ರಾಜ್ಯದ ಶಾಂತಿಗೆ ಭಂಗ ತರುವ ಕೆಲಸವಾಗದಿರಲಿ: ಬೊಮ್ಮಾಯಿ

ಬೆಂಗಳೂರು: ಹಿಜಬ್ ಹಾಗೂ ಕೇಸರಿ ಶಾಲು ವಿವಾದದ ಕುರಿತು ರಾಜ್ಯದ ಶಾಂತಿಗೆ ಭಂಗ ತರುವ ಕೆಲಸ ಆಗಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯಲ್ಲಿ ಎರಡು ಕಡೆಯಿಂದಲೂ ಸಮಸ್ಯೆ ಉಂಟಾಗಿದೆ. ಇದರಿಂದ ಯಾರಿಗೂ ರಾಜಕೀಯ ಲಾಭ ಆಗಲ್ಲ. ಕೋರ್ಟ್ ತೀರ್ಪಿಗಾಗಿ ಕಾಯೋಣ. ಶಾಂತಿ ಕದಡುವ ಹೇಳಿಕೆ ಬೇಡ. ನಮ್ಮಷ್ಟಕ್ಕೆ ನಾವೇ ನಿಯಂತ್ರಣ ಹಾಕಿಕೊಳ್ಳೋಣ. ಮಾತನಾಡುವುದನ್ನು ನಿಲ್ಲಿಸಿ ಎಂದು ತಿಳಿಸಿದರು.

ಶಾಲೆಗಳಲ್ಲಿ ಸಮವಸ್ತ್ರ ಪ್ರಕರಣದ ಅರ್ಜಿಯೂ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಆಗಿದೆ. ಈ ಬಗ್ಗೆ ಮಧ್ಯಾಹ್ನ ಕೇಸ್ ವಿಚಾರಣೆ ನಡೆಯಲಿದೆ. ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಕಾಲೇಜುಗಳಿಗೆ ರಜೆ ಕೊಡಲಾಗಿದೆ. ಹೀಗಾಗಿ ಯಾವ ಸಂಘಟನೆಗಳು ಕೂಡ ವಿದ್ಯಾರ್ಥಿಗಳಿಗೆ ಪ್ರಚೋದನೆ ಕೊಡಬಾರದು. ಕೇಸ್ ಕೋರ್ಟ್‍ನಲ್ಲಿದೆ, ಕೋರ್ಟ್ ತೀರ್ಪಿಗಾಗಿ ಕಾಯೋಣ. ಶಾಂತಿ ಕದಡುವ ಬಗ್ಗೆ ಯಾರು ಕೂಡ ಮಾತಾಡಬಾರದು ಎಂದರು. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

ಸಂಜೆ ಶಿಕ್ಷಣ ಸಚಿವ ಮತ್ತು ಗೃಹ ಸಚಿವರ ಜೊತೆ ಸಭೆ ನಡೆಸಲಾಗುವುದು. ಶಾಲಾ ಕಾಲೇಜುಗಳಲ್ಲಿ ಮೊದಲಿನ ತರಹ ಸೌಹಾರ್ದ ಶಾಂತಿ ತರುವ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಕಾಲೇಜು ರಜೆ ವಿಸ್ತರಣೆ ಬಗ್ಗೆ ಸಂಜೆ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ ಮಹಾದೇವ ವೇಳಿಪ ನಿಧನ

Comments

Leave a Reply

Your email address will not be published. Required fields are marked *