ಕಟೀಲು ಶ್ರೀದುರ್ಗಾಪರಮೇಶ್ವರಿಯ ದರ್ಶನ ಪಡೆದ ರಾಕಿಂಗ್ ಸ್ಟಾರ್

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಚಂದನವನದ ನಟ ರಾಕಿಂಗ್ ಸ್ಟಾರ್ ಯಶ್ ಭೇಟಿ ನೀಡಿದರು.

‘ಕೆಜಿಎಫ್-2’ ರಿಲೀಸ್‍ಗೂ ಮುನ್ನ ದೇಗುಲಗಳ ದರ್ಶನ ಮಾಡುತ್ತಿರುವ ಯಶ್ ಇಂದು ದುರ್ಗಾಪರಮೇಶ್ವರಿ ತಾಯಿಯ ದರ್ಶನ ಪಡೆದರು. ಈ ವೇಳೆ ದೇವಸ್ಥಾನದ ವತಿಯಿಂದ ಯಶ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ದುರ್ಗಾಪರಮೇಶ್ವರಿಯ ಸನ್ನಿಧಿಯ ಮುಂದೆ ಕೆಲ ಹೊತ್ತು ಧ್ಯಾನದಲ್ಲಿ ಮಗ್ನರಾಗಿದ್ದ ಯಶ್ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು.

ಯಶ್ ಅವರನ್ನು ಕಂಡು ಅಭಿಮಾನಿಗಳು ಸಹ ಖುಷಿಪಟ್ಟರು. ಅಲ್ಲದೆ ಇಂದು ಯಶ್ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿಕೊಟ್ಟು ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿದ್ದರು. ಈ ವೇಳೆ ನಿರ್ಮಾಪಕ ವಿಜಯ್ ಕಿರಂಗದೂರು ಸಹ ಇದ್ದು, ಕೃಷ್ಣನ ದರ್ಶನ ಪಡೆದುಕೊಂಡಿದ್ದರು. ದೇವರದರ್ಶನ ಮಾಡಿ ರಥಬೀದಿಯಲ್ಲಿ ವಾಪಸಾಗುತ್ತಿದ್ದಂತೆ ಅಭಿಮಾನಿಗಳು ಫೋಟೋಗಳನ್ನು ತೆಗೆಸಿಕೊಂಡು ವಿಶ್ ಮಾಡಿದ್ರು. ಇದನ್ನೂ ಓದಿ: ನಟ ಯಶ್ ಕೃಷ್ಣಮಠಕ್ಕೆ ಭೇಟಿ – ಕನಕ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ

ಈ ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಕುಂಭಾಶಿ ವಿನಾಯಕ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದರು.

Comments

Leave a Reply

Your email address will not be published. Required fields are marked *