ಕೃನಾಲ್ ಪಾಂಡ್ಯ ಟ್ವಿಟ್ಟರ್ ಖಾತೆ ಹ್ಯಾಕ್ – ಬಿಟ್‍ಕಾಯಿನ್‍ಗೆ ಬೇಡಿಕೆ ಇಟ್ಟ ಹ್ಯಾಕರ್

ನವದೆಹಲಿ: ಟೀಂ ಇಂಡಿಯಾ ಆಲ್‍ರೌಂಡರ್ ಕೃನಾಲ್ ಪಾಂಡ್ಯ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದ್ದು, ಹ್ಯಾಕರ್‌ರೊಬ್ಬ ಅವರಿಗೆ ಬಿಟ್‍ಕಾಯಿನ್‍ಗೆ ಬೇಡಿಕೆಯಿಟ್ಟಿದ್ದಾನೆ.

ಹ್ಯಾಕರ್, ಕೃನಾಲ್‍ರವರ ಖಾತೆಯಿಂದ ಟ್ವೀಟ್ ಮಾಡಿ, ಬಿಟ್‍ಕಾಯಿನ್‍ಗಳಿಗಾಗಿ ನಿಮ್ಮ ಖಾತೆಯನ್ನು ಮಾರಾಟ ಮಾಡುತ್ತಿದ್ದೇನೆ ಎಂದಿದ್ದಾನೆ. ಸುಮಾರು ಬೆಳಗ್ಗೆ 7:31ಕ್ಕೆ ಹ್ಯಾಕ್ ಸಂಭವಿಸಿದ ನಂತರ ಹ್ಯಾಕರ್ ಮತ್ತೆ ರಿಟ್ವೀಟ್ ಮಾಡಿ, ಅವರಿಗೆ ಧನ್ಯವಾದ ತಿಳಿಸಿದ್ದಾನೆ.

ಕೃನಾಲ್ ಖಾತೆಯನ್ನು ಹ್ಯಾಕ್ ಮಾಡಿದ ವ್ಯಕ್ತಿ ಕಳೆದ ವರ್ಷ 2020 ರಂದು 100 ಕ್ಕೂ ಹೆಚ್ಚು ಉನ್ನತ ಪ್ರೋಫೈಲ್‌ ಖಾತೆಗಳನ್ನು ಹ್ಯಾಕ್ ಮಾಡಿದ್ದ ಎಂದು ವರದಿಯಾಗಿದೆ. ಇದನ್ನೂ ಓದಿ:  ಅಜ್ಜಿ ಜೊತೆ ಶ್ರೀವಲ್ಲಿ ಹಾಡಿಗೆ ಹೆಜ್ಜೆಹಾಕಿದ ಪಾಂಡ್ಯ

ಕೃನಾಲ್ ಕೊನೆಯ ಬಾರಿಗೆ ಬರೋಡಾ ತಂಡವನ್ನು ಪ್ರತಿನಿಧಿಸಿದ್ದು, ವಿಜಯ ಹಜಾರೆ ಟ್ರೋಫಿ 2022ರಲ್ಲಿ ಕಾಣಿಸಿಕೊಂಡಿದ್ದರು. ಭಾರತ ತಂಡದ ಅಂಡರ್-19 ಟಿ-20ಯಲ್ಲಿ 5 ಟಿ-20 ಪಂದ್ಯಗಳಲ್ಲಿ ಆಡಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜು ಮುಂದಿನ ತಿಂಗಳು ನಡೆಯಲಿದೆ.

ಮುಂಬೈ ಇಂಡಿಯನ್ಸ್ ತಂಡವು ಈ ವರ್ಷದ ಮೆಗಾ ಹರಾಜಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಇಬ್ಬರೂ ಪಾಂಡ್ಯ ಸಹೋದರರನ್ನು ಉಳಿಸಿಕೊಂಡಿಲ್ಲ. ಹಾರ್ದಿಕ್ ಈಗಾಗಲೇ ಹೊಸ ತಂಡ ಅಹಮದಾಬಾದ್‍ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ನಾಯಕನಾಗಿ ನೇಮಕಗೊಂಡಿದ್ದಾರೆ.

ಫೆಬ್ರವರಿ 12 ಮತ್ತು 13 ರಂದು 2 ದಿನಗಳ ಕಾಲ ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ. ಭಾರತದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ನೋಡಿದರೆ, ಐಪಿಎಲ್ 2022 ಅನ್ನು ಮತ್ತೆ ದುಬೈಗೆ ಸ್ಥಳಾಂತರಿಸುವ ಲಕ್ಷಣಗಳಿವೆ. ಕಳೆದ ವರ್ಷ ಐಪಿಎಲ್ 2021ರ ಮೊದಲಾರ್ಧವನ್ನು ಭಾರತದಲ್ಲಿ ಆಡಲಾಗಿದ್ದು, ಮತ್ತು ಉಳಿದ ಪಂದ್ಯಗಳು ಯುಎಇಯಲ್ಲಿ ಪೂರ್ಣಗೊಂಡಿತ್ತು. ಇದನ್ನೂ ಓದಿ: ಭಾರತದ ವಿರುದ್ಧ ಸರಣಿ ಗೆದ್ದ ಬಳಿಕ ‘ಜೈ ಶ್ರೀರಾಮ್’ ಎಂದು ಸಂಭ್ರಮಿಸಿದ ಕೇಶವ್ ಮಹಾರಾಜ್

ಈ ವರ್ಷದ ಚುಟುಕು ಕ್ರಿಕೆಟ್ ಹಬ್ಬವನ್ನು ಭಾರತದಲ್ಲಿ ಆಡಿಸಲು ಮುಂದಾಗಿದ್ದು, ಎಲ್ಲ ಪಂದ್ಯಗಳನ್ನು ಮುಂಬೈಯಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.

Comments

Leave a Reply

Your email address will not be published. Required fields are marked *