ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು

ತುಮಕೂರು: ನಗರದ ಎಂಪ್ರೆಸ್ ಕಾಲೇಜಿಗೆ ಬುರ್ಖಾ ಧರಿಸಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ವಿದ್ಯಾರ್ಥಿನಿಯರು ಆಗಮಿಸಿದ್ದರು.

ರಾಜ್ಯದಲ್ಲಿ ಹಿಜಬ್ ಪ್ರತಿಭಟನೆ ಮುಂದುವರೆದಿದ್ದು, ಹೈಕೋರ್ಟ್ ತನ್ನ ಮುಂದಿನ ಆದೇಶದವರೆಗೂ ಶಾಲಾ-ಕಾಲೇಜಿನಲ್ಲಿ ಹಿಜಬ್ ಧರಿಸದಂತೆ ಸೂಚಿಸಿದೆ. ಆದರೂ ಹಲವಾರು ವಿದ್ಯಾರ್ಥಿನಿಯರು ಪಟ್ಟು ಬಿಡದೇ ಹಿಜಬ್ ಧರಿಸಿ ಶಾಲಾ, ಕಾಲೇಜಿಗೆ ಹಾಜರಾಗುತ್ತಿದ್ದಾರೆ. ಇಂದು ತುಮಕೂರು ನಗರದ ಎಂಪ್ರೆಸ್ ಕಾಲೇಜಿಗೆ ಬುರ್ಖಾ ಧರಿಸಿ ಅನೇಕ ವಿದ್ಯಾರ್ಥಿನಿಯರು ಬಂದಿದ್ದರು. ಇದನ್ನೂ ಓದಿ: ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ – ಪ್ರತಿಭಟನಕಾರರನ್ನು ತಡೆದ ಪೊಲೀಸರು

ಇನ್ನೂ ಕಾಲೇಜಿನಲ್ಲಿ ಬುರ್ಖಾ ತೆಗೆದಿಡಲು ಪ್ರತ್ಯೇಕ ಕೊಠಡಿ ಮೀಸಲಿಡಲಾಗಿದ್ದು, ಕೆಲ ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ತೆಗೆದ ತರಗತಿಗೆ ಹಾಜರಾಗಿದ್ದರು. ಆದರೆ ಇನ್ನೂ ಕೆಲವರು ವಿದ್ಯಾರ್ಥಿನಿಯರು ನಿಗದಿತಪಡಿಸಿದ ಕೊಠಡಿಯಲ್ಲಿ ಬುರ್ಖಾ, ಹಿಜಾಬ್ ತೆಗೆಯದೇ ಪಟ್ಟು ಹಿಡಿದಿದ್ದರು. ಈ ವೇಳೆ ಕಾಲೇಜಿನ ಸಿಬ್ಬಂದಿ, ಪ್ರಾಂಶುಪಾಲರು ಬುರ್ಖಾ ತೆಗೆಯುವಂತೆ ಮನವಿ ಮಾಡಿದರು. ಹೀಗಿದ್ದರೂ ಹಿಜಾಬ್ ತೆಗೆಯಲು ವಿದ್ಯಾರ್ಥಿಗಳ ಹಿಂದೇಟು ಹಾಕಿದರು.

ನಮಗೆ ಶಿಕ್ಷಣ ಧರ್ಮ ಎರಡೂ ಮುಖ್ಯ. ಕೋರ್ಟ್‍ಗಿಂತ ನಮಗೆ ಧರ್ಮ ಮುಖ್ಯ ಎಂದಿದ್ದಾರೆ. ಹಿಜಾಬ್ ಹಾಗೂ ಬುರ್ಖಾ ಧರಿಸಿ ತರಗತಿಗೆ ಹೋಗಲು ಅವಕಾಶ ಕೊಡದ ಹಿನ್ನೆಲೆ ಅಲ್ಲಾ ಹೂ ಅಕ್ಬರ್ ಎಂದು ಘೋಷಣೆ ಕೂಗುತ್ತಾ ಮನೆಗೆ ವಾಪಸ್ ಹೋದರು. ಇದನ್ನೂ ಓದಿ: ಯುಪಿ, ಬಿಹಾರದ ಜನತೆಗೆ ಪಂಜಾಬ್ ಪ್ರವೇಶಿಸಲು ಬಿಡಬೇಡಿ: ಚನ್ನಿ ವಿರುದ್ಧ ಬಿಜೆಪಿ, ಆಪ್ ಕೆಂಡ

Comments

Leave a Reply

Your email address will not be published. Required fields are marked *