ಈಶ್ವರಪ್ಪನಿಗೆ ದಿನಕ್ಕೊಮ್ಮೆ ನನ್ನ ಹೆಸ್ರು ಹೇಳದಿದ್ರೆ ನಿದ್ರೆ ಬರಲ್ಲ: ಡಿಕೆಶಿ

ಬೆಂಗಳೂರು: ಈಶ್ವರಪ್ಪ ಅವರಿಗೆ ದಿನಕ್ಕೊಮ್ಮೆ ನನ್ನ ಹೆಸರು ಹೇಳದಿದ್ದರೆ ನಿದ್ರೆ ಬರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ನಗರದ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ವಿಚಾರಗಳಿಗೆ ಕೊಲೆ ನಡೆದಿದೆ ಎಂದು ಮಾಧ್ಯಮದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿರುವುನ್ನು ಗಮನಿಸಿದ್ದೇನೆ. ಈಶ್ವರಪ್ಪ ಹರಕು ಬಾಯಿ ಅಂತ ಗೊತ್ತಿದೆ. ಅವರ ಬಗ್ಗೆ ನಮ್ಮ ನಾಯಕರೆ ಹೇಳಿದ್ದಾರೆ. ಈ ಕೊಲೆ ನಮಗೂ ನೋವಾಗಿದೆ. ಇದನ್ನು ನಾನು ನಮ್ಮ ಪಕ್ಷ ಖಂಡಿಸುತ್ತೇವೆ. ಈ ರೀತಿ ದೇಶ ದ್ರೋಹಿ ಹೇಳಿಕೆ ಕೊಟ್ಟ ಈಶ್ವರಪ್ಪ ಅವರ ಮೇಲೆ ಮೊದಲು ಕೇಸು ದಾಖಲಿಸುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮುಸಲ್ಮಾನ ಗೂಂಡಾಗಳಿಂದ ಬಿಜೆಪಿ ಕಾರ್ಯಕರ್ತನ ಕೊಲೆ: ಈಶ್ವರಪ್ಪ

ಈಶ್ವರಪ್ಪ ಅವರಿಗೆ ದಿನಕ್ಕೊಮ್ಮೆ ನನ್ನ ಹೆಸರು ಹೇಳದಿದ್ದರೆ ನಿದ್ರೆ ಬರುವುದಿಲ್ಲ. ಕೊಲೆ ಅಕ್ಷಮ್ಯ, ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಕೊಲೆ ಗಡುಕರ ಬಂಧನ ಆಗಬೇಕು ತನಿಖೆಯೂ ಆಗಬೇಕು. ಅವರ ಕ್ಷೇತ್ರದಲ್ಲೆ ಆಗಿದೆ. ಹಾಗಾಗಿ ಅವರ ಹೊಣೆಗಾರಿಕೆ ಹೆಚ್ಚು ಇದೆ. ನನ್ನ ಪ್ರಚೊದನೆಯಿಂದ ಆಗಿದ್ದರೆ ನನ್ನ ಮೇಲೆಯೂ ತನಿಖೆಯಾಗಲಿ. ಕಾನೂನು, ತನಿಖೆ ವಿಚಾರದಲ್ಲಿ ನಾವು ಮಧ್ಯೆ ಪ್ರವೇಶ ಮಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಯುವಕನ ಬರ್ಬರ ಹತ್ಯೆ – ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ

ಶಿವಮೊಗ್ಗದಲ್ಲಿ ಅನ್ಯಕೋಮಿನ ಗುಂಪೊಂದು ಯುವಕನನ್ನು ಹತ್ಯೆಗೈದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಕೇಸರಿ ಶಾಲು ಹಂಚಿದ್ದಾರೆ. ರಾಷ್ಟ್ರಧ್ವಜ ತೆಗೆದು ಭಗವಾಧ್ವಜ ಹಾರಿಸಿದ್ದಾರೆ ಎಂಬಂತಹ ಡಿ.ಕೆ. ಶಿವಕುಮಾರ್ ಅವರ ಪ್ರಚೋದನಕಾರಿ ಹೇಳಿಕೆಗಳಿಂದ ಕುಮ್ಮಕ್ಕು ಪಡೆದು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *