ಅವಕಾಶವಾದ ರಾಜಕಾರಣಕ್ಕೆ ಇನ್ನೊಂದು ಹೆಸರು ಇಬ್ರಾಹಿಂ, ಸಿದ್ದರಾಮಯ್ಯ: ಈಶ್ವರಪ್ಪ

ಶಿವಮೊಗ್ಗ: ಅವಕಾಶವಾದ ರಾಜಕಾರಣಕ್ಕೆ ಇನ್ನೊಂದು ಹೆಸರು ಸಿದ್ದರಾಮಯ್ಯ ಹಾಗೂ ಸಿ.ಎಂ. ಇಬ್ರಾಹಿಂ ಎಂದು ಗ್ರಾಮೀಣಾಭಿವೃದ್ಧಿ ಕೆ.ಎಸ್. ಈಶ್ವರಪ್ಪ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಸಿ.ಎಂ.ಇಬ್ರಾಹಿಂ ಇಬ್ಬರು ಒಂದೇ. ಇಬ್ರಾಹಿಂ ಅವರು ಪರಿಷತ್‍ನಲ್ಲಿ ವಿಪಕ್ಷ ಸ್ಥಾನ ಸಿಗಲಿಲ್ಲ ಎಂದು ಕಾಂಗ್ರೆಸ್‍ನ್ನು ತೊರೆದು ಜೆಡಿಎಸ್‍ಗೆ ಹೋಗುತ್ತಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರೂ ಅಷ್ಟೇ. ವಿಪಕ್ಷ ಸ್ಥಾನ, ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಅಂದರೆ ಅವರು ಸಹ ಪಕ್ಷದಲ್ಲಿ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಹಾಗೂ ಇಬ್ರಾಹಿಂ ಅವಳಿ, ಜವಳಿ ಇದ್ದ ಹಾಗೆ. ಅವರಿಗೆ ಆ ಪಕ್ಷ, ಈ ಪಕ್ಷ ಅಂತಾ ಇಲ್ಲ. ಅವರಿಬ್ಬರಿಗೆ ಯಾವ ಪಕ್ಷದಲ್ಲಿ ಅಧಿಕಾರ ಸಿಗುತ್ತದೋ ಆ ಪಕ್ಷದಲ್ಲಿ ಇರುವಂತಹ ಜನ ಅವರು. ಹಾಗಾಗಿ ಇಬ್ರಾಹಿಂ ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬ ಬಗ್ಗೆ ಮಹತ್ವ ಇಲ್ಲ. ಸಿದ್ದರಾಮಯ್ಯ ಅವರು ಯಾವ ಪಕ್ಷಕ್ಕೆ ಹೋಗ್ತಾರೋ ಅದಕ್ಕೂ ಮಹತ್ವ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸಿಬ್ಬಂದಿಯಿಂದ ಗ್ರಾ.ಪಂ ಕಚೇರಿಗೆ ಬೀಗ

siddaramaiah

ಶೀಘ್ರದಲ್ಲೇ ತಾಪಂ, ಜಿಪಂ ಚುನಾವಣೆ: ತಾ.ಪಂ. ಹಾಗೂ ಜಿ.ಪಂ. ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ತಾ.ಪಂ. ಹಾಗೂ ಜಿ.ಪಂ. ಚುನಾವಣೆಯನ್ನು ರಾಜ್ಯ ಸರ್ಕಾರದಿಂದ ಆದಷ್ಟು ಬೇಗ ಮಾಡಬೇಕು ಎನ್ನುವ ಉದ್ದೇದಿಂದ ಕಳೆದ ಬಾರಿಯೇ ಚುನಾವಣೆ ಆಯೋಗಕ್ಕೆ ಚುನಾವಣೆ ನಡೆಸಲು ಮನವಿ ಸಲ್ಲಿಸಿದ್ದೇವೆ ಎಂದರು.

ಮೀಸಲಾತಿ ಹಾಗು ಕ್ಷೇತ್ರ ವಿಂಗಡಣೆ ಸರಿ ಇಲ್ಲ ಎಂದು ಸುಮಾರು 780 ಅಬ್ಜೇಕ್ಷನ್‍ಗಳು ಬಂದಿದ್ದವು. ಇದರ ತಿದ್ದುಪಡಿಗಾಗಿ ಲಕ್ಷ್ಮಿನಾರಾಯಣ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೇವೆ. ಡಿಲಿಮಿಟೇಷನ್ ರಿಪೋರ್ಟ್ ಅನ್ನು ಎಲ್ಲಾ ಜಿಲ್ಲೆಗಳಿಂದ ಸಂಗ್ರಹ ಮಾಡುತ್ತಿದ್ದಾರೆ. ಆ ರಿಪೋರ್ಟ್ ಬರುತ್ತಿದ್ದ ಹಾಗೆ ಮೀಸಲಾತಿಯನ್ನು ಬೇಗ ಮಾಡಿ ಆದಷ್ಟು ಬೇಗ ತಾ.ಪಂ. ಹಾಗೂ ಜಿ.ಪಂ. ಚುನಾವಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್

Comments

Leave a Reply

Your email address will not be published. Required fields are marked *