ದೇಶ, ಧರ್ಮಕ್ಕೋಸ್ಕರ ಕೆಲಸ ಮಾಡಿದ ಯುವಕ ಇವತ್ತಿಲ್ಲ: ಕೆ. ಸುಧಾಕರ್

ಬೆಂಗಳೂರು: ದೇಶ, ಧರ್ಮಕ್ಕೋಸ್ಕರ ಕೆಲಸ ಮಾಡಿದ ಯುವಕ ಇವತ್ತಿಲ್ಲ. ಧರ್ಮ ರಕ್ಷಣೆಗೆ ಯಾರು ಹೆದರಿಕೊಳ್ಳುವುದು ಬೇಡ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶಿವಮೊಗ್ಗದಲ್ಲಿ ನಡೆದ ಘಟನೆ ಕುರಿತಾಗಿ ಮಾತನಾಡಿದ ಅವರು, ನೋವಿನ ಸಂಗತಿಯಾಗಿದೆ. ಇದು ಮೇಲ್ನೋಟಕ್ಕೆ ಪೂರ್ವ ನಿಯೋಜಿತ ದುಷ್ಕೃತ್ಯ ಎಂದು ಹೇಳಬಹುದು. ಕಳೆದೊಂದುವಾರದ ಬೆಳವಣಿಗೆಯ ಹಿನ್ನೆಲೆಯಲ್ಲಿ ಧರ್ಮದ ವಿಷಯ ಸಂಬಂಧಿಸಿಸಂತೆ ಕಾರ್ಯಕರ್ತನ ಹತ್ಯೆ ಮಾಡಿದ್ದಾರೆ ಅನ್ನಿಸುತ್ತದೆ. ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅವರ ಮೇಲೆ ನಿರ್ಧಾಕ್ಷ್ಯಣವಾಗಿ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ಅನೇಕ ಕಾರ್ಯಕರ್ತರು ಭಯಭೀತರಾಗುತ್ತಾರೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿದಾನ ಮಾಡಿದ ತಾಯಿ!

ಇಂತಹ ಘಟನೆಗಳ ವೇಳೆ ನೊಂದವರ ಪರವಾಗಿ ನಾನು ನಿಂತುಕೊಳ್ಖುತ್ತೇನೆ ನಮ್ಮ ದೇಶದ ಅಶಾಂತಿ ವಾತಾವರಣಕ್ಕೆ ವಿದೇಶಿ ಸಂಚು ಸಹ ಕಾಣಿಸುತ್ತಿದೆ. ಧರ್ಮ ರಕ್ಷಣೆಗೆ ಯಾರು ಹೆದರಿಕೊಳ್ಳುವುದು ಬೇಡ. ಯಾವುದೇ ಜಿಲ್ಲೆಯಲ್ಲಿ ಈ ರೀತಿಯ ದೃಷೃತ್ಯ ನಡೆದಾಗ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಹೀಗಾಗಿ ಜನರು ಬೀದಿಗೆ ಬರುತ್ತಿದ್ದಾರೆ. ಅದು ಸರಿ ಅಂತ ನಾನು ಹೇಳಲ್ಲ. ಅಮಾಯರ ಮೇಲೆ ಸಂಚು ಮಾಡುವವರಿಗೆ ಸರ್ಕಾರ ಕಠಿಣ ಶಿಕ್ಷೆ ಕೊಡುತ್ತದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಅಶಾಂತಿಗೆ ದಾರಿಮಾಡಿಕೊಡೋ ವಿಚಾರ ನಮ್ಮ ಮುಂದೆ ಇಲ್ಲ. ಬೆಂಗಳೂರಿಗೆ ಬಂದಾಗ ಸಚಿವರನ್ನು ಭೇಟಿ ಆಗೋದು ಸಹಜ. ಅದಕ್ಕೆ ವಿಶೇಷ ಅರ್ಥ ಕಲ್ಪಿಸೋ ಅಗತ್ಯ ಇಲ್ಲ ಎಂದಿದ್ದಾರೆ.

ಹಿರಿಯ ನಾಯಕರು ಇಂತಹ ಸಮಯದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ನೊಂದ ಕುಟುಂಬಕ್ಕೆ ಮನೋಸ್ಥೈರ್ಯ ತುಂಬುವ ಕೆಲಸವನ್ನು ಪಕ್ಷಾತೀತವಾಗಿ ಮಾಡಬೇಕು. ಆದರೆ ಇದರಲ್ಲೂ ರಾಜಕೀಯ ಮಾಡಿದರೆ ಅದು ಹೇಯ ಕೃತ್ಯ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಇದು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸಂಘಟನೆ. ಯಾವುದೇ ಕಾರಣಕ್ಕೂ ನಮ್ಮ ಪಕ್ಷ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಟ್ಟ ಪ್ರವೃತ್ತಿಯನ್ನು ಎಂದೂ ಮಾಡುವುದಿಲ್ಲ ಎಂದರು.

ಕೆಲ ವರ್ಷಗಳಿಂದ ದೇಶದಲ್ಲಿ ಹಿಂದೂ ಕಾರ್ಯಕರ್ತರನ್ನು ಪೂರ್ವ ನಿಯೋಜಿತವಾಗಿ ಕೊಲೆ ಮಾಡಲಾಗುತ್ತಿದೆ. ಇಂತಹ ಕೊಲೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಯಾರೇ ಕಾರಣರಾಗಿದ್ದರೂ ಅಥವಾ ಯಾವುದೇ ಸಂಘಟನೆಯಾದರೂ ಕ್ರಮ ಕೈಗೊಳ್ಳಲೇಬೇಕು ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂದರ್ಶನವೊಂದರಲ್ಲಿ ಹಿಜಾಬ್ ಕುರಿತು ಅಭಿಪ್ರಾಯ ಹೇಳಿದ್ದಾರೆ. ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದೂ ಅವರು ಹೇಳಿದ್ದಾರೆ. ಶಾಲೆಯಲ್ಲಿ ಸಮವಸ್ತ್ರದ ನಿಯಮವನ್ನು ಪಾಲಿಸಬೇಕು ಎಂದು ಅವರು ಹೇಳಿದ್ದಾರೆ. ಇದು ಸಹಜವಾದ ಹಾಗೂ ಸರಿಯಾದ ವಿಚಾರ. ಶಿಕ್ಷಣ ಸಂಸ್ಥೆಯ ಎಲ್ಲಾ ನಿಯಮಗಳನ್ನು ಮಕ್ಕಳು ಪಾಲಿಸಬೇಕು ಎಂದರು.

Comments

Leave a Reply

Your email address will not be published. Required fields are marked *