ಟಾಟಾ ಸನ್ಸ್ ಗ್ರೂಪ್‌ಗೆ ಎನ್ ಚಂದ್ರಶೇಖರನ್ ಅಧ್ಯಕ್ಷರಾಗಿ ಮರು ನೇಮಕ

ನವದೆಹಲಿ: ಟಾಟಾ ಸನ್ಸ್ ಮಂಡಳಿಯಲ್ಲಿ ಮುಂದಿನ 5 ವರ್ಷಗಳ ವರೆಗೆ ನಟರಾಜನ್ ಚಂದ್ರಶೇಖರನ್ ಅವರು ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಎನ್ ಚಂದ್ರಶೇಖರನ್ 2017ರಲ್ಲಿ ಟಾಟಾ ಸನ್ಸ್ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅವರ 5 ವರ್ಷಗಳ ಅಧಿಕಾರ ಅವಧಿ ಮುಗಿದಿದ್ದು, ಮತ್ತೆ 5 ವರ್ಷಗಳ ಅಧ್ಯಕ್ಷೀಯ ಅವಧಿಯನ್ನು ನವೀಕರಿಸಲಾಗಿದೆ.

ಚಂದ್ರಶೇಖರನ್ 2016ರ ಅಕ್ಟೋಬರ್‌ನಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದ್ದರು. ಜನವರಿ 2017ರಲ್ಲಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇವರು 100ಕ್ಕೂ ಅಧಿಕ ಟಾಟಾ ಆಪರೇಟಿಂಗ್ ಕಂಪನಿಗಳ ಪ್ರವರ್ತಕರಾಗಿದ್ದು, 100 ಶತಕೋಟಿ ಡಾಲರ್‌ಗೂ ಹೆಚ್ಚಿನ ಆದಾಯ ಹೊಂದಿದ್ದಾರೆ. ಇದನ್ನೂ ಓದಿ: IPL 2022 Auction: ಲಿವಿಂಗ್‍ಸ್ಟೋನ್ ದುಬಾರಿ ವಿದೇಶಿ ಆಟಗಾರ – ಫಿಂಚ್, ಮಾರ್ಗನ್ ಅನ್‍ಸೋಲ್ಡ್

 

ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸೇರಿದಂತೆ ಹಲವಾರು ಗ್ರೂಪ್ ಆಪರೇಟಿಂಗ್ ಕಂಪನಿಗಳ ಮಂಡಳಿಗೆ ಅಧ್ಯಕ್ಷರಾಗಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ 15ರ ಸೆಟ್‌ಗೆ ಬೆಂಕಿ!

ಚಂದ್ರಶೇಖರನ್ ತಮ್ಮ ಅಧಿಕಾರಾವಧಿಯಲ್ಲಿ ಏರ್ ಇಂಡಿಯಾವನ್ನು ಮರಳಿ ಪಡೆದಿದ್ದಾರೆ. ಟಾಟಾ ಗ್ರೂಪ್‌ಗೆ ಏರ್ ಇಂಡಿಯಾವನ್ನು ಮರಳಿ ಪಡೆಯಲು ನಾವು ಉತ್ಸುಕರಾಗಿದ್ದೇವೆ. ಇದನ್ನು ವಿಶ್ವದರ್ಜೆಯ ವಿಮಾನಯಾನ ಮಾಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *