿದರು. ಇದನ್ನೂ ಓದಿ: ನಟ ಚೇತನ್ ಗೆ ಷರತ್ತುಬದ್ಧ ಜಾಮೀನು

ಹಿಜಬ್ ವಿವಾದ ಕುರಿತು ಮಾತನಾಡಿದ ದೇಸಾಯಿ, ದೇಶದ ಕಾನೂನು ಗೌರವಿಸುವವರು ಈ ದೇಶದಲ್ಲಿ ಇರಲಿ. ಇಲ್ಲವೇ ದೇಶ ಬಿಟ್ಟು ಹೋಗಲಿ. ಕಳೆದೊಂದು ತಿಂಗಳಿನಿಂದ ಹಿಜಬ್ ವಿವಾದ ಆಗಿದೆ. ಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದರೂ ಕೆಲವರು ಅದನ್ನು ಪಾಲಿಸುತ್ತಿಲ್ಲ ಎಂದರು. ಇದನ್ನೂ ಓದಿ: ಕೋರ್ಟ್ ಮೆಟ್ಟಿಲೇರಿದ ಟಿವಿ ವ್ಯಾಲ್ಯೂಮ್ ವಿವಾದ..!

ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ ಧರಿಸಿಯೇ ತರಗತಿಗೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಕೋರ್ಟ್ ಆದೇಶವನ್ನೇ ಉಲ್ಲಂಘಿಸುವ ಸೊಕ್ಕಿನ ಮಾತು ಆಡುತ್ತಿದ್ದಾರೆ. ಇದಕ್ಕೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

Comments

Leave a Reply

Your email address will not be published. Required fields are marked *