ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ಉತ್ಸವದಂತೆ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಮಾರ್ಚ್ 17 ರಂದು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಅಪ್ಪು ಹುಟ್ಟುಹಬ್ಬ ಮತ್ತು ಜೇಮ್ಸ್ ಚಿತ್ರದ ಬಿಡುಗಡೆ ಪ್ರಯುಕ್ತ ಪುನೀತ್ ನಟನೆಯ ‘ಅಪ್ಪು ಸಿನಿಮಾದಿಂದ ಜೇಮ್ಸ್’ವರೆಗಿನ ಚಿತ್ರಗಳ 31 ಕಟೌಟ್ ಗಳನ್ನು ವೀರೇಶ್ ಚಿತ್ರಮಂದಿರದಲ್ಲಿ ಹಾಕಲಾಗುತ್ತಿದೆ. ಎಲ್ಲ ಕಟೌಟ್ ಗಳಿಗೂ ಭಾರೀ ಹೂವಿನ ಹಾರವನ್ನು ಹಾಕಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ವೈರಲ್ ಆಯ್ತು ಕಿಚ್ಚನ ಮನೆಯ ಸ್ಕೂಟಿ ಟೇಬಲ್

ಅಲ್ಲದೇ, ಬೆಳಗ್ಗೆ 10.30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕೂಡ ಮಾಡಲಾಗುತ್ತಿದ್ದು, ನಂತರ ಅನ್ನದಾನ, ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ಬಟ್ಟೆ ಮತ್ತು ಸಿಹಿ ವಿತರಣೆ ಹಾಗೂ ಗಿಡಗಳನ್ನು ವಿತರಿಸಲಾಗುತ್ತದೆ. ಜತೆಗೆ ನೇತ್ರದಾನ ಹಾಗೂ ರಕ್ತದಾನ ಶಿಬಿರಗಳನ್ನೂ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ : ಯದುವೀರನಿಗಾಗಿ ಕನ್ನಡಕ್ಕೆ ವಾಪಸ್ಸಾದ ನೇಹಾ ಶೆಟ್ಟಿ

ಬೆಳಗ್ಗೆ ಸಿಹಿ ಹಂಚಿದರೆ, ಮಧ್ಯಾಹ್ನ ಚಿಕನ್ ಬಿರಿಯಾನಿ ನೀಡಲು ನಿರ್ಧರಿಸಿದ್ದಾರೆ ಅಪ್ಪು ಅಭಿಮಾನಿಗಳು. ಸಂಜೆ 4.30ರಿಂದ ಹೂವಿನ ಪಲ್ಲಕ್ಕಿಯಲ್ಲಿ ಡಾ.ರಾಜ್ ಮತ್ತು ಪುನೀತ್ ಅವರ ಭಾವಚಿತ್ರಗಳ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಇದನ್ನು ಓದಿ : ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ

ರಾಜಾಜಿನಗರ 6ನೇ ಬ್ಲಾಕ್ ನಲ್ಲಿರುವ ಸಮುದಾಯ ಭವನದಿಂದ ಡಾ.ರಾಜ್ ಕುಮಾರ್ ರಸ್ತೆಯ ಮೂಲಕ ವೀರೇಶ್ ಚಿತ್ರಮಂದಿರದವರೆಗೂ ಭಾವಚಿತ್ರಗಳನ್ನು ಮೆರವಣಿ ಮಾಡಿ, ಸಂಜೆ 6 ಗಂಟೆಗೆ ಡಿ.ಜೆ ಅವಳಡಿಸಿಕೊಂಡು ನೃತ್ಯ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದಾರೆ ಅಭಿಮಾನಿಗಳು.

Leave a Reply