ಹಿಜಬ್ ವಿರುದ್ಧ ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್ ಘೋಷಣೆ ಕೂಗುತ್ತ ಆಗಮಿಸಿದ ವಿದ್ಯಾರ್ಥಿಗಳು

ಉಡುಪಿ: ನಗರದ ಮಹಿಳಾ ಸರ್ಕಾರಿ ಪಿಯು ಕಾಲೇಜಿನಲ್ಲಿ ಆರಂಭವಾದ ಹಿಜಬ್ ಗಲಾಟೆ ಕುಂದಾಪುರ ಸರ್ಕಾರಿ ಕಾಲೇಜಿಗೆ ವ್ಯಾಪಿಸಿತ್ತು. ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಗಿರಕಿ ಹೊಡೆಯುತ್ತಿದ್ದ ಗಲಾಟೆ ಖಾಸಗಿ ಕಾಲೇಜಿಗೆ ತಲುಪಿದೆ.

ಒಂದುವರೆ ತಿಂಗಳಿಂದ ಉಡುಪಿಯಲ್ಲಿ ಹಿಜಬ್ ಗಲಾಟೆ ನಡೆಯುತ್ತಿದೆ. ಸರ್ಕಾರದ ಆದೇಶವನ್ನು ಧಿಕ್ಕರಿಸಿ ವಿದ್ಯಾರ್ಥಿನೀಯರು ಕಾಲೇಜಿಗೆ ಬರುತ್ತಿದ್ದಾರೆ. ಇದರ ವಿರುದ್ಧ ಕುಂದಾಪುರದ ಸರ್ಕಾರಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕ್ಲಾಸಿನಲ್ಲಿ ಕುಳಿತುಕೊಂಡು ತಿರುಗೇಟು ನೀಡಿದ್ದರು. ಇದೀಗ ವಿವಾದ ಖಾಸಗಿ ಕಾಲೇಜಿಗೂ ಅಂಟಿದೆ. ಇದನ್ನೂ ಓದಿ: ಕಾಲೇಜುಗಳಿಗೆ ಯಾರೂ ಹಿಜಬ್, ಕೇಸರಿ ಶಾಲು ಧರಿಸಿ ಬರುವಂತಿಲ್ಲ: ಆರಗ ಜ್ಞಾನೇಂದ್ರ

ಕುಂದಾಪುರದ ಭಂಡಾರ್ಕರ್ಸ್ ಖಾಸಗಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲುಗಳ ಜೊತೆ ಬಂದಿದ್ದರು. ರಸ್ತೆಯಲ್ಲಿ ನಡೆದುಕೊಂಡು ಕಾಲೇಜಿಗೆ ಬರುತ್ತಾ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ. ಖಾಸಗಿ ಕಾಲೇಜು ಆಗಿರುವುದರಿಂದ ಆಡಳಿತ ಮಂಡಳಿ ಕೇಸರಿ ತೊಟ್ಟು ಒಳಗೆ ಪ್ರವೇಶವಿಲ್ಲ ಎಂದು ಖಡಕ್ ಸೂಚನೆ ನೀಡಿದೆ. ಬಳಿಕ ವಿದ್ಯಾರ್ಥಿಗಳು ಶಾಲು ತೆಗೆದು ತಮ್ಮ ತಮ್ಮ ತರಗತಿಗಳಿಗೆ ತೆರಳಿದ್ದಾರೆ. ಇದನ್ನೂ ಓದಿ: ನಿಮಗೆ ಪ್ರವೇಶವಿಲ್ಲ – ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಗೇಟ್‍ನಲ್ಲೇ ತಡೆದ ಪ್ರಿನ್ಸಿಪಾಲ್

ಹಿಜಾಬ್‌ ವಿವಾದದ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ,  ಧರ್ಮ ಆಚರಣೆ ಮಾಡಲು ಶಾಲಾ-ಕಾಲೇಜುಗಳು ಇಲ್ಲ. ಈ ಬಗ್ಗೆ ಆಡಳಿತ ಮಂಡಳಿಗಳು ಕ್ರಮವಹಿಸಬೇಕು. ಧರ್ಮದ ಪೂಜೆ ಮಾಡಲು ದೇವಾಲಯ, ಮಸೀದಿ, ಚರ್ಚ್ ಇವೆ. ಅಲ್ಲಿ ಬೇಕಾದಾರೆ ಇದನ್ನು ಮಾಡಲಿ. ಆದರೆ ಶಾಲಾ, ಕಾಲೇಜಿನ ವಾತಾವರಣದಲ್ಲಿ ಇಂತಹ ಸಂಘರ್ಷಗಳು ಆಗಬಾರದು. ಎಲ್ಲರೂ ಸೇರಿ ಭಾರತ ಮಾತೆಯ ಮಕ್ಕಳು ಎಂದು ವ್ಯಾಸಂಗಕ್ಕೆ ಬರಬೇಕು ಎಂದು ಸಲಹೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *