ಮಾರ್ಚ್ 26ಕ್ಕೆ ಐಪಿಎಲ್ ಆರಂಭ ಮೇ 29ಕ್ಕೆ ಫೈನಲ್ – 2 ನಗರಗಳಲ್ಲಿ 70 ಪಂದ್ಯ

ಮುಂಬೈ: 15ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 23 ರಿಂದ ಮೇ 29ರ ವರೆಗೆ ಟೂರ್ನಿ ನಡೆಯಲಿದೆ.

ಟೂರ್ನಿ ಆರಂಭದ ಬಗ್ಗೆ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ನಡುವೆ ಇಂದು ನಡೆದ ಸಭೆಯ ಬಳಿಕ ಪ್ರಮುಖ ನಿರ್ಧಾರಗಳನ್ನು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ. ಒಟ್ಟು 70 ಲೀಗ್ ಪಂದ್ಯಗಳನ್ನು ಮುಂಬೈ ಮತ್ತು ಪುಣೆ ನಗರದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಪ್ಲೇ ಆಫ್ ಪಂದ್ಯಗಳ ಬಗ್ಗೆ ಲೀಗ್ ಬಳಿಕ ತೀರ್ಮಾನಿಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ. ಇದನ್ನೂ ಓದಿ: ಕ್ರಿಕೆಟ್ ದಂತಕಥೆಗಳೊಂದಿಗೆ ಬಾಲಿವುಡ್ ತಾರೆಗಳ ಕ್ರಿಕೆಟ್ ಪಂದ್ಯ

ಮುಂಬೈ ನಗರದಲ್ಲಿರುವ ವಾಂಖೆಡೆ ಸ್ಟೇಡಿಯಂ, ಬ್ರಬೋರ್ನ್ ಕ್ರೀಡಾಂಗಣ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಒಟ್ಟು 55 ಲೀಗ್ ಪಂದ್ಯಗಳು ನಡೆಯಲಿದೆ. ಪುಣೆಯ ಎಮ್‍ಸಿಎ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ 15 ಪಂದ್ಯ ನಡೆಯಲಿದೆ. ಎಲ್ಲಾ ತಂಡಗಳು ತಲಾ 4 ಪಂದ್ಯಗಳನ್ನು ವಾಂಖೆಡೆ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಆಡಲಿದ್ದು, ತಲಾ 3 ಪಂದ್ಯಗಳನ್ನು ಬ್ರಬೋರ್ನ್ ಮತ್ತು ಎಮ್‍ಸಿಎ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಡಲಿದೆ. ಇದನ್ನೂ ಓದಿ: ಇಶಾನ್ ಕಿಶನ್ ವೀರಾವೇಶ – ಲಂಕಾ ದಹನ

ಈ ಬಾರಿ ಟೂರ್ನಿಯಲ್ಲಿ ಒಟ್ಟು 10 ತಂಡಗಳಿದ್ದು, 10 ತಂಡಗಳನ್ನು ತಲಾ 5 ರಂತೆ ಎರಡು ವರ್ಚುವಲ್ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗ್ರೂಪ್-Aನಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಕಾಣಿಸಿಕೊಂಡಿದೆ. ಗ್ರೂಪ್-Bಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಇದೆ.

Comments

Leave a Reply

Your email address will not be published. Required fields are marked *