ಬಡ್ಡೀಸ್ ಚಿತ್ರಕ್ಕೆ ಯುಎಸ್ಎ ಕ್ಯಾಮೆರಾವುಮೆನ್ : ಇವರು ಎಮ್ಮಿ ಅವಾರ್ಡ್ ನಾಮಿನೇಟರ್

ಕಿರುತೆರೆಯ ಮೂಲಕ ಅಪಾರ ಅಭಿಮಾನಿಗಳ ಹೊಂದಿರುವ ನಟ ಕಿರಣ್ ರಾಜ್ ಇದೀಗ ‘ಬಡ್ಡೀಸ್’ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದು, ಯು.ಎಸ್.ಎ ವಾಸಿ‌ ನಿಭಾ ಶೆಟ್ಟಿ‌ ಈ ಚಿತ್ರದ ಮೂಲಕ ಸಿನಿಮಾಟೋಗ್ರಾಫರ್ ಆಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ಅಲ್ಲಿನ ಸಿನಿಮಾಗಳಿಗೆ ಹಾಗೂ ಜಾಹೀರಾತು ಚಿತ್ರಗಳಿಗೆ ಈಗಾಗಲೇ ನಿಭಾ ಶೆಟ್ಟಿ ಕೆಲಸ ಮಾಡಿದ್ದು, ಇವರು ಪ್ರತಿಷ್ಠಿತ ಎಮ್ಮಿ ಅವಾರ್ಡ್ ಗೆ ನಾಮಿನೇಟರ್ ಎನ್ನುವುದು ವಿಶೇಷ. ಇದನ್ನೂ ಓದಿ : ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಮಾಡಿದ ಕಾಮಿಡಿ ಕಿಲಾಡಿ ಜೋಡಿ


ಈಗಾಗಲೇ ಸಿನಿಮಾದ ಶೂಟಿಂಗ್ ಶುರುವಾಗಿದ್ದು ಬೆಂಗಳೂರು, ಮಂಗಳೂರು, ಗೋವಾ, ತುಮಕೂರು ಮುಂತಾದ ಕಡೆ ಚಿತ್ರೀಕರಣ ನಡೆಸಿದೆ. ಇನ್ನೂ ಕೆಲವೇ ದಿನಗಳಲ್ಲೇ ಫಸ್ಟ್ ಲುಕ್ ಕೂಡ ರಿಲೀಸ್ ಆಗಲಿದೆ ಎಂದಿದೆ ಚಿತ್ರತಂಡ. ಇದನ್ನೂ ಓದಿ : ನಟ ಧನ್ವೀರ್ ಮೇಲೆ ನಿಲ್ಲುತ್ತಿಲ್ಲ ದಾಳಿ : ದಾಳಿ ಹಿಂದೆ ಸ್ಟಾರ್ ನಟರ ಕೈವಾಡ?


ಸ್ನೇಹದ ಮಹತ್ವ ಸಾರುವ ಸಿನಿಮಾ ಇದಾಗಿದ್ದು, ಸ್ನೇಹಕ್ಕೆ ಪ್ರಾಣವನ್ನೇ ಕೊಡುವಂತ ಸ್ನೇಹಿತನ ಪಾತ್ರದಲ್ಲಿ ಕಿರಣ್ ಕಾಣಿಸಿಕೊಂಡಿದ್ದಾರೆ. ಮಂಗಳೂರು ಮೂಲದ ಭಾರತಿ ಶೆಟ್ಟಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇವರು ಪ್ರಸ್ತುತ ದುಬೈ ನಿವಾಸಿಯಾಗಿದ್ದಾರೆ. ಅಲ್ಲಿ ಜಾಹೀರಾತು ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ‌. ಇದನ್ನೂ ಓದಿ : ಶಬ್ದ ಚಿತ್ರದ ವಿಭಿನ್ನ ಪಾತ್ರದಲ್ಲಿ ಮೇಘನಾ ರಾಜ್ : ನಿರ್ದೇಶಕ ಕಾಂತ ಹೇಳಿದ್ದೇನು?


ಗುರುತೇಜ್ ಶೆಟ್ಟಿ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ ಗುರುವೇಂದ್ರ ಶೆಟ್ಟಿ ಎಂಬ ಹೆಸರಿನಿಂದ ಚಿತ್ರವೊಂದನ್ನು ಇವರು ನಿರ್ದೇಶಿಸಿದ್ದರು.
ಕಿರಣ್ ರಾಜ್ ಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ನಟಿಸಿದ್ದು ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್, ವಿನಯ್ ರೋಹನ್ ಸಾಯಿ, ಗಿರೀಶ್ ಮುಂತಾದವರು ತಾರಾಗಣದಲ್ಲಿ ಇದ್ದಾರೆ.

Comments

Leave a Reply

Your email address will not be published. Required fields are marked *