ಮಾಜಿ ಆರ್‌ಸಿಬಿ ಆಟಗಾರನ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ

ನವದೆಹಲಿ: ದಂಡ ಕಟ್ಟಲು ನಿರಾಕರಿಸಿದ್ದಕ್ಕೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಐಪಿಎಲ್ ಆಟಗಾರ ವಿಕಾಸ್ ಟೋಕಾಸ್ ಆರೋಪಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಹಮ್ಮದ್‍ಪುರದಲ್ಲಿರುವ ನನ್ನ ಮನೆಗೆ ಬರುತ್ತುದ್ದೆ. ಈ ವೇಳೆ ಮಾಸ್ಕ್ ಧರಿಸಿರಲಿಲ್ಲ. ಇದನ್ನು ನೋಡಿದ ಪೊಲೀಸ್ ಸಿಬ್ಬಂದಿ ಮೊಹಮ್ಮದ್‍ಪುರ ಗ್ರಾಮದ ಹೊರಗೆ ಬ್ಯಾರಿಕೇಡ್‍ಗಳ ಬಳಿ ನನ್ನನ್ನು ತಡೆದರು. ಮಾಸ್ಕ್ ಧರಿಸಿದ್ದಕ್ಕೆ 2,000 ರೂ. ದಂಡ ನೀಡಲು ಒತ್ತಾಯಿಸಿದರು. ಆದರೆ ನಾನು ನನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡು, ದಂಡ ಪಾವತಿಸಲು ನಿರಾಕರಿಸಿದೆ ಎಂದರು.

ಆದರೆ ಅವರು ನನ್ನ ಕಾರಿನೊಳಗೆ ಕುಳಿತು ನಿಂದಿಸಿದರು. ಅವರಲ್ಲಿ ಒಬ್ಬಾತ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಪೊಲೀಸ್ ಠಾಣೆಗೂ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಡಿಸಿಪಿ ಸೌತ್ ವೆಸ್ಟ್ ಗೌರವ್ ಶರ್ಮಾ ಮಾತನಾಡಿ, ವಿಕಾಸ್ ಟೋಕಾಸ್ ಅವರನ್ನು ತಪಾಸಣೆಗಾಗಿ ನಿಲ್ಲಿಸಲಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿರಲಿಲ್ಲ. ಇದಕ್ಕೆ ಸಹಕರಿಸುವ ಬದಲು, ಅವರು ದುರಹಂಕಾರದಿಂದ ವರ್ತಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಲಾಗಿತ್ತು. ಆದರೆ ವಿಕಾಸ್ ಅವರು ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನು ತಡೆಯಲು ಹೋದಾಗ ಆಕಸ್ಮಿಕವಾಗಿ ಅವರಿಗೆ ಗಾಯಾಗಳಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

ವಿಕಾಸ್ ಟೋಕಾಸ್ ಅವರು ಬಲಗೈ ಬೌಲರ್ ಆಗಿರುವ ಅವರು ಆರ್‌ಸಿಬಿ ತಂಡದ ಪರ ಐಪಿಎಲ್‍ನಲ್ಲಿ ಆಡಿದ್ದರು. ಇದನ್ನೂ ಓದಿ: ಹೂ ಕಟ್ಟುತ್ತಿದ್ದ ಯುವತಿ ಈಗ ಪಿಎಸ್‍ಐ..!

Comments

Leave a Reply

Your email address will not be published. Required fields are marked *