ಇಂಡೋ-ಕೆನಡಿಯನ್ ಗಾಯಕನ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ಉರ್ಫಿ ಜಾವೇದ್!

ಮುಂಬೈ: ಪ್ರಯೋಗಶೀಲ ಶೈಲಿಯಿಂದಾಗಿ ನಿರಂತರವಾಗಿ ಸುದ್ದಿಯಲ್ಲಿರುವ ನಟಿ, ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್, ಇಂದು ಸೋಶಿಯಲ್ ಮೀಡಿಯಾದಲ್ಲಿ ಇಂಡೋ-ಕೆನಡಿಯನ್ ಗಾಯಕನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಉರ್ಫಿ, ಇಂಡೋ-ಕೆನಡಾದ ಗಾಯಕ ಕುನ್ವಾರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ಊಹಾಪೆÇೀಹಗಳು ಕೇಳಿಬರುತ್ತಿದೆ. ಇನ್‍ಸ್ಟಾಗ್ರಾಮ್ ನಲ್ಲಿ ಉರ್ಫಿ ಜೊತೆಗಿನ ಫೋಟೋ ಶೇರ್ ಮಾಡಿದ ಕುನ್ವಾರ್, ಇದರಲ್ಲಿ ತುಂಬಾ ಕೆಲಸವಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಉರ್ಫಿ ಈ ಪೋಸ್ಟ್ ತನ್ನ ಇನ್‍ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ನೀವು ನನ್ನನ್ನು ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ ಎಂದು ಬರೆದು ಶೇರ್ ಮಾಡಿದ್ದಾರೆ. ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಇದನ್ನೂ ಓದಿ: ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್‍ನಲ್ಲಿ ಗಮನ ಸೆಳೆಯಲಿದೆ ಸೈಕಲಾಜಿಕಲ್ ಥ್ರಿಲ್ಲರ್ ‘ರುಗ್ನ’

ಅಲ್ಲದೆ ಇನ್‍ಸ್ಟಾದಲ್ಲಿ ಉರ್ಫಿ ಹಾಕಿದ ಪಿಕ್ ಗೆ ‘ಹ್ಯಾಪಿ ವಿ ಡೇ ಉರ್ಫಿ ಜಿ’ ಎಂದು ಕುನ್ವಾರ್ ಕಾಮೆಂಟ್ ಮಾಡಿದ್ದಾರೆ. ಈ ರೀತಿ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುವುದು, ವಿಶ್ ಮಾಡುವುದನ್ನು ನೋಡಿದ ನೆಟ್ಟಿಗರು ಇಬ್ಬರಿಬ್ಬರ ನಡುವೆ ಖಂಡಿತವಾಗಿಯೂ ಏನಾದರೂ ಇದೆ ಎಂದು ಕೇಳಿಬರುತ್ತಿದೆ. ಈ ಊಹಾಪೋಹ ನಿಜವಾ ಎಂಬುದನ್ನು ಅವರೆ ತಿಳಿಸಬೇಕು.

ವೃತ್ತಿಪರ ರಂಗದಲ್ಲಿ, ಕುನ್ವಾರ್ ಅವರು ಆಲ್ಬಂ ಸಾಂಗ್ ಹಾಟಿದ್ದಾರೆ. ಅಫ್ಸಾನಾ ಖಾನ್ ಅವರಂತಹ ಹೆಸರಾಂತ ಕಲಾವಿದರೊಂದಿಗೆ ಇವರು ಕೆಲಸ ಮಾಡಿದ್ದಾರೆ. ಶೀಘ್ರದಲ್ಲೇ ತಮ್ಮ ಮುಂಬರುವ ಯೋಜನೆಯನ್ನು ಘೋಷಿಸಲಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್

ಉರ್ಫಿ ಅವರು ತಮ್ಮ ವಿಶಿಷ್ಟವಾದ ಫ್ಯಾಷನ್‍ನಿಂದ ಸುದ್ದಿ ಮಾಡುತ್ತಿದ್ದಾರೆ. ಕೆಲವು ಪಂಜಾಬಿ ಹಿಟ್ ಸಾಂಗ್ ಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಪದೇ ಪದೇ ಮೈ ಕಾಣುವ ಬಟ್ಟೆ ಧರಿಸುವ ಉರ್ಫಿ ಬಟ್ಟೆಗಳನ್ನು ವಿನ್ಯಾಸಕಾರರು ಡಿಸೈನ್ ಮಾಡುತ್ತಾರೆ. ಇತ್ತೀಚೆಗೆ ಇವರು ವಿಚಿತ್ರ ಬಟ್ಟೆಯನ್ನು ತೊಟ್ಟು ಪ್ಯಾಪರಾಜಿಗಳ ಎದುರು ಬಂದಿದ್ದಾರೆ. ಅಲ್ಲದೆ ಆ ಡ್ರೆಸ್ ನೋಡಿಕೊಳ್ಳಲು ಅಸಿಸ್ಟೆಂಟ್ಸ್ ಇರುತ್ತಾರೆ. ಉರ್ಫಿ ತೊಡುವ ಬಟ್ಟೆ ರೆಡಿ ಮಾಡುವ ವ್ಯಕ್ತಿ ಯಾರೆಂದು ಕೂಡ ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ. ಮೈ ತುಂಬಾ ಬಟ್ಟೆ ಹಾಕಿದರೆ ಉರ್ಫಿ ಹೇಗೆ ಕಾಣಿಸುತ್ತಾರೆ ಎಂದು ಒಮ್ಮೆ ನೋಡಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *