ಮೈಸೂರಿನಲ್ಲಿ ಪಬ್ಲಿಕ್ ರಥ ಸಂಚಾರ

ಮೈಸೂರು: ಪಬ್ಲಿಕ್ ಟಿವಿ ದಶಮಾನೋತ್ಸವ ಹಿನ್ನೆಲೆಯಲ್ಲಿ ಪಬ್ಲಿಕ್ ರಥ ಇಡೀ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಇಂದು ಅರಮನೆ ನಗರಿ ಮೈಸೂರು ನಗರ ಪ್ರವೇಶಿಸಿದೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪಬ್ಲಿಕ್ ರಥಕ್ಕೆ ಅರ್ಚಕರು ಪೂಜೆ ಸಲ್ಲಿಸಿದರು. ಬೆಟ್ಟದಿಂದ ನಗರಕ್ಕೆ ಆಗಮಿಸಿದ ಪಬ್ಲಿಕ್ ರಥಕ್ಕೆ ಯುವ ಸಮೂಹ ಹೂಹಾಕಿ ರಥವನ್ನು ಸ್ವಾಗತಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಪಬ್ಲಿಕ್ ಟಿವಿ ನಡೆದು ಬಂದ ಹಾದಿಯ ವೀಡಿಯೋ ವೀಕ್ಷಿಸಿದರು. ಇಂದು ಮತ್ತು ನಾಳೆ ಮೈಸೂರಿನ ನಗರ ಮತ್ತು ಗ್ರಾಮಾಂತರದಲ್ಲಿ ಸಂಚರಿಸಲಿದೆ.

ಈ ಬಗ್ಗೆ ಅಭಿಮಾನಿಗಳು ಪಬ್ಲಿಕ್ ಟಿವಿ ದಶಕ ಪೂರೈಸಿದ ಯಶಸ್ಸಿನ ಬಗ್ಗೆ ಮಾತನಾಡಿ, ಪಬ್ಲಿಕ್ ಟಿವಿ ಜನರ ಸಮಸ್ಯೆಗೆ ಧ್ವನಿಯಾಗಿದೆ. ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಅವರ ವ್ಯಕ್ತಿತ್ವ, ನೇರ ನುಡಿಯು ನಮಗೆ ಇಷ್ಟವಾಗುತ್ತದೆ. ಪಬ್ಲಿಕ್ ಟಿವಿಗೆ ಶುಭವಾಗಲಿ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ಬೆಂಗ್ಳೂರಲ್ಲಿ ಪಬ್ಲಿಕ್ ರಥ ಸಂಚಾರ

ಪಬ್ಲಿಕ್ ಟಿವಿ ಯಾವಾಗಲೂ ಜನರ ಪರವಿದೆ. ಪಬ್ಲಿಕ್ ಟಿವಿಯ ನಡೆದ ಹಾದಿಯನ್ನು ನೋಡಿದರೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಮನೆಯೇ ಮಂತ್ರಾಲಯದಿಂದ ನೋಡಿ ನಮಗೂ ಏನಾದರೂ ಸಹಾಯ ಮಾಡಬೇಕು ಎನಿಸುತ್ತಿತ್ತು ಎಂದು ನುಡಿದರು.

ಕೊರೊನಾ ಸಮಯದಲ್ಲಿ ಮಾಡಿದ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಮಾಡಿದ ಸಹಾಯ ಉನ್ನತವಾದ ಕೊಡುಗೆಯಾಗಿದೆ. ಪಬ್ಲಿಕ್ ಟಿವಿ ಮನೆ ಮನೆಗೂ ತಲುಪಿದೆ. ಕಷ್ಟಕಾಲದಲ್ಲಿ ಪಬ್ಲಿಕ್ ಟಿವಿ ಸಹಾಯ ಮಾಡಿದೆ ಎಂದು ಆಟೋ ಚಾಲಕರೊಬ್ಬರು ನೆನಪಿಸಿಕೊಂಡರು. ಇದನ್ನೂ ಓದಿ:  ಕೃಷಿ ಕ್ಷೇತ್ರದಲ್ಲಿ ಕ್ರಾಂತಿ – 100 ʼಕಿಸಾನ್‌ ಡ್ರೋನ್‌ʼಗಳಿಗೆ ಪ್ರಧಾನಿ ಮೋದಿ ಚಾಲನೆ

ಹತ್ತು ವರ್ಷ ಪೂರೈಸಲು ಕಾರಣದ ರಾಜ್ಯದ ಜನತೆಗೆ ಧನ್ಯವಾದ, ಕೃತಜ್ಞತೆ ಸಲ್ಲಿಸುವ ಸಲುವಾಗಿ, ಪಬ್ಲಿಕ್ ಟಿವಿ ಪಬ್ಲಿಕ್ ದಶ ರಥಕ್ಕೆ ಚಾಲನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಇಂದು ಪಬ್ಲಿಕ್ ಟಿವಿ ತೇರು ಮೈಸೂರಿನಲ್ಲಿ ಸಂಚರಿಸುತ್ತಿದೆ.

Comments

Leave a Reply

Your email address will not be published. Required fields are marked *