ಪ್ರಿಯತಮನ ಕೊಲೆ ಮಾಡಿದ ಪ್ರಿಯತಮೆ – 7 ವರ್ಷದ ಬಳಿಕ ಅರೆಸ್ಟ್!

ಬೆಂಗಳೂರು: ಅಕ್ರಮ ಸಂಬಂಧವನ್ನು ಮುಂದುವರೆಸುವಂತೆ ಒತ್ತಾಯ ಮಾಡುತ್ತಿದ್ದ ಪ್ರಿಯಕರನ ಕೊಂದು ಹೆಣವನ್ನು ಸಾಗಿಸಿದ್ದ ದಂಪತಿಯನ್ನು ಏಳು ವರ್ಷದ ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

2015 ರ ಮರ್ಡರ್ ಮಿಸ್ಟರಿ ಕಥೆ!
ಪತಿ ಮಹಮ್ಮದ್ ಗೌಸ್, ಪತ್ನಿ ಕೌಸರ್ ಸೇರಿ ಪ್ರಿಯತಮ ವಜೀರ್‍ನನ್ನು ಕೊಲೆ ಮಾಡಿದ್ದರು. 2015ರ ಮೇ 13 ರಂದು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿಯ ಮನೆಯಲ್ಲಿ ದಂಪತಿ ಸೇರಿ ವಜೀರ್ ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಮತ್ತೆ ಕ್ಲೋಸ್ ಆಯ್ತು ಫ್ಲೈಓವರ್ – ಕಳಪೆ ಕಾಮಗಾರಿ ಎಂದ ತಜ್ಞರು

ಮೃತ ವಜೀರ್ ಜೊತೆ ಕೌಸರ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಕೌಸರ್, ವಜೀರ್ ಜೊತೆ ಸಂಬಂಧವನ್ನು ಬಿಟ್ಟು ತನ್ನ ಪತಿ ಜೊತೆ ಇರೋದಕ್ಕೆ ಇಚ್ಚಿಸಿದ್ಲು. ಆದ್ರೆ, ವಜೀರ್ ಗೆ ಕೌಸರ್ ಬಿಟ್ಟುಕೊಡೋಕೆ ಇಷ್ಟ ಇರಲಿಲ್ಲ. ಈ ವಿಚಾರವಾಗಿ ಇವರಿಬ್ಬರ ನಡುವೆ ಪದೇ-ಪದೇ ಗಲಾಟೆಯಾಗುತ್ತಿತ್ತು.

ಈ ಪರಿಣಾಮ ಪತಿ ಗೌಸ್ ಜೊತೆ ಸೇರಿ ಪ್ರಿಯತಮನ ಕೊಲೆಗೆ ಕೌಸರ್ ಸ್ಕೇಚ್ ಹಾಕಿದ್ದಳು. ಅದಕ್ಕೆ 2015 ಮೇ 13 ರಂದು ವಜೀರ್‍ನನ್ನು ಮನೆಗೆ ಕರೆಯಿಸಿಕೊಂಡಿದ್ದಾಳೆ. ವಜೀರ್ ಮನೆಗೆ ಬಂದಾಗ ಗೌಸ್ ಮಂಚದ ಕೆಳಗೆ ಅವಿತು ಕುಳಿತಿದ್ದು, ಮನೆ ಆತ ಬರ್ತಿದ್ದಂತೆ ವೇಲ್ ನಲ್ಲಿ ಕೌಸರ್ ಕತ್ತು ಬಿಗಿದಿದ್ದಾಳೆ. ನಂತರ ದಂಪತಿ ಸೇರಿ ವಜೀರ್ ಕತ್ತು ಬಿಗಿದು ಕೊಲೆ ಮಾಡಿದ್ರು.

ಪ್ರಿಯತಮನ ಬೈಕ್‍ನಲ್ಲೇ ಹೆಣ ಪ್ಯಾಕ್!
ಕೊಲೆ ಮಾಡಿದ ದಂಪತಿ ವಜೀರ್ ಬೈಕ್‍ನಲ್ಲೇ ಹೆಣ ಪ್ಯಾಕ್ ಮಾಡಿ ಸಾಗಿಸಿದ್ದಾರೆ. ನಂತರ ಈ ಇಬ್ಬರು ಆಂಧ್ರದ ಪಾಲಸಮುದ್ರಕ್ಕೆ ಶವವನ್ನು ಎಸೆದು ಅಲ್ಲಿಂದ ಎಸ್ಕೇಪ್ ಆಗಿದ್ರು. ಇದನ್ನೂ ಓದಿ:  ಪೊಲೀಸ್ ಪೇದೆ ದಾಂಪತ್ಯದಲ್ಲಿ ಕಲಹ – ಪತ್ನಿ ಆತ್ಮಹತ್ಯೆ

ವಜೀರ್ ಕುಟುಂಬದವರು ಕಾಮಾಕ್ಷಿಪಾಳ್ಯದಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದು, ಆತನನ್ನು ಪೊಲೀಸರು ಹುಡುಕುತ್ತಿದ್ದರು. ಇತ್ತೀಚಿಗಷ್ಟೆ ಬೆಂಗಳೂರು ಹೆಗ್ಗನಹಳ್ಳಿಗೆ ಬಂದಿದ್ದ ಗೌಸ್ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ನಂತರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮಾಡುತ್ತಿದ್ದಂತೆ ಕೊಲೆ ರಹಸ್ಯ ಬಯಲಾಗಿದೆ. ಬಳಿಕ ಗಂಡ-ಹೆಂಡತಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *