ಮೆಗಾಸ್ಟಾರ್ ಚಿರಂಜೀವಿಗೆ ಕೊರೊನಾ ಪಾಸಿಟಿವ್

ಹೈದರಾಬಾದ್: ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಈ ಬಗ್ಗೆ ಟ್ವಿಟ್ಟರ್ ಮೂಲಕ ತಿಳಿಸಿರುವ ಚಿರಂಜೀವಿ, ನನಗೆ ಕೋವಿಡ್-19 ಸೋಂಕಿನ ಕೆಲ ಲಕ್ಷಣಗಳು ಕಾಣಿಸಿಕೊಂಡ ಕಾರಣ ಟೆಸ್ಟ್ ಮಾಡಿಸಿದಾಗ ಕಳೆದ ರಾತ್ರಿ ಕೊರೊನಾ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ. ನಾನು ಮನೆಯಲ್ಲೇ ಐಸೋಲೇಷನ್‍ಗೆ ಒಳಗಾಗಿದ್ದೇನೆ. ಕೆಲದಿನಗಳಿಂದ ನನ್ನ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದೀರಿ ಅವರೆಲ್ಲರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ. ಆದಷ್ಟು ಬೇಗ ಗುಣಮುಖಗೊಂಡು ನಿಮ್ಮ ಮುಂದೆ ಬರುತ್ತೇನೆ. ಇದನ್ನೂ ಓದಿ: ನಿಜವಾಗಲೂ ಭಗವಂತ ಪುನೀತ್‍ಗೆ ಬಹಳ ದೊಡ್ಡ ಅನ್ಯಾಯ ಮಾಡಿದ್ದಾನೆ: ಚಿರಂಜೀವಿ

ಚಿರಂಜೀವಿ ಕೆಲದಿನಗಳ ಹಿಂದೆ ಸಂಕ್ರಾಂತಿ ಸಂಭ್ರಮವನ್ನು ತಮ್ಮ ಕುಟುಂಬದೊಂದಿಗೆ ಸಡಗರದಿಂದ ಆಚರಿಸಿದ್ದರು. ಈ ವೇಳೆ ರಾಮ್ ಚರಣ್, ವರುಣ್ ತೇಜ್, ಸಾಯಿ ಧರ್ಮ ತೇಜ್ ಕೂಡ ಈ ಹಬ್ಬದಲ್ಲಿ ಒಟ್ಟಿಗೆ ಸೇರಿ ಸಂಭ್ರಮಿಸಿದ್ದರು. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ

ಚಿರಂಜೀವಿ  ನಟನೆಯ 4 ಸಿನಿಮಾಗಳು ಈಗಾಗಲೇ ಬಿಡುಗಡೆಗಾಗಿ ಸಿದ್ಧಗೊಂಡು ನಿಂತಿದೆ. ಸದ್ಯದಲ್ಲೇ ಆಚಾರ್ಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಏಪ್ರಿಲ್ 1 ರಂದು ಬಿಡುಗಡೆಗೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

Comments

Leave a Reply

Your email address will not be published. Required fields are marked *