ಬಿಜೆಪಿಯವರು ಎಂಜಲು ಹಚ್ಚಿ ಮಾಡಿದ ಪ್ರಚಾರದಿಂದ ಕೊರೊನಾ ಹೆಚ್ಚಳ: ಅಖಿಲೇಶ್

ಲಕ್ನೋ: ಬಿಜೆಪಿ ಕಾರ್ಯಕರ್ತರು ಕರಪತ್ರವನ್ನು ಎಂಜಲು ಹಚ್ಚಿ ಹಂಚುತ್ತಿದ್ದಾರೆ. ಇದರಿಂದಾಗಿ ಕೊರೊನಾ ಸೋಂಕನ್ನು ಹರಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರ ಮಾಡುವಾಗ ಬಿಜೆಪಿ ಅವರು ಕರಪತ್ರಗಳನ್ನು ಎಂಜಲು ಹಚ್ಚಿ ನೀಡುತ್ತಿದ್ದಾರೆ. ಇದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುತ್ತಿದೆ. ಈ ಬಗ್ಗೆ ಕೂಡಲೇ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಉತ್ತರ ಪ್ರದೇಶದ ಚುನಾವಣೆ ನಿಮಿತ್ತ ಪ್ರಚಾರ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೌತಮ ನಗರ ಜಿಲ್ಲೆಗೆ ಆಗಮಿಸಿದ್ದರು. ಬಿಜೆಪಿ ಕಾರ್ಯಕರ್ತರೊಂದಿಗೆ ಸೇರಿ ಮನೆ-ಮನೆ ಪ್ರಚಾರ ನಡೆಸಿದ್ದರು. ಅವರು ಕರಪತ್ರಗಳನ್ನು ತೆಗೆಯುವಾಗ ಅದಕ್ಕೆ ಎಂಜಲು ಹಚ್ಚಿದ್ದ ವಿಡಿಯೋವೊಂದನ್ನು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನೂ ಓದಿ: ಬೈಕ್ ಅಪಘಾತ – ಟಿಎಂಸಿ ನಾಯಕ ಮದನ್ ಮಿತ್ರಾಗೆ ಗಾಯ

Akhilesh Yadav

ಇದೇ ಸಂದರ್ಭದಲ್ಲಿ ಅಖಿಲೇಶ್‌ ಯಾದವ್‌ ಮೈತ್ರಿ ಬಗ್ಗೆ ಮಾತನಾಡಿದ ಅವರು, ಎಸ್‍ಪಿ ಮತ್ತು ಆರ್‍ಎಲ್‍ಡಿ ಮೈತ್ರಿಯಿಂದ ರಾಜ್ಯದಲ್ಲಿ ನಕಾರಾತ್ಮಕ ಆಡಳಿತ ಕೊನೆಗೊಂಡು, ಸಕಾರಾತ್ಮಕ ಆಡಳಿತ ಬರುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ನಟ ಕಂ ನಿರ್ದೇಶಕನ ವಿರುದ್ಧ ಅತ್ಯಾಚಾರ ಪ್ರಕರಣ

Comments

Leave a Reply

Your email address will not be published. Required fields are marked *