ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ

ಕೋಲ್ಕತ್ತಾ: 15ನೇ ಆವೃತ್ತಿ ಐಪಿಎಲ್ ಆಟಗಾರರ ಹರಾಜಿನ ಅಂತಿಮ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿರುವ ಮನೋಜ್ ತಿವಾರಿ ಹೆಸರು ಕಾಣಿಸಿಕೊಂಡಿದೆ.

ಹೌದು ತಿವಾರಿ ಭಾರತದ ಪರ ಆಡಿದ್ದರು, ಅಲ್ಲದೆ ಐಪಿಎಲ್‍ನಲ್ಲಿ ಕೂಡ ಮಿಂಚಿದ್ದರು. ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿದ್ದಾರೆ. ಇದೀಗ ಫೆ.12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆಟಗಾರರ ಹರಾಜಿನ ಅಂತಿಮ ಪಟ್ಟಿಯಲ್ಲಿ 50 ಲಕ್ಷ ಮೂಲಬೆಲೆಯೊಂದಿಗೆ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಐಪಿಎಲ್ ಹರಾಜು – 590 ಆಟಗಾರರಿಗೆ ಫೈನಲ್‌ ಪಟ್ಟಿಯಲ್ಲಿ ಸ್ಥಾನ

ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ತಿವಾರಿ ಡೆಲ್ಲಿ ಕಾಪಿಟಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಪುಣೆ ಸೂಪರ್ ಜೈಂಟ್ಸ್ ಪರ ಒಟ್ಟು 98 ಪಂದ್ಯಗಳಿಂದ 1,695 ರನ್ ಸಿಡಿಸಿದ್ದಾರೆ. ಕಳೆದ ವರ್ಷ ರಾಜಕೀಯಕ್ಕೆ ಎಂಟ್ರಿಕೊಟ್ಟ ತಿವಾರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಅಭ್ಯರ್ಥಿಯಾಗಿ ಶಿಬ್‍ಪು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ ಇದೀಗ ಕ್ರೀಡಾ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಬ್ಯಾಟರ್ ಆಗುವುದಕ್ಕಿಂತಲೂ ಆಲ್‌ರೌಂಡರ್ ಆಗಿ ಆಡಲು ಬಯಸುತ್ತೇನೆ: ಹಾರ್ದಿಕ್ ಪಾಂಡ್ಯ

ಈ ಮದ್ಯೆ ಇದೀಗ 2022ರ ಐಪಿಎಲ್‍ನಲ್ಲಿ ಆಟಗಾರನಾಗಿ ಮತ್ತೆ ಆಡುವ ಹುಮ್ಮಸ್ಸಿನಲ್ಲಿ ಹರಾಜಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದರು. ಇದೀಗ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ತಿವಾರಿಯನ್ನು ಹರಾಜಿನಲ್ಲಿ ಯಾವ ತಂಡ ಖರೀದಿಸಲು ಮುಂದಾಗುವುದು ಎಂಬ ಕುತೂಹಲವಿದೆ. ಇದನ್ನೂ ಓದಿ: ಧೋನಿ, ವಿಕ್ರಮ್ ಫೋಟೋ ವೈರಲ್

15ನೇ ಆವೃತ್ತಿ ಐಪಿಎಲ್ ಹರಾಜಿಗೆ ಆಟಗಾರರ ಅಂತಿಮ ಪಟ್ಟಿ ಬಿಡುಗಡೆಯಾಗಿದೆ. ಒಟ್ಟು 590 ಆಟಗಾರರು ಅಂತಿಮಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, 2 ಕೋಟಿ ರೂ. ಮೂಲಬೆಲೆಗೆ 48 ಆಟಗಾರರು, 1.5 ಕೋಟಿಗೆ 20 ಆಟಗಾರರು, 1 ಕೋಟಿಗೆ 34 ಆಟಗಾರರು ಹರಾಜಿನಲ್ಲಿದ್ದಾರೆ. ಒಟ್ಟು 370 ಭಾರತೀಯ ಆಟಗಾರರು ಮತ್ತು 220 ಇತರ ದೇಶಗಳ ಆಟಗಾರರು ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

 

Comments

Leave a Reply

Your email address will not be published. Required fields are marked *