ಜಾತ್ಯಾತೀತ ನಿಲುವು ಶಿಥಿಲವಾಗುತ್ತಿದೆ- JDS ವಿರುದ್ಧ ದತ್ತ ಅಸಮಾಧಾನ

ಬೆಂಗಳೂರು: ಪಕ್ಷದಲ್ಲಿನ ನಿಲುವು ಸ್ಪಷ್ಟವಾಗಿರಬೇಕು. ಕಾಲಕಾಲಕ್ಕೆ ಬದಲಾಗಬಾರದು. ಜಾತ್ಯಾತೀತವಾದ, ಸಾಮಾಜಿಕವಾದ ನ್ಯಾಯಕ್ಕೆ ಬದ್ಧವಾಗಿಬೇಕು. ಆದರೆ ಪಕ್ಷದಲ್ಲಿ ಈ ನಿಲುವು ಶಿಥಿಲವಾಗುತ್ತಿದೆ ಎನ್ನುವ ಗೊಂದಲ ಮತದಾರರನ್ನು ಕಾಡುತ್ತಿದೆ ಎಂದು ಪಕ್ಷದ ಕುರಿತಾಗಿ ಪರೋಕ್ಷವಾಗಿ ಮಾಜಿ ಶಾಸಕ ವೈ.ಎಸ್.ವಿ ದತ್ತ ಬೇಸರ ಹೊರ ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾಜಿ ಶಾಸಕ ವೈ.ಎಸ್.ವಿ ದತ್ತ ಸುದ್ದಿಗೋಷ್ಠಿ ಮಾಡಿ ಮಾತನಾಡಿದ್ದು, ಬಿಜೆಪಿ ವಿರುದ್ಧ ಹೆಚ್ಚು ಹೋರಾಟ ಮಾಡುತ್ತಿಲ್ಲ. ಜಾತ್ಯಾತೀತ ನಿಲುವು ಶಿಥಿಲವಾಗುತ್ತಿದೆ. ಯಾವುದೇ ಕಾರಣಕ್ಕೂ ಸಿದ್ಧಾಂತದಲ್ಲಿ ಬದಲಾವಣೆಯಾಗಬಾರದು. ನಾವು ಯಾಕೆ ಪ್ರಾದೇಶಿಕ ಪಕ್ಷದಲ್ಲಿ ದುಡಿಯುತ್ತಿದ್ದೇವೆ? ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳೆರಡನ್ನೂ ಸಮಾನ ದೂರದಲ್ಲಿ ಇಡಬೇಕು. ಆ ಮೂಲಕ ಜಾತ್ಯಾತೀತ ನಿಲುವಿಗೆ ಬದ್ಧವಾಗಿರಬೇಕು. ಬಿಜೆಪಿ ವಿರುದ್ಧ ಸ್ಪಷ್ಟವಾಗಿ ಹೋರಾಟ ಮಾಡುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆ. ಇದನ್ನ ಪಕ್ಷದ ವೇದಿಕೆಯಲ್ಲಿ ನಾನು ಚರ್ಚಿಸಿದ್ದೇನೆ. ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಸ್ಪಷ್ಟ ನಿಲುವು ಇರಬೇಕು ಎಂದು ಜೆಡಿಎಸ್ ಪಕ್ಷದ ನಿಲುವಿನ ಬಗ್ಗೆ ದತ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾತ್ಯಾತೀತ ವಿಚಾರದಲ್ಲಿ ದೇವೇಗೌಡ ಬಗ್ಗೆ ಯಾವುದೇ ಅನುಮಾನ ಇಲ್ಲ. ಅವರು ಪಕ್ಕಾ ಜಾತ್ಯಾತೀತವಾಗಿ ತೀರ್ಮಾನ ಕೈಗೊಂಡಿದ್ದಾರೆ. ನಮಗೆ ಈಗಲೂ ದೇವೇಗೌಡರ ಬಗ್ಗೆ ಆಶಾಭಾವನೆ ಇದೆ. ನಾನು 20 ವರ್ಷ ಹುಡುಗನಾಗಿದ್ದಾಗಲೇ ದೇವೇಗೌಡರ ಜೊತೆ ಸೇರಿಕೊಂಡವನು. ದೇವೇಗೌಡರ ಜೊತೆ ನನಗೆ ಸಂಪರ್ಕ ಹೆಚ್ಚಾಗಿ ಇದೆ ಎಂದು ಹೇಳುತ್ತಾ ಕುಮಾರಸ್ವಾಮಿ ಹೆಸರು ಹೇಳದೆ ಅವರ ವಿರುದ್ಧ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ

ಬಯಲು ಸೀಮೆಯ ರಾಗಿ ಬೆಳೆಯೋ ರೈತರ ಸಮಸ್ಯೆ ಗಂಭೀರವಾಗಿದೆ. ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಕಡು ಕಷ್ಟ ಅನುಭವಿಸುವಂತಾಗಿದೆ. ನಮ್ಮ ಜಿಲ್ಲೆ ರೈತರ ಕರೆದುಕೊಂಡು ಹೋಗಿ, ಚಿಕ್ಕಮಗಳೂರು ಜಿಲ್ಲೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದೆವು. ಆದರೆ ಬೆಂಗಳೂರಿನ ವಿಧಾನಸೌಧದಲ್ಲಿ ಆರ್ಡರ್ ಬೇಂಜ್ ಮಾಡಿಸಿಕೊಳ್ಳಿ ಅಂತ ಜಿಲ್ಲಾಧಿಕಾರಿ ನುಣಿಚಿಕೊಂಡಿದ್ದಾರೆ. ನಮ್ಮ ರೈತ ಮುಖಂಡರು ಒಂದು ತೀರ್ಮಾನ ಮಾಡಿದ್ದಾರೆ. ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಬೇಕಿದೆ. ಅಧಿವೇಶನ ಬರುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿ ಬಂದಿದ್ದೇವೆ. ಸಾಧ್ಯವಾದರೆ ಆಹಾರ ಸಚಿವರ ಭೇಟಿ ಮಾಡಲೂ ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *