ಯಕ್ಷಗಾನ ವೇಷಧಾರಿ ಮೈಮೇಲೆ ದೈವದ ಆವಾಹನೆ

ಉಡುಪಿ: ಯಕ್ಷಗಾನದ ಪ್ರದರ್ಶನ ವೇಳೆ ವೇಷಧಾರಿ, ಮೈ ಮೇಲೆ ದೈವದ ಆವಾಹನೆ ಆಗಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿಯಲ್ಲಿ ನಡೆದಿದೆ.

ಹೆಬ್ರಿ ಸಮೀಪದ ಬೆಳ್ಪಾದೆ ಎಂಬಲ್ಲಿ ಮಡಮಕ್ಕಿ ಮೇಳದವರಿಂದ ಮಡಮಕ್ಕಿ ಕ್ಷೇತ್ರ ಮಹಾತ್ಮೆ ನಡೆಯುತ್ತಿತ್ತು. ಈ ವೇಳೆ ಮೇಳದ ಕಲಾವಿದ ವೀರಭದ್ರ ಸ್ವಾಮಿ ಎಂಬುವವರು ಕೋಟೆರಾಯನ ವೇಷ ಧರಿಸಿ, ರಂಗಸ್ಥಳ ಪ್ರವೇಶ ಆಗುತ್ತಿದ್ದರು. ಈ ವೇಳೆ ದೈವದ ಆವಾಹನೆಯಾಗಿದೆ. ಹತ್ತು ನಿಮಿಷ ವರೆಗೆ ಪ್ರೇಕ್ಷಕರು ಪಾತ್ರದಾರಿಯನ್ನು ಹಿಡಿದುಕೊಂಡರೂ ಆವೇಶ ನಿಲ್ಲಲಿಲ್ಲ. ಮೇಳದ ಚೌಕಿಯಿಂದ ದೇವರ ತೀರ್ಥ ತಂದು ಪ್ರೋಕ್ಷಣೆ ಮಾಡಿಸಿದಾಗ ಕಲಾವಿದ ಮೊದಲ ಸ್ಥಿತಿಗೆ ಬಂದಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ 

ಈ ಘಟನೆಯಿಂದ ಯಕ್ಷಗಾನ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರು ಕೆಲಕಾಲ ಆತಂಕಪಡುವಂತಾಗಿದೆ. ಸುಮಾರು 15 ನಿಮಿಷಗಳ ಕಾಲ ಪ್ರಸಂಗವನ್ನು ನಿಲ್ಲಿಸಲಾಯ್ತು. ತೀರ್ಥ ಪ್ರೋಕ್ಷಣೆ ಮಾಡಿದ ನಂತರ ಕಲಾವಿದರು ರಂಗಸ್ಥಳ ಹತ್ತಿದ್ದಾರೆ. ನಂತರ ಕಲಾವಿದ ಮೇಳದ ಮುಖ್ಯಸ್ಥರ ಜೊತೆ ಮಾತನಾಡುತ್ತಾ, ನನಗೆ ಕೆಲಕಾಲ ಏನಾಯ್ತು ಎಂಬುದೇ ಗೊತ್ತಾಗಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಗುವಾದ ಬಳಿಕ ಡಿಪ್ರೆಷನ್‌ಗೆ ಒಳಗಾಗಿದ್ರಾ ಬಿಎಸ್‌ವೈ ಮೊಮ್ಮಗಳು?

Comments

Leave a Reply

Your email address will not be published. Required fields are marked *