ಮೆಟ್ರೋವನ್ನು ತಂದಿದ್ದು ಎಸ್‍ಪಿ ಸರ್ಕಾರ, ಉದ್ಘಾಟಿಸಿದ್ದು ಯೋಗಿ ಆದಿತ್ಯನಾಥ್: ಅಖಿಲೇಶ್ ಯಾದವ್

ಲಕ್ನೋ: ಉತ್ತರ ಪ್ರದೇಶದಲ್ಲಿ ಈ ಹಿಂದೆ ಇದ್ದ ಸಮಾಜವಾದಿ ಸರ್ಕಾರ ನಿರ್ಮಿಸಿದ ಮೆಟ್ರೋ ರೈಲುಗಳು ಮತ್ತು ನಿಲ್ದಾಣಗಳನ್ನು ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.

ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರಾವಧಿಯಲ್ಲಿ ಮಾಡಿದ ಕೆಲಸಗಳ ಕ್ರೆಡಿಟ್ ಅನ್ನು ಪ್ರಸ್ತುತ ಸರ್ಕಾರ ತೆಗೆದುಕೊಳ್ಳುತ್ತಿದೆ. ಎಸ್‍ಪಿ ಸರ್ಕಾರ ಮಾಡಿದ ಮೆಟ್ರೋವನ್ನು ಬಾಬಾ ಸಿಎಂ ಉದ್ಘಾಟಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್

ಲಕ್ನೋದಲ್ಲಿ ನಡೆದ ಸಮಾಜವಾದಿ ವಿಜಯ ಯಾತ್ರೆಯಲ್ಲಿ ಮಾತನಾಡಿದ ಅವರು, ಈ ಸರ್ಕಾರದಲ್ಲಿ ರೈತರು, ವಿದ್ಯಾರ್ಥಿಗಳು, ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್‍ಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಈ ರೀತಿಯ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಬಾಗೆ ಏನೂ ತಿಳಿದಿಲ್ಲ: ಯೋಗಿ ಆದಿತ್ಯನಾಥ್‌ಗೆ ಅಖಿಲೇಶ್ ಯಾದವ್ ತಿರುಗೇಟು

ಉತ್ತರ ಪ್ರದೇಶದ 59 ಕ್ಷೇತ್ರಗಳಲ್ಲಿ ಮೂರನೇ ಹಂತದ ಚುನಾವಣೆಯ ಮತದಾನ ಭಾನುವಾರವಷ್ಟೇ ಮುಗಿದಿದೆ. ಉತ್ತರ ಪ್ರದೇಶದಲ್ಲಿ ಏಳು ಹಂತಗಳ ವಿಧಾನಸಭೆ ಚುನಾವಣೆ ಫೆಬ್ರವರಿ 10ರಂದು ಪ್ರಾರಂಭವಾಗಿದ್ದು, ಸದ್ಯ ಮೂರು ಹಂತದ ಚುನಾವಣೆಗಳು ಪೂರ್ಣಗೊಂಡಿವೆ. ನಂತರದ ಹಂತಗಳು ಫೆಬ್ರವರಿ 23, 27, ಮತ್ತು ಮಾರ್ಚ್ 3 ಮತ್ತು 7 ರಂದು ನಡೆಯುತ್ತಿವೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.

Comments

Leave a Reply

Your email address will not be published. Required fields are marked *