ಪಲಾವ್ ತಿಂದು ಏರ್ ಕಂಡೀಷನ್ ಹಾಕಿ ಧರಣಿ ಮಾಡೋದಲ್ಲ: ವಿಶ್ವನಾಥ್

H. Vishwanath

ಬೆಂಗಳೂರು: ಪಲಾವ್ ತಿಂದು ಬಂದು ಏರ್ ಕಂಡೀಷನ್ ನಡುವೆ ಧರಣಿ ಮಾಡುವುದಲ್ಲ. ಬದಲಿಗೆ ಮಹಾತ್ಮ ಗಾಂಧಿ ತರ ಬೀದಿಯಲ್ಲಿ ಪ್ರತಿಭಟನೆ ಮಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರಣಿ, ಚರ್ಚೆಗೆ ಅವಕಾಶ ಇದೆ. ಸಿದ್ದರಾಮಯ್ಯ ಅವರು ನಾಡಿನ ಸಿಎಂ ಆಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಬ್ಬರೂ ವಿವೇಕಕ್ಕೆ ಬೆಲೆ ಕೊಡಬೇಕು. ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿಸಿದ್ದಾರೆ. ಇದು ಉತ್ತಮ ಬೀಡು ಆಗಿದೆ. ಇದಕ್ಕೆ ಬೆಲೆಕೊಡಿ ಎಂದು ಮನವಿ ಮಾಡಿದರು.

ಜೆ.ಪಿ ನಡ್ಡಾ, ಈಶ್ವರಪ್ಪ ಅವರಿಗೆ ತರಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ನವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಸದನದಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿ ಹಾರಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದು ಕಾಂಗ್ರೆಸ್‍ನವರು, ಈಶ್ವರಪ್ಪ ಅವರಲ್ಲ. ಇವರು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಮ್ಮ ರಕ್ಷಣೆ ನೀವು ಮಾಡುತ್ತೀರಾ ಇಲ್ಲ ನಾವೇ ಮಾಡಿಕೊಳ್ಳಬೇಕಾ – ಸರ್ಕಾರಕ್ಕೆ ಸೂಲಿಬೆಲೆ ಪ್ರಶ್ನೆ

ಸಂಸತ್ ಅಧಿವೇಶನ ಪ್ರಾರಂಭವಾದಾಗಿನಿಂದಲೂ ಕಾಂಗ್ರೆಸ್‍ನವರು ಸಚಿವ ಕೆ.ಎಸ್ ಈಶ್ವರಪ್ಪ ಅವರನ್ನು ವಜಾ ಮಾಡುವಂತೆ ವಿಧಾನ ಸೌಧದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಹತ್ತು ದಿನ ನಡೆಯಬೇಕಿದ್ದ ಕಲಾಪ ಇದುವರೆಗೆ ನಡೆದಿದ್ದು ಕೇವಲ ಎರಡು ದಿನ ನಡೆದಿದೆ. 5 ದಿನ ಕಾಂಗ್ರೆಸ್ ಧರಣಿ ಮಾಡಿದೆ. ಇದರಿಂದಾಗಿ ಉಳಿದ ದಿನಗಳಲ್ಲಿ ನಡೆಯಬೇಕಿದ್ದ ಕಲಾಪ ಮುಂದೂಡಲೇಬೇಕಾದ ಪರಿಸ್ಥಿತಿ ನಿರ್ಮಾಣ ಉಂಟಾಗಿದೆ. ಇದನ್ನೂ ಓದಿ: ಈಶ್ವರಪ್ಪನವರಿಗೆ ಹಾಗೂ ಸುಪಾರಿ ಕೊಟ್ಟವರಿಗೆ ಏನೋ ಸಂಬಂಧ ಇದೆ: ಎಸ್‍ಡಿಪಿಐ

Comments

Leave a Reply

Your email address will not be published. Required fields are marked *