ವಾಷಿಂಗ್ಟನ್: ವಾಟ್ಸಪ್ ಬಳಕೆದಾರರ ಅನುಭವ ಹೆಚ್ಚಿಸಲು ಹೊಸದೊಂದು ಫೀಚರ್ ತರುತ್ತಿದೆ. ಮೆಸೇಜಿಂಗ್ ಅಪ್ಲಿಕೇಶನ್ ಫೇಸ್ಬುಕ್ನಂತೆ ಕವರ್ ಫೋಟೋ ಫೀಚರ್ ತರುವಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ಫೀಚರ್ ವಾಟ್ಸಪ್ನ ಬಿಸಿನೆಸ್ ಖಾತೆಗಳಿಗೆ ವಿನ್ಯಾಸಗೊಳಿಸುತ್ತಿದ್ದು, ಸಾಮಾನ್ಯ ಖಾತೆಗಳಿಗೆ ಲಭ್ಯವಿರುವುದಿಲ್ಲ ಎಂದು Wabetainfo (ವೆಬಿಟೈನ್ಫೋ) ತಿಳಿಸಿದೆ.
ವಾಟ್ಸಪ್ನ ಬಿಸಿನೆಸ್ ಖಾತೆ ಉಳ್ಳವರು ಫ್ರೊಫೈಲ್ ಕವರ್ ಫೋಟೋ ಹೊಂದಿಸುವ ಫೀಚರ್ ಶೀಘ್ರವೇ ಪಡೆಯಲಿದ್ದಾರೆ. ಬೀಟಾ ಪರೀಕ್ಷಕರಿಗೆ ಈ ಫೀಚರ್ ಈಗಾಗಲೇ ಲಭ್ಯವಾಗಿದೆ ಹಾಗೂ ಬಿಸಿನೆಸ್ ಪ್ರೊಫೈಲ್ ಸೆಟ್ಟಿಂಗ್ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು Wabetainfo ತಿಳಿಸಿದೆ. ಇದನ್ನೂ ಓದಿ: ಮಸ್ಕ್ಗೆ ಅಂಬಾನಿ ಸೆಡ್ಡು – ಜಿಯೋದಿಂದ ಬರಲಿದೆ ಸ್ಯಾಟಲೈಟ್ ಇಂಟರ್ನೆಟ್

ವಾಟ್ಸಪ್ ಬಿಸಿನೆಸ್ ಬಳಕೆದಾರರಿಗೆ ಸೆಟ್ಟಿಂಗ್ಸ್ನಲ್ಲಿ ಕ್ಯಾಮೆರಾ ಬಟನ್ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡುವ ಮೂಲಕ ಹೊಸ ಕವರ್ ಫೋಟೋ ಆಯ್ಕೆ ಮಾಡಲು ಸಾಧ್ಯವಾಗಲಿದೆ. ಇತರರು ನಿಮ್ಮ ವಾಟ್ಸಪ್ ಬಿಸಿನೆಸ್ ಖಾತೆಯ ಪ್ರೊಫೈಲ್ಗೆ ಪ್ರವೇಶಿಸಿದಾಗ ಅವರು ನಿಮ್ಮ ಕವರ್ ಫೋಟೋವನ್ನು ನೋಡಲು ಸಾಧ್ಯವಾಗಲಿದೆ. ಇದನ್ನೂ ಓದಿ: ಇಸ್ರೋ ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ
ಈಗಾಗಲೇ ಈ ಫೀಚರ್ ಐಒಎಸ್ಗಳಲ್ಲಿ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ. ಶೀಘ್ರವೇ ಆಂಡ್ರಾಯ್ಡ್ಗೂ ಬರಲಿದೆ. ಫೀಚರ್ ಸದ್ಯ ಅಭಿವೃದ್ಧಿ ಹಂತದಲ್ಲಿರುವುದರಿಂದ ಬಿಡುಗಡೆ ದಿನಾಂಕವನ್ನು ವಾಟ್ಸಪ್ ತಿಳಿಸಿಲ್ಲ.

Leave a Reply