‘ನಾವು ಬಿಗ್‍ಬಿ ಅಭಿಮಾನಿಗಳು’ ಎಂದ ಸುಜೋಯ್ ಘೋಷ್ – ಕುರ್ತಾ ಬಗ್ಗೆ ಪ್ರಶ್ನಿಸಿದ ಅಭಿಷೇಕ್ ಬಚ್ಚನ್

ಮುಂಬೈ: ಬಾಲಿವುಡ್ ನಿರ್ಮಾಪಕ ಸುಜೋಯ್ ಘೋಷ್ ಸೋಶಿಯಲ್ ಮೀಡಿಯಾದಲ್ಲಿ ಬಿಗ್‍ಬಿ ರೀತಿ ಪೋಸ್ ಕೊಟ್ಟ ಹಳೆ ಫೋಟೋ ಶೇರ್ ಮಾಡಿ, ನಾವು ಅಮಿತಾಬ್ ಬಚ್ಚನ್ ಅಭಿಮಾನಿಗಳು ಎಂದು ಬರೆದುಕೊಂಡಿದ್ದರು. ಆ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಅಭಿಷೇಕ್ ಬಚ್ಚನ್, ಸುಜೋಯ್ ಧರಿಸಿದ್ದ ಕುರ್ತಾ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದಾರೆ.

ಸುಜೋಯ್ ಘೋಷ್ ಅವರು ತಮ್ಮ ಹಳೆಯ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ನನ್ನ ಹಳೆಯ ಫೋಟೋ ಸಿಕ್ಕಿದೆ. ಈ ಫೋಟೋವನ್ನು ‘ತ್ರಿಶೂಲ್’ ಸಿನಿಮಾ ನೋಡಿದ ನಂತರ ತೆಗೆಸಿಕೊಳ್ಳಲಾಗಿತ್ತು. ಆ ಸಿನಿಮಾ ನೋಡಿದ ಮೇಲೆ ನಾವೆಲ್ಲರೂ ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಿದ್ದೆವು. ನಾವು ಅಮಿತಾಬ್ ಬಚ್ಚನ್ ಅಭಿಮಾನಿಗಳು. ಈಗಲೂ ಕೂಡ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ‘ನನ್ನ ಹೆಸರು ಸಲ್ಮಾನ್ ಖಾನ್’ ಎಂದು ಹಾಲಿವುಡ್ ನಟನಿಗೆ ಪರಿಚಯ ಮಾಡಿಕೊಂಡ ಸಲ್ಲು

ಸುಜೋಯ್ ಘೋಷ್ ಟ್ವೀಟ್‍ಗೆ ಉತ್ತರಿಸಿದ ಅಮಿತಾಬ್ ಅವರ ಪುತ್ರ ನಟ ಅಭಿಷೇಕ್, ‘ಇದು ಚೆನ್ನಾಗಿದೆ. ಆದರೆ ದಯವಿಟ್ಟು ಕುರ್ತಾ ಬಗ್ಗೆ ವಿವರಿಸಿ ಎಂದು ಕತೂಹಲದಿಂದ ಕೇಳಿದ್ದಾರೆ. ಅದಕ್ಕೆ ಸುಜೋಯ್, ‘ಶ್ಟೈಲ್ ಬ್ರದರ್ ಶ್ಟೈಲ್’ ಎಂದು ಪ್ರತಿಕ್ರಿಯಿಸಿದ್ದಾರೆ.

ಫೋಟೋದಲ್ಲಿ, ಸುಜೋಯ್ ಅವರು ಕುರ್ಚಿಯ ಮೇಲೆ ಕುಳಿತುಕೊಂಡಿದ್ದು, ಬಿಳಿ ಮತ್ತು ಕಂದು ಬಣ್ಣದ ಬಾಟಿಕ್ ಪ್ರಿಂಟ್ ಕುರ್ತಾವನ್ನು ಧರಿಸಿದ್ದಾರೆ. ಅವರ ಕುತ್ತಿಗೆಯಲ್ಲಿ ಕಪ್ಪು ಬಣ್ಣದ ದಾರ ಧರಿಸಿಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಸುಜೋಯ್ ಅವರ ಟ್ವೀಟ್‍ಗೆ ಬಾಲಿವುಟ್ ನಟಿ ತಾಪ್ಸಿ ಪನ್ನು ಸಹ ಪ್ರತಿಕ್ರಿಯಿಸಿದ್ದಾರೆ.

ಸುಜೋಯ್ ಅವರು, ಈ ಸಿನಿಮಾವನ್ನು ನಾನು ಥಿಯೇಟರ್‌ನಲ್ಲಿ 7 ಬಾರಿ ನೋಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, ನಾನು ನಿಮ್ಮನ್ನು ಮೀರಿಸಿದ್ದೇನೆ ಎಂದು ‘ಹರೇ ರಾಮ ಹರೇ ಕೃಷ್ಣ’ ಸಿನಿಮಾ ದೃಶ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 24,172, ಬೆಂಗಳೂರಿನಲ್ಲಿ 10,692 ಹೊಸ ಪ್ರಕರಣ – 56 ಸಾವು

ಬಿಗ್‍ಬಿ ನಟನೆಯ ‘ತ್ರಿಶೂಲ್’ ಸಿನಿಮಾ 1978 ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ‘ಯಶ್ ಚೋಪ್ರಾ’ ನಿರ್ದೇಶಿಸಿದ್ದರು. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಶಶಿ ಕಪೂರ್ ಮತ್ತು ಸಂಜೀವ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗಲೂ ಸಹ ಈ ಸಿನಿಮಾ ಹಿಂದಿಯ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದು.

Comments

Leave a Reply

Your email address will not be published. Required fields are marked *