ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್

Joe Biden

ವಾಷಿಂಗ್‍ಟನ್: ಉಕ್ರೇನ್ ವಿರುದ್ಧದ ದಾಳಿಗೆ ಜಗತ್ತು ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ಇದು ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ಜಟಿಲಗೊಂಡಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿಲ್, ಉಕ್ರೇನ್ ಮೇಲೆ ಯುದ್ಧವನ್ನು ಘೋಷಿಸುತ್ತಿದ್ದಂತೆ ಗುರುವಾರ ಮಾತನಾಡಿದ ಜೋ ಬೈಡೆನ್ ಅವರು, ಉಕ್ರೇನ್ ವಿರುದ್ಧದ ದಾಳಿ ರಷ್ಯಾದ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ರಚೋದಿತ ಮತ್ತು ನ್ಯಾಯ ಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ದೇಶವನ್ನೇ ಮೂರು ಭಾಗ ಮಾಡಿದ ರಷ್ಯಾ

Vladimir Putin

ಗುರುವಾರ ಬೆಳಗ್ಗೆ 9:00 ಗಂಟೆಗೆ ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಾಯಕರೊಂದಿಗೆ ವರ್ಚುವಲ್ ಸಭೆ ನಡೆಸಬೇಕಾಗಿತ್ತು. ಆದರೆ ಸಾರ್ವಜನಿಕರ ಟೀಕೆಗಳಿಂದ ವಾಷಿಂಗ್ಟನ್‍ನ ಶ್ವೇತಭವನದಲ್ಲಿ ಮಧ್ಯಾಹ್ನ ಸಭೆ ಆರಂಭವಾಗಲಿದೆ.

ಮಂಗಳವಾರ ಉಕ್ರೇನ್‍ನ ಡಿಎನ್‍ಆರ್ ಮತ್ತು ಎನ್‍ಎನ್‍ಆರ್ ಎಂದು ಕರೆಯಲ್ಪಡುವ ಡೊನಸ್ಕ್ ಮತ್ತು ಲಂಗಸ್ಕ್ ಪ್ರದೇಶದಲ್ಲಿ ಅಮೆರಿಕದ ಪ್ರಜೆಗಳು ಯಾವುದೇ ಹೊಸ ಹೂಡಿಕೆ, ವ್ಯಾಪಾರ ಮತ್ತು ಹಣಕಾಸು ನೆರವು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಶ್ವೇತಭವನದಲ್ಲಿ ಹೇಳಿದರು. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!

ಬಿಡೆನ್ ಅವರು ರಷ್ಯಾದಿಂದ ಜರ್ಮನಿಗೆ ನಾರ್ಡ್ ಸ್ಟ್ರೀಮ್-2 ನೈಸರ್ಗಿಕ ಅನಿಲ ಪೈಪ್‍ಲೈನ್‍ಗೆ ನಿರ್ಬಂಧಗಳನ್ನು ವಿಧಿಸುವುದಾಗಿ ಬುಧವಾರ ಘೋಷಿಸಿದ್ದಾರೆ. ಇದು ಶಕ್ತಿ-ಸಮೃದ್ಧ ಮಾಸ್ಕೋದ ಅತ್ಯುನ್ನತ ಶಕ್ತಿ ಮತ್ತು ಭೌಗೋಳಿಕ ರಾಜಕೀಯ ಯೋಜನೆಗಳಲ್ಲಿ ಒಂದಾಗಿದೆ. ಜರ್ಮನಿಯು ಈ ಯೋಜನೆ ಮುಂದುವರಿಸುವುದನ್ನು ತಡೆಯುವುದಾಗಿ ಮೊದಲೇ ಘೋಷಿಸಿತ್ತು. ರಷ್ಯಾ ನಡೆಗೆ ಫ್ರಾನ್ಸ್, ಜರ್ಮನಿ ಸೇರಿದಂತೆ ಅನೇಕ ದೇಶಗಳು ವಿರೋಧ ವ್ಯಕ್ತಪಡಿಸಿವೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ: ಪುಟಿನ್ ಅಧಿಕೃತ ಘೋಷಣೆ

Comments

Leave a Reply

Your email address will not be published. Required fields are marked *