ನನ್ನ ಕಣ್ಣಿಗೆ ಸೇಬು ಹಣ್ಣಿನಂತೆ ಕಾಣುವಿರಿ, ಚಿಯರ್ಸ್ ಪಪ್ಪಾ: ರವೀನಾ ಟಂಡನ್

ಮುಂಬೈ: ಬಾಲಿವುಡ್ ನಟಿ ರವೀನಾ ಟಂಡನ್ ತಮ್ಮ ತಂದೆ ರವಿ ಟಂಡನ್ ಅವರ ಜನ್ಮದಿನದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಥ್ರೋಬ್ಯಾಕ್ ಪೋಸ್ಟ್‌ವೊಂದನ್ನು ಮಾಡಿದ್ದು, ಅದಕ್ಕೆ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳು ಪಪ್ಪಾ. ನನ್ನ ಜೀವನದಲ್ಲಿ ಮತ್ತೆಂದೂ ಇದೇ ರೀತಿ ನಿಮ್ಮ ಜನ್ಮದಿನದ ಆಚರಣೆಯನ್ನು ಆಚರಿಸಲು ಆಗುವುದಿಲ್ಲ. ನೀವು ಯಾವಾಗಲೂ ನನ್ನ ಕಣ್ಣಿಗೆ ಸೇಬು ಹಣ್ಣಿನಂತೆ ಕಾಣುವಿರಿ. ಚಿಯರ್ಸ್ ಎಂದು ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

ಭಾವುಕ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ ಈ ಚಿತ್ರವು ರವಿ ಟಂಡನ್ ಅವರ ಕಳೆದ ವರ್ಷದ ಹುಟ್ಟುಹಬ್ಬದ ಚಿತ್ರವಾಗಿದೆ. ಚಿತ್ರದಲ್ಲಿ ರವಿ ಟಂಡನ್ ಅವರು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅವರ ಹುಟ್ಟುಹಬ್ಬದ ಕೇಕ್ ಅನ್ನು ನಾವು ಕಾಣಬಹುದು. ಅವರು ಹಲವು ದಿನಗಳಿಂದ ಶ್ವಾಸಕೋಶದ ಫೈಬ್ರೋಸಿಸ್‍ನಿಂದ ಬಳಲುತ್ತಿದ್ದು, ಉಸಿರಾಟದ ವೈಫಲ್ಯದಿಂದ 86 ವರ್ಷದ ರವಿ ಅವರು ಇದೇ ಫೆಬ್ರವರಿ 11 ರಂದು ನಿಧನರಾದರು. ಇದನ್ನೂ ಓದಿ: ರವೀನಾ ಟಂಡನ್ ತಂದೆ ಖ್ಯಾತ ನಿರ್ದೇಶಕ ‘ರವಿ ಟಂಡನ್’ ನಿಧನ

 

ರವಿ ಟಂಡನ್ ಅವರು ಖೇಲ್ ಖೇಲ್ ಮೇ, ಅನ್ಹೋನಿ, ನಜ್ರಾನಾ, ಮಜ್ಬೂರ್, ಖುದ್-ದಾರ್ ಮತ್ತು ಜಿಂದಗಿ ಸಿನಿಮಾಗಳನ್ನು ನಿರ್ದೇಶಿಸಿದ್ದು, ಈ ಮೂಲಕ ಬಾಲಿವುಡ್ ನಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದರು. ರವೀನಾ ಟಂಡನ್ ಸಹ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ರವೀನಾ ಅವರು ಚಂದನವನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *