‘ಬ್ಲಾಕ್‍ಚೈನ್’ ಮೂಲಕ ಮದುವೆಯಾದ ಭಾರತದ ಮೊದಲ ದಂಪತಿ!

ಮುಂಬೈ: ಭಾರತದಲ್ಲಿ ಇದೇ ಮೊದಲ ಬಾರಿಗೆ ‘ಬ್ಲಾಕ್‍ಚೈನ್ ಮದುವೆ’ಯನ್ನು ಪುಣೆಯ ಮೂಲದ ದಂಪತಿ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ತಮಿಳು ದಂಪತಿ ಮೆಟಾವರ್ಸ್‍ನಲ್ಲಿ ವಿವಾಹವಾಗಿದ್ದು, ಇವರಿಬ್ಬರು ಮಹಾರಾಷ್ಟ್ರ ಮೂಲದ ದಂಪತಿ. ಇವರು ಓಪನ್‍ಸೀ ಪ್ಲಾಟ್‍ಫಾರ್ಮ್‍ನಿಂದ ಬ್ಲಾಕ್‍ಚೈನ್ ತಂತ್ರಜ್ಞಾನದ ಮೂಲಕ ಮದುವೆಯಾಗಿದ್ದಾರೆ. ಇದರಲ್ಲಿ ಕುತೂಹಲಕಾರಿಯಾಗಿದ ವಿಷಯವೆಂದರೆ ಇದು ಭಾರತದ ಮೊದಲ ‘ಬ್ಲಾಕ್‍ಚೈನ್ ಮದುವೆ’ಯಾಗಿದೆ. ಇದನ್ನೂ ಓದಿ: ಡಿವೋರ್ಸ್ ಹೆಚ್ಚಾಗಲು ಟ್ರಾಫಿಕ್ ಸಮಸ್ಯೆಯೂ ಕಾರಣವಾಗಿದೆ: ಅಮೃತಾ ಫಡ್ನವೀಸ್

ಏನಿದು?
ಲಿಂಕ್ಡ್ಇನ್ ಪೋಸ್ಟ್ ನ ಪ್ರಕಾರ, ಕಳೆದ ವರ್ಷ ನವೆಂಬರ್‍ನಲ್ಲಿ ಶ್ರುತಿ ನಾಯರ್ ಮತ್ತು ಅನಿಲ್ ನರಸಿಪುರಂ ಕಾನೂನುಬದ್ಧವಾಗಿ ಮದುವೆಯಾಗಿದ್ದರು. ನಂತರ ಬ್ಲಾಕ್‍ಚೈನ್ ಮದುವೆ ಮೂಲಕ ತಮ್ಮ ಸಂಬಂಧವನ್ನು ಇನ್ನೂ ಗಟ್ಟಿಪಡಿಸಿಕೊಂಡಿದ್ದಾರೆ. ದಂಪತಿ ‘Ethereum ಸ್ಮಾರ್ಟ್ ಒಪ್ಪಂದ‘ದ ಮೂಲಕ ಮದುವೆಯನ್ನು ಮಾಡಿಕೊಂಡಿದ್ದಾರೆ.

ಅನಿಲ್ ನರಸಿಪುರಂ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದು, 2021ರ ನವೆಂಬರ್ 15 ರಂದು ಶ್ರುತಿ ನಾಯರ್ ಮತ್ತು ನಾನು ಮದುವೆಯಾದೆವು! ನಮ್ಮ ಮದುವೆ ಕೋವಿಡ್ ಸಮಯದಲ್ಲಿ ಆಗಿತ್ತು. ಅದಕ್ಕೆ ನಮ್ಮ ಮದುವೆಯನ್ನು ಅದ್ದೂರಿಯಾಗಿ ಮಾಡುವ ಬದಲು ಮದುವೆಯನ್ನು ಕಾನೂನಿನ ಪ್ರಕಾರ ನೋಂದಾಯಿಸಿಕೊಳ್ಳಲಾಯಿತು. ಬ್ಲಾಕ್‍ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ನಾವು ನಿರ್ಧರಿಸಿದ್ದೆವು ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

ದಂಪತಿ ತಮ್ಮ ವಿವಾಹದ ಪ್ರತಿಜ್ಞೆಯನ್ನು ಓದಿದ್ದು, ನಾವು ಜನಗಳಿಗೆ ಈ ರೀತಿ ಮದುವೆಯೇ ಸರಿ ಎಂದು ಯಾವುದೇ ದೊಡ್ಡ ಭರವಸೆಗಳನ್ನು ನೀಡುವುದಿಲ್ಲ. ಆದರೆ ನಾವು ಈ ರೀತಿಯ ನಿರ್ಧಾರಕ್ಕೆ ಬರಲು ತುಂಬಾ ಆಲೋಚನೆಗಳನ್ನು ಮಾಡಿದ್ದೇವೆ. ನಮ್ಮ ನಡುವೆಯೂ ಹಲವು ಭಿನ್ನಾಭಿಪ್ರಾಯಗಳು ಎದುರಾಯಿತು. ಆದರೂ ನಾವು ಈ ನಿರ್ಧಾರ ಮಾಡಿದ್ದೇವೆ. ಇಡೀ ಜಗತ್ತು ನಮ್ಮನ್ನು ನೋಡಬೇಕು ಎಂದು ನಾವು ಬಯಸುವುದಿಲ್ಲ. ನಾವಿಬ್ಬರು ಪರಸ್ಪರರ ಪಕ್ಕದಲ್ಲಿದ್ದು, ಕೈಜೋಡಿಸಿ ಈ ಸಾಹಸದ ಕೆಲಸಕ್ಕೆ ಕೈ ಹಾಕಲು ಮುಂದಾಗಿದ್ದೆವು. 15 ನಿಮಿಷಗಳಲ್ಲಿ ಬ್ಲಾಕ್‍ಚೈನ್ ಮದುವೆ ಸಮಾರಂಭವು ಮುಕ್ತಾಯವಾಯಿತು ಎಂದು ವಿವರಿಸಿದರು. ಇದನ್ನೂ ಓದಿ: ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ: ಸಿಎಂ ಇಬ್ರಾಹಿಂ

ಇಟಿಎಚ್ ಬ್ಲಾಕ್‍ಚೈನ್‍ನಲ್ಲಿ ಮದುವೆಯು, ದಂಪತಿ ಪರಸ್ಪರ ಬದ್ಧತೆ ಮತ್ತು ಸಾರ್ವಜನಿಕ ದಾಖಲೆಯಾಗಿದೆ ಎಂದು ಅನಿಲ್ ತಮ್ಮ ಲಿಂಕ್ಡ್ಇನ್  ಪ್ರೊಫೈಲ್‍ನಲ್ಲಿ ಬರೆದಿದ್ದಾರೆ.

Comments

Leave a Reply

Your email address will not be published. Required fields are marked *